Advertisement

ದುರಸ್ತಿಯಾಗದ ರಾವಿಹಾಳ ರಸ್ತೆ : ವರ್ಷ ಕಳೆದರೂ ರಸ್ತೆ ಸರಿಪಡಿಸಲು ಮುಂದಾಗದ ತಾಲೂಕಾಡಳಿತ

06:39 PM Oct 08, 2020 | sudhir |

ಸಿರುಗುಪ್ಪ: ನಗರದಿಂದ ರಾವಿಹಾಳ್‌ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಬರುವ ಬೀರಳ್ಳಿ, ಕಲ್ಲುಕುಟಿಗಿನ ಹಾಳು ಗ್ರಾಮದ
ನಡುವಿನ ರಸ್ತೆಯಲ್ಲಿರುವ ಹಳ್ಳದ ನೀರಿನ ರಭಸಕ್ಕೆ ಸೇತುವೆ ಬಲಭಾಗದ ರಸ್ತೆ ಮತ್ತು ತಡೆಗೋಡೆ ಕೊಚ್ಚಿಹೋಗಿದ್ದು ರಸ್ತೆಯಲ್ಲಿ
ಪ್ರಯಾಣಿಸುವವರು ಆಯತಪ್ಪಿ ಬಿದ್ದರೆ ಜೀವ ಹೋಗುವ ಸಾಧ್ಯತೆ ಹೆಚ್ಚಾಗಿದೆ.

Advertisement

ವಿವಿಧ ಗ್ರಾಮಗಳು ಸೇರಿದಂತೆ ತಾಲೂಕು ಕೇಂದ್ರಕ್ಕೆ ತೆರಳುವವರು ಇದೇ ರಸ್ತೆ ಮೂಲಕ ಸಂಚರಿಸುತ್ತಾರೆ. ಕೃಷಿ ಕೆಲಸ ಕಾರ್ಯಗಳಿಗೆ ತೆರಳುವ ನೂರಾರು ರೈತರು ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಸೇತುವೆ ತಡೆಗೋಡೆ ಮತ್ತು ರಸ್ತೆ ಕೆಲವು ಭಾಗ ಕೊಚ್ಚಿಹೋಗಿದ್ದರೂ ಇಲ್ಲಿವರೆಗೆ ರಸ್ತೆ ರಿಪೇರಿ ಮಾಡಿ ತಡೆಗೋಡೆ ನಿರ್ಮಿಸುವ ಕಾರ್ಯವನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾಡದ ಕಾರಣ ಈ ರಸ್ತೆಯಲ್ಲಿ ಸಂಚರಿಸುವವರು ಹಿಡಿಶಾಪ
ಹಾಕುತ್ತಿದ್ದಾರೆ.

ಕಲ್ಲುಕುಟಿಗಿನಹಾಳು ಗ್ರಾಮದಿಂದ ಬೀರಳ್ಳಿ ಗ್ರಾಮದಲ್ಲಿರುವ ಶಾಲೆಗೆ ವಿದ್ಯಾರ್ಥಿಗಳು ಮತ್ತು ಪಡಿತರ ಧಾನ್ಯಗಳನ್ನು ತರಲು ಸಾರ್ವಜನಿಕರು ಇದೇ ರಸ್ತೆ ಮೂಲಕ ಸಂಚರಿಸುತ್ತಾರೆ. ಬಸರಳ್ಳಿ, ಅಕ್ಕತಂಗೇರಹಾಳು, ಭೈರಗಾಮದಿನ್ನೆ, ಕೊತ್ತಲಚಿಂತ, ನಾಡಂಗ, ಅಗಸನೂರು ಮತ್ತು ಸೀಮಾಂಧ್ರದ ಹರಿವಾಣಂ ಸೇರಿದಂತೆ ಅನೇಕ ಗ್ರಾಮಗಳಿಗೆ ತೆರಳುವವರು ಇದೇ ರಸ್ತೆಯ
ಮೂಲಕ ಸಂಚರಿಸುತ್ತಾರೆ. ಪ್ರತಿನಿತ್ಯವೂ ನೂರಾರು ಜನರು, ದ್ವಿಚಕ್ರ ವಾಹನಗಳು, ಸರಕು ವಾಹನಗಳು ಸಂಚರಿಸುತ್ತವೆ.

ಆದರೂ ಇಲ್ಲಿವರೆಗೆ ಬಿದ್ದಿರುವ ಸೇತುವೆ ತಡೆಗೋಡೆ ಮತ್ತು ಕೊಚ್ಚಿಹೋಗಿರುವ ರಸ್ತೆಯನ್ನು ರಿಪೇರಿ ಮಾಡಿಸುವ ಕಾರ್ಯಕ್ಕೆ
ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮುಂದಾಗಿಲ್ಲ. ಇದರಿಂದಾಗಿ ಜನರು ಭಯದಲ್ಲಿಯೇ ಸಂಚರಿಸುತ್ತಿದ್ದಾರೆ.

– ಆರ್‌.ಬಸವರೆಡ್ಡಿ ಕರೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next