ತೆಕ್ಕಟ್ಟೆ: ತೆಕ್ಕಟ್ಟೆಯಿಂದ ಕೊಮೆ ಕಡಲ ತೀರಕ್ಕೆ ಸಂಪರ್ಕ ರಸ್ತೆಯು ರಾ.ಹೆ.66 ಸಂಧಿಸುವಲ್ಲಿ ಮಳೆ ನೀರು ನಿಂತು ಕೆರೆಯಂತಾಗಿದ್ದು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಸುಮಾರು 1.81 ಕೋ. ರೂ.ನಲ್ಲಿ ನಿರ್ಮಾಣವಾದ ರಸ್ತೆಯ ದುಸ್ಥಿತಿ 2019ರಲ್ಲಿ ಚಂಡಮಾರುತ ಅಪಾಯ ಉಪಶಮನ ಯೋಜನೆಯಲ್ಲಿ ತೆಕಟ್ಟೆ ರಾ.ಹೆ.66 ರಿಂದ ಕೊಮೆ ಕಡಲ ತೀರದ ವರೆಗೆ ಸುಮಾರು 1.81 ಕೋ. ರೂ. ವೆಚ್ಚದಲ್ಲಿ ಸುಮಾರು 3 ಕಿ.ಮೀ ರಸ್ತೆ ಸಂಪೂರ್ಣ ಕಾಂಕ್ರೀಟ್ ಕಾಮಗಾರಿಯಾಗಿದೆ.
ಆದರೆ ವಿಪರ್ಯಾಸ ಎನ್ನುವಂತೆ ರಾ.ಹೆ. 66 ಸಂದಿಸುವ ಸುಮಾರು 25 ಮೀಟರ್ ರಸ್ತೆ ಮಾರ್ಗ ಮಾತ್ರ ಚರಂಡಿಯಂತಾಗಿ ನಿತ್ಯ ಪಾದಚಾರಿಗಳು ಹಾಗೂ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸುವಂತಾಗಿರುವುದು ಮಾತ್ರ ವಾಸ್ತವ ಸತ್ಯ.
ಇದನ್ನೂ ಓದಿ:ಮದುವೆಗೆ ಮಾಡಿದ ಸಾಲ ತೀರಿಸಲಾಗಲಿಲ್ಲ ಎಂದು ಮದುವೆಯಾದ ಐದೇ ತಿಂಗಳಲ್ಲಿ ವ್ಯಕ್ತಿ ನೇಣಿಗೆ ಶರಣು
ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.