Advertisement

ಬಂಟ್ವಾಳ: ಹೊಂಡಗಳು ತುಂಬಿದ ರಾ.ಹೆ.ಯಲ್ಲಿ ಸಂಚಾರ ಸರ್ಕಸ್‌!

02:35 AM Jun 30, 2018 | Team Udayavani |

ಬಂಟ್ವಾಳ: ಭಾರೀ ಮಳೆಯಿಂದ ಮಂಗಳೂರು -ಬೆಂಗಳೂರು ರಾ.ಹೆ. ಚಿಂದಿ ಎದ್ದು ಹೋಗಿದೆ. ಹೊಂಡಗಳನ್ನು ತಪ್ಪಿಸಿ ವಾಹನ ಚಲಾಯಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಫರಂಗಿಪೇಟೆಯಿಂದ ಆರಂಭಿಸಿ ತುಂಬೆ, ಶಾಂತಿಅಂಗಡಿ, ಬಿ.ಸಿ. ರೋಡ್‌, ಪಾಣೆಮಂಗಳೂರು, ಮೆಲ್ಕಾರ್‌, ಕಲ್ಲಡ್ಕ, ಮಾಣಿ ತನಕ ಹೆದ್ದಾರಿಯಲ್ಲಿ ಬೃಹತ್‌ ಹೊಂಡಗಳು ಸೃಷ್ಟಿಯಾಗಿದ್ದು, ನಡೆದು ಹೋಗುವುದೂ ಕಷ್ಟ ಸಾಧ್ಯವಾಗಿದೆ. ಬಿ.ಸಿ. ರೋಡ್‌ ಫ್ಲೈ ಓವರ್‌ ಅಡಿಯ ಸರ್ವಿಸ್‌ ರಸ್ತೆಯಲ್ಲಿ ಹಳ್ಳವೇ ಆಗಿದೆ.

Advertisement

ಹೊಂಡಕ್ಕೆ ಬಿದ್ದ ಮೊಬೈಲ್‌!
ಮೆಲ್ಕಾರ್‌ ಸಂಚಾರ ಠಾಣೆಯ ಎದುರು ಆಗಿರುವ ಬೃಹತ್‌ ಹೊಂಡಕ್ಕೆ ಎರಡು ದಿನಗಳ ಹಿಂದೆ ರಾತ್ರಿ ರಿಕ್ಷಾ ಇಳಿದ ಸಂದರ್ಭ ಪ್ರಯಾಣಿಕರ ಕಿಸೆಯಿಂದ ಮೊಬೈಲ್‌ ಹೊಂಡಕ್ಕೆ ಹಾರಿ ಬಿದ್ದಿತ್ತು. ಮಳೆಯಿಂದಾಗಿ ವಿದ್ಯುತ್‌ ಇಲ್ಲದಿದ್ದು, ಹುಡುಕಿದರೂ ಮೊಬೈಲ್‌ ಸಿಕ್ಕಿರಲಿಲ್ಲ. ಅನಂತರ ಠಾಣೆಯ ಜೀಪ್‌ ನ ಬೆಳಕು ಹಾಯಿಸಿ ಹುಡುಕಿದಾಗ ಹತ್ತಿಪ್ಪತ್ತು ನಿಮಿಷಗಳಲ್ಲಿ ಪ್ರಯತ್ನ ಯಶಸ್ವಿಯಾಯಿತು.


ಮನವಿಗೆ ಸ್ಪಂದನವಿಲ್ಲ

ಸಾರ್ವಜನಿಕರು, ವಾಹನ ಚಾಲಕರು, ಸಂಘಟನೆಗಳು ಇಲ್ಲಿನ ಹೊಂಡಗಳನ್ನು ಮುಚ್ಚುವಂತೆ ಮಾಡಿದ ಮನವಿಗೆ ಸಂಬಂಧಪಟ್ಟ ಇಲಾಖೆಯಿಂದ ಸ್ಪಂದನವಿಲ್ಲ. ಕೆಲವರು ಸ್ವಯಂ ಪ್ರೇರಿತವಾಗಿ ಕಲ್ಲು ಮಣ್ಣು ತುಂಬಿಸಿದರೂ ಅದು ಕೆಲವೇ ಗಂಟೆಗಳಲ್ಲಿ ಕೆಸರು ನೀರಾಗಿ ಹರಿದು ಬಿಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next