Advertisement

ಕಾರವಾರ: ವೃದ್ಧೆಯನ್ನು 5 ಕಿ.ಮೀ ಗುಡ್ಡದ ಇಳಿಜಾರಿನಲ್ಲಿ ಹೊತ್ತು ಆಸ್ಪತ್ರೆ ಸಾಗಿಸಿದ ಯುವಕರು

05:41 PM Jun 12, 2021 | Team Udayavani |

ಕಾರವಾರ: ಅನಾರೋಗ್ಯಕ್ಕೆ ತುತ್ತಾದ   ವೃದ್ಧೆಯೋರ್ವರನ್ನು ಖುರ್ಚಿಯ ಜೋಲೆಯಲ್ಲಿ ಹೊತ್ತು ಗುಡ್ಡದ ಕಡಿದಾದ ದಾರಿ ಇಳಿದು ಆಸ್ಪತ್ರೆಗೆ ತಂದ ಘಟನೆ ಇಂದು ನಡೆದಿದೆ.‌

Advertisement

ಸುಮಾರು 5 ಕಿ.ಮೀ. ಗುಡ್ಡದ  ಕಡಿದಾದ ದಾರಿಯಲ್ಲಿ ವಯಸ್ಸಾದ ಅಜ್ಜಿಯನ್ನು  ಹೊತ್ತುತಂದು ಆಸ್ಪತ್ರೆ ಸೇರಿಸಿರುವ ಘಟನೆ ಕಾರವಾರದ ಮಚ್ಚಳ್ಳಿಯಲ್ಲಿ ನಡೆದಿದೆ.

ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ದಟ್ಟಾರಣ್ಯದ ಮಧ್ಯಭಾಗದಲ್ಲಿರುವ ಮಚ್ಛಳ್ಳಿ ಗ್ರಾಮದ ನೇಮಿ ಗೌಡ ಅನಾರೋಗ್ಯಕ್ಕೊಳಗಾಗಿದ್ದಾರೆ. ರಸ್ತೆ ಸಂಪರ್ಕ ಇಲ್ಲದ ಕಾರಣ ಗ್ರಾಮಕ್ಕೆ ಯಾವುದೇ ಅಂಬುಲೆನ್ಸ್ ಅಥವಾ ಇತರೆ ವಾಹನ ಬರಲು ಸಾಧ್ಯವಿರಲಿಲ್ಲ.

ಹೀಗಾಗಿ ಗ್ರಾಮದ ಯುವಕರೇ ಸೇರಿ ಪ್ಲಾಸ್ಟಿಕ್ ಖುರ್ಚಿಯೊಂದನ್ನು ಕಟ್ಟಿಗೆಯ ಕೋಲಿಗೆ  ಹಗ್ಗ   ಕಟ್ಟಿಕೊಂಡು,  ಅದರಲ್ಲಿ ಮಹಿಳೆಯನ್ನು ಕೂರಿಸಿ ಅಷ್ಟಷ್ಟು ದೂರಕ್ಕೆ ನಾಲ್ಕು ಜನ   ಹೆಗಲಮೇಲೆ ಹೊತ್ತು ಅಮದಳ್ಳಿ ಗ್ರಾಮವನ್ನು ತಲುಪಿ,  ಬಳಿಕ ಅಲ್ಲಿಂದ ವಾಹನದ ಮೂಲಕ ಆಸ್ಪತ್ರೆಯನ್ನು ತಲುಪಿದ್ದಾರೆ. ಸದ್ಯ ವೃದ್ಧೆಗೆ ಚಿಕಿತ್ಸೆ ಲಭಿಸಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಮುಗಿಯದ ಸಮಸ್ಯೆ: ಗ್ರಾಮದಿಂದ ಯಾರೇ ಅನಾರೋಗ್ಯಕ್ಕೆ ಒಳಗಾದರು ಉದ್ದನೆ ಕಂಬಕ್ಕೆ ಹಗ್ಗ, ಗೋಣಿಚೀಲ ಕಟ್ಟಿತರಬೆರಕಾದ ಸ್ಥಿತಿ ಇದೆ.  ಕಾಲು ದಾರಿಯಲ್ಲಿ ಸುಮಾರು 1 ಗಂಟೆಗೂ ಅಧಿಕ ಸಮಯ ತಗಲುತ್ತದೆ. ಗ್ರಾಮದ ಯಾರಿಗಾದರೂ ಆರೋಗ್ಯ ಕೆಟ್ಟರೆ, ತುರ್ತು ಪರಿಸ್ಥಿತಿಯಲ್ಲಿ ಅನಾಹುತವೇ ಸಂಭವಿಸುವ ಸಾಧ್ಯತೆ ಇದೆ. ಹಲವು ದಶಕಗಳಿಂದ ಇರುವ ಸಮಸ್ಯೆಯಾಗಿದ್ದು ಇದುವರೆಗೂ ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಆಗಿಲ್ಲ. ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಪ್ರಯೋಜನವಾಗಿಲ್ಲ.

Advertisement

ತಮ್ಮ ಗ್ರಾಮಕ್ಕೆ ರಸ್ತೆಯೊಂದನ್ನು ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಹಲವಾರು ವರ್ಷಗಳಿಂದ ಮನವಿ ನೀಡುತ್ತ ಬಂದಿದ್ದಾರೆ. ಗುಡ್ಡದ ಮಡಲಿಲ್ಲಿ ಅದು ಗುಡ್ಡದ‌ ಬುಡದಿಂದ ನಾಲ್ಕು ಕಿ.ಮಿ. ಎತ್ತರದಲ್ಲಿನ ಗ್ರಾಮ. ಅರಣ್ಯ ವ್ಯಾಪ್ತಿಯಲ್ಲಿದ್ದು, ಅಲ್ಲಿಗೆ ರಸ್ತೆ ಅಸಾಧ್ಯ ಎಂಬುದು ಅಧಿಕಾರಿಗಳ ಮಾತು.ಜನರ ಅಳಲು. ಇದುವರೆಗೂ ಪ್ರಯೋಜನಕ್ಕೆ ಬಂದಿಲ್ಲ.  ಮುಂದಿನ ದಿನಗಳಲ್ಲೂ ,  ಈ ಬಗ್ಗೆ ಸರಕಾರ ಗಮನ ಹರಿಸಿ,  ರಸ್ತೆ ಸಂಪರ್ಕ ಕಲ್ಪಿಸಿ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

-ನಾಗರಾಜ್ ‌ಹರಪನಹಳ್ಳಿ.ಕಾರವಾರ

Advertisement

Udayavani is now on Telegram. Click here to join our channel and stay updated with the latest news.

Next