Advertisement

ಕುಳ್ಳುಂಜೆ ಅಬ್ಯಾಡಿ ಮಾರ್ಗದ ಬೇಡಿಕೆ ಈಡೇರಲೇ ಇಲ್ಲ

06:00 AM Jun 06, 2018 | Team Udayavani |

ಕುಂದಾಪುರ: ಊರಿಗೆ ಸಂಪರ್ಕ ರಸ್ತೆ ಇಂದಾಗುತ್ತದೆ, ನಾಳೆ ಆಗುತ್ತದೆ ಎಂದು ಜನ ಜನ ಚಾತಕ ಪಕ್ಷಿಯಂತೆ ಕಾದದ್ದೇ ಬಂತು. ರಸ್ತೆ ಮಾತ್ರ ಆಗಲೇ ಇಲ್ಲ. ಈ ಮಳೆಗಾಲದಲ್ಲೂ ಜನರ ಬವಣೆ ತಪ್ಪದು. ಇದು ಕುಳ್ಳುಂಜೆ ಅಬ್ಯಾಡಿ ಮಾರ್ಗದ ರಸ್ತೆ ಸಮಸ್ಯೆ. ಶಂಕರನಾರಾಯಣ ಪದವಿಪೂರ್ವ ಕಾಲೇಜು ಬದಿಯ ಕುಳ್ಳುಂಜೆ ಕಲ್ಮಕ್ಕಿ ರಸ್ತೆಯಲ್ಲಿ ಸಾಗಿದರೆ ಈ ರಸ್ತೆ ಸಿಗುತ್ತದೆ. ಕುಳ್ಳುಂಜೆ ಬದಿ ಸುಮಾರು 40 ಮನೆ, ಅಬ್ಯಾಡಿ ಕಡೆ ಸುಮಾರು 25ಕ್ಕೂ ಹೆಚ್ಚು ಮನೆಗಳಿವೆ. ಮಳೆಗಾಲ ಆರಂಭವಾದರೆ ಸಾಕು ಇಲ್ಲಿನವರಿಗೆ ಸಮಸ್ಯೆ ತಪ್ಪಿದ್ದಲ್ಲ. 

Advertisement

ಮಳೆಗಾಲದಲ್ಲಿ ಯಾವುದೇ ವಾಹನ ಹೋಗದ ರೀತಿ ಹದಗೆಡುವ ಈ ರಸ್ತೆಯಲ್ಲಿ ಯಾರೂ ಬರಲೊಲ್ಲರು.  ಶಾಲಾ ಮಕ್ಕಳಿಗೆ, ಹಿರಿಯರಿಗೆ ನಿತ್ಯದ ಓಡಾಟಕ್ಕೆ ಕಷ್ಟ. ಈ ವಠಾರದಲ್ಲಿ ಸಾಕಷ್ಟು ಹೈನುಗಾರರಿದ್ದು ಅವರಿಗೆ ನಿತ್ಯ ಸಾಗಾಟಕ್ಕೆ ಸಮಸ್ಯೆಯಾಗಿದೆ. ಈ ರಸ್ತೆಯ ದುರಸ್ತಿಗೆ ಅದೆಷ್ಟೋ ಸಮಯ ದಿಂದ ಬೇಡಿಕೆ ಇದ್ದರೂ ಈಡೇರಲೇ ಇಲ್ಲ. ವಾರಾಹಿ ಕಾಲುವೆ ಪಕ್ಕದಲ್ಲೇ ಈ ರಸ್ತೆ ಇದ್ದು, ಕಾಲುವೆ ಕಾಮಗಾರಿ ವೇಳೆ ದುರಸ್ತಿ ನಡೆದೀತು ಎಂದು ಗ್ರಾಮಸ್ಥರು ಆಶಾವಾದ ಹೊಂದಿದ್ದರೂ ಅದೂ ಈಡೇರಿಲ್ಲ.  

ಶಾಸಕರಿಗೆ ಮನವಿ
ಸಾಕಷ್ಟು ಬಾರಿ ಶಾಸಕರಿಗೆ ಮನವಿ ಕೊಟ್ಟಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಈ ಭಾಗದ ಜನರ ಬೇಡಿಕೆ ಯಾವಾಗ ಈಡೇರುತ್ತದೆ ಎಂದು ಕಾಯುತ್ತಾ ಕುಳಿತುಕೊಳ್ಳುವ ಸ್ಥಿತಿ ಬಂದಿದೆ. 
ನರಸಿಂಹ ನಾೖಕ್‌,  ಕುಳ್ಳುಂಜೆ

Advertisement

Udayavani is now on Telegram. Click here to join our channel and stay updated with the latest news.

Next