Advertisement

ರಸ್ತೆ ಸಮಸ್ಯೆ: ಶಿವಬಾಗ್‌ನಲ್ಲಿ  ವಿನೂತನ ಪ್ರತಿಭಟನೆ

10:31 AM Oct 11, 2017 | |

ಕದ್ರಿ: ಶಿವಬಾಗ್‌ ನಲ್ಲಿ ಮಹಾನಗರ ಪಾಲಿಕೆಯು ಕಾಮಗಾರಿ ನಡೆಸುವ ಉದ್ದೇಶದಿಂದ ರಸ್ತೆಯನ್ನು ಅಗೆದು, ಇಂಟರ್‌ಲಾಕ್‌ಗಳನ್ನು ಸರಿಯಾಗಿ ಜೋಡಿಸದೆ ವಾಹನ ಸವಾರರಿಗೆ ಸಮಸ್ಯೆ ಎದುರಾಗುತ್ತಿದೆ ಎಂದು ಆರೋಪಿಸಿ, ಕದ್ರಿ ವಾರ್ಡ್‌ನ ನಾಗರಿಕರು ಅಣಕು ಶವವನ್ನು ಇಟ್ಟು ಮಂಗಳವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. 

Advertisement

ರಸ್ತೆ ಅಗೆದ ಕಾರಣದಿಂದ ಉಂಟಾದ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬದವರು ರಸ್ತೆ ಬದಿಯಲ್ಲಿಯೇ ಶವವನ್ನು ಇರಿಸಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ರೀತಿಯ ಅಣಕು ಪ್ರದರ್ಶನದ ಮೂಲಕ ಪಾಲಿಕೆಯ ಗಮನ ಸೆಳೆದರು.

ಕದ್ರಿಯ ಕೆಎಫ್‌ಸಿ ಮುಂಭಾಗ ಪಾಲಿಕೆ ಕಾಮಗಾರಿ ಕೈಗೊಂಡ ಕಾರಣದಿಂದ ಕೆಲವು ದಿನಗಳಿಂದ ಇಲ್ಲಿನ ಇಂಟರ್‌ಲಾಕ್‌ಗಳನ್ನು ತೆಗೆದು, ರಸ್ತೆ ಬದಿ ಹಾಕಿರುವುದರಿಂದ ಬೈಕ್‌ ಅಪಘಾತಗಳಾಗುತ್ತಿದೆ. ಈ ಬಗ್ಗೆ ಪಾಲಿಕೆಯ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗದ ಕಾರಣ ಎಂಸಿಸಿ ಸಿವಿಕ್‌ ಗ್ರೂಪ್‌ ಆಶ್ರಯದಲ್ಲಿ ನಾಗರಿಕರು ವಿನೂತನ ರೀತಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಳೆದ ಜೂನ್‌ 23ರಂದು ಶಿವಬಾಗ್‌ ವ್ಯಾಪ್ತಿಯಲ್ಲಿ ಒಳಚರಂಡಿ ಸಮಸ್ಯೆ ಕಾಣಿಸಿಕೊಂಡು ಲೀಕೇಜ್‌ ಆಗುತ್ತಿತ್ತು. ಸ್ಥಳೀಯವಾಗಿ ಒಳಚರಂಡಿ ನೀರು ಹರಿಯುತ್ತ ವಾಸನೆ ಎಲ್ಲೆಡೆ ಸಮಸ್ಯೆಯಾಗಿತ್ತು. ವಿಷಯ ಅರಿತ ಶಾಸಕ ಜೆ.ಆರ್‌.ಲೋಬೋ ಹಾಗೂ ಮೇಯರ್‌ ಕವಿತಾ ಸನಿಲ್‌ ಅವರು ಸ್ಥಳಕ್ಕೆ ಬಂದು ಅಧಿಕಾರಿಗಳ ಸಹಾಯದಿಂದ ಬೃಹತ್‌ ಹೊಂಡ ಮಾಡಿ ಒಳಚರಂಡಿಯ ಜಂಕ್ಷನ್‌ ಪತ್ತೆಹಚ್ಚಿ, ನೀರು ಹರಿಯಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಹೊಂಡ ಮುಚ್ಚುವ ವೇಳೆಯಲ್ಲಿ ಅಧಿಕಾರಿಗಳು ಮೇಲ್ಭಾಗದ ಇಂಟರ್‌ಲಾಕ್‌ಗಳನ್ನು ತೆಗೆದು, ರಸ್ತೆ ಬದಿ ಹಾಕಿರುವುದರಿಂದ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರೋರ್ವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next