Advertisement

Road; ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೊಂಡ ಗುಂಡಿಗಳು; ಹೆದ್ದಾರಿ ಅಧಿಕಾರಿಗಳು ಗಮನಿಸಲಿ!

06:38 PM Aug 28, 2024 | Shreeram Nayak |

ತೀರ್ಥಹಳ್ಳಿ : ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ ಆಗುಂಬೆ ಮಾರ್ಗದ ಬಾಳೆಬೈಲು ಸಮೀಪದ ಎ.ಪಿ.ಎಂ.ಸಿ ಎದುರು ರಸ್ತೆಯ ಮಧ್ಯ ಭಾಗದಲ್ಲಿ ಬೃಹತ್ ಗಾತ್ರದ ಹೊಂಡವೊಂದು ಬಿದ್ದಿದ್ದು ಇದನ್ನು ಗಮನಿಸಿರುವ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಬ್ಯಾರಿಕೇಡ್ ಅಳವಡಿಸಿದ್ದಾರೆ.

Advertisement

ಈ ಬ್ಯಾರಿಕೇಡ್ ಅಳವಡಿಸಿ ತಿಂಗಳಿಗೂ ಹೆಚ್ಚು ಸಮಯವಾಗಿದ್ದರೂ ಇಲ್ಲಿಯವರೆಗೆ ಯಾವುದೇ ರೀತಿಯ ಹೊಂಡ ಮುಚ್ಚುವ ಕೆಲಸ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನಿರ್ವಹಿಸಲಿಲ್ಲ ಎಂಬ ಆಕ್ರೋಶದ ಮಾತುಗಳು ಅಲ್ಲಿನ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಈ ಹೊಂಡ ಮತ್ತು ಅಳವಡಿಸಿರುವ ಬ್ಯಾರಿಕೇಡ್ ರಾತ್ರಿ ಸಮಯದಲ್ಲಿ ಮಳೆ ಇರುವುದರಿಂದ ಮಂಜು ಮುಸುಕು ಆವರಿಸಿರುತ್ತದೆ. ಈ ಸಮಯದಲ್ಲಿ ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಹೊಂಡ ಮತ್ತು ಬ್ಯಾರಿಕೇಡ್ ಕಾಣದೇ ಹತ್ತಿರ ಹೋಗಿ ನಿಂತು ಕೋಪದಿಂದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಹೋಗುತ್ತಿದ್ದಾರೆ.

ಇದಲ್ಲದೆ ಯಡೇಹಳ್ಳಿಕೆರೆ ಹತ್ತಿರ ಮರ್ಕಣ್ಣನ ಗ್ಯಾರೇಜ್ ಎದುರು ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದಿದ್ದು ಮಳೆಯಿಂದಾಗಿ ಹೊಂಡದಲ್ಲಿ ನೀರು ನಿಂತಿದೆ. ಇನ್ನು ಪಟ್ಟಣದ ಹೃದಯ ಭಾಗವಾಗಿರುವ ಕೊಪ್ಪ ಸರ್ಕಲ್ ನಲ್ಲಿ ಒಂದು ಬಾರಿ ಸರಿಪಡಿಸಿದರೂ ಕೂಡ ಪುನಃ ಹೊಂಡ ಗುಂಡಿಗಳು ಬಿದ್ದಿದ್ದು ಇವೆಲ್ಲವೂ ಕೂಡ ಯಾವುದೇ ಸಮಯದಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಇನ್ನಾದರೂ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಗಮನಿಸಿ ಹೊಂಡ ಗುಂಡಿ ಮುಚ್ಚುವ ಕೆಲಸ ಮಾಡಲಿ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next