Advertisement
ಪ್ರತಿದಿನ ಸಾವಿರಾರು ವಾಹನ ಸಂಚರಿಸುವ ಈ ಮಾರ್ಗವು ಈಗ ಕಳೆದ 5-6 ತಿಂಗಳುಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರ ಗೊಂಡಿದೆ. ಈಗಲಾದರೂ ಎಚ್ಚೆತ್ತುಕೊಂಡು ಈ ಹಾಲಾಡಿಯಿಂದ ಕಾಸಾಡಿಯವರೆಗಿನ ಸುಮಾರು 3 ಕಿ.ಮೀ. ವರೆಗಿನ ರಸ್ತೆಗೆ ಮರು ಡಾಮರು ಕಾಮ ಗಾ ರಿ ಮಾಡಬೇಕು ಎನ್ನುವ ಬೇಡಿಕೆ ಈ ಸಾರ್ವಜನಿಕರದ್ದಾಗಿದೆ.
Related Articles
Advertisement
ಪ್ರಮುಖ ಹೆದ್ದಾರಿ :
ಈ ಭಾಗದ ಎರಡು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಕೊಲ್ಲೂರು ಹಾಗೂ ಶೃಂಗೇರಿಯನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದೆ. ಇದಲ್ಲದೆ ಕುಂದಾಪುರದಿಂದ ಹೆಬ್ರಿ, ಸೋಮೇಶ್ವರ, ಆಗುಂಬೆಗೆ ಹೋಗಬೇಕಾದರೂ ಇದು ಮುಖ್ಯ ರಸ್ತೆಯಾಗಿದೆ. ಇನ್ನೂ ಹಾಲಾಡಿಯಿಂದ ಬೆಳ್ವೆ, ಗೋಳಿಯಂಗಡಿ ಕಡೆಗೂ ಇದೇ ಮಾರ್ಗವಾಗಿ ನಿತ್ಯ ಸಹಸ್ರಾರು ಮಂದಿ ಸಂಚರಿಸುತ್ತಾರೆ. ಪ್ರತಿನಿತ್ಯ ಹತ್ತಾರು ಬಸ್‌ಗಳು ಈ ಮಾರ್ಗವಾಗಿ ಸಂಚರಿಸುತ್ತವೆ.
ಕಳೆದ ಬಾರಿ ಈ ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿಯ ಗೋಳಿಯಂಗಡಿ, ಬೆಳ್ವೆಯಲ್ಲಿ ವಿಸ್ತ ರ ಣೆ ಕಾಮಗಾರಿ ಕೈಗೊಳ್ಳಲಾಗಿತ್ತು. ಈಗ ಹಾಲಾಡಿಯಿಂದ ಕಾಸಾಡಿ ಶಾಲೆಯವರೆಗಿನ ರಸ್ತೆಯ ಅಗಲೀಕರಣ ಕಾಮಗಾರಿಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿ ಟೆಂಡರ್ ಆಗಿದೆ. ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಇನ್ನೀಗ ಶೀಘ್ರ ಕಾಮಗಾರಿ ಆರಂಭಿಸಲಾಗುವುದು. – ಹರ್ಷವರ್ಧನ್, ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಕುಂದಾಪುರ