Advertisement
ರಾ.ಹೆ. 66ರ ಕಟಪಾಡಿ ಜಂಕ್ಷನ್‌ನಿಂದ ಸುಮಾರು 200 ಮೀ. ದೂರದಲ್ಲಿ ಮತ್ತು ಅಚ್ಚಡ ಕ್ರಾಸ್ ಬಳಿಯ ಇಳಿಜಾರು ಪ್ರದೇಶದಲ್ಲಿ ಡಾಮರು ಕಿತ್ತು ಬಂದಿದ್ದು ಬಳಿಕ ನಡೆಸಿದ ಪ್ಯಾಚ್ ವರ್ಕ್ ಕೂಡಾ ಚೆಲ್ಲಾ ಪಿಲ್ಲಿಯಾಗಿ ದ್ವಿಚಕ್ರ ಮತ್ತು ತ್ರಿಚಕ್ರ ಹಾಗೂ ಲಘು ವಾಹನಗಳ ಸಂಚಾರಕ್ಕೆ ಸಂಚಕಾರವನ್ನು ತಂದೊಡ್ಡುತ್ತಿತ್ತು. ಈಗಾಗಲೇ ಹಲವು ದ್ವಿಚಕ್ರ ಸವಾರರು ಗುಂಡಿಯ ರುಚಿಯನ್ನು ಕಂಡಿದ್ದು, ಸಣ್ಣ ಪುಟ್ಟ ಅಪಾಯದಿಂದ ಪಾರಾಗಿದ್ದಾರೆ ಎಂದು ಸಾರ್ವಜನಿಕರು ಮಾಹಿತಿಯನ್ನು ನೀಡುತ್ತಿದ್ದು, ಸಂಭಾವ್ಯ ಮತ್ತಷ್ಟು ಅಪಾಯ ಸಂಭವಿಸುವ ಮುನ್ನವೇ ಈ ಹೊಂಡ-ಗುಂಡಿಗಳಿಗೆ ಶಾಶ್ವತ ಪರಿಹಾರ ಕೈಗೊಳ್ಳುವಂತೆ ಆಗ್ರಹದ ಬಗ್ಗೆ ಉದಯವಾಣಿ ಸುದಿನ ವರದಿಯನ್ನು ಪ್ರಕಟಿಸಿತ್ತು. ಇದೀಗ ಮಳೆಯು ತಾತ್ಕಾಲಿಕ ವಿರಾಮ ನೀಡಿದ್ದನ್ನು ಮನಗಂಡು ಲೋಕೋಪಯೋಗಿ ಇಲಾಖೆಯು ಸೋಮವಾರ ಸಂಜೆಯ ವೇಳೆಗೆ ಈ ಭಾಗದಲ್ಲಿ ವೆಟ್ ಮಿಕ್ಸ್ ಅಳವಡಿಸಿ ಮಾರಣಾಂತಿಕ ಹೊಂಡ ಗುಂಡಿಗೆ ತಾತ್ಕಾಲಿಕ ಪರಿಹಾರವನ್ನು ಕಂಡು ಕೊಂಡಿದ್ದಾರೆ. ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
Related Articles
Advertisement
ಸಿಆರ್‌ಎಫ್ ಅನುದಾನದಡಿ ರಸ್ತೆ ಅಭಿವೃದ್ಧಿ ಕಾಮಗಾರಿ
ಈ ಭಾಗದ ರಸ್ತೆಯು ದುಸ್ಥಿತಿಯಲ್ಲಿ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಈಗಾಗಲೇ ಇಲ್ಲಿನ ಹಾಳಾದ ರಸ್ತೆಯ ಭಾಗಕ್ಕೆ ವೆಟ್ ಮಿಕ್ಸ್ ಅಳವಡಿಸಲಾಗಿತ್ತು. ವಿಪರೀತ ಮಳೆಯ ಕಾರಣದಿಂದ ಮತ್ತೆ ರಸ್ತೆಯು ದುಸ್ಥಿತಿ ಕಂಡಿತ್ತು. ಇದೀಗ ಮೂರನೇ ಬಾರಿಗೆ ವೆಟ್ ಮಿಕ್ಸ್ ಅಳವಡಿಸಲಾಗಿದೆ. ಶಾಶ್ವತ ಪರಿಹಾರವಾಗಿ ಸಿಆರ್‌ಎಫ್ ಅನುದಾನದಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಎನ್.ಎಚ್. ಇಲಾಖೆ ಕೈಗೊಳ್ಳಲಿದೆ. ಈ ಭಾಗದ ರಸ್ತೆಯು ದುಸ್ಥಿತಿಯಲ್ಲಿ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಈಗಾಗಲೇ ಇಲ್ಲಿನ ಹಾಳಾದ ರಸ್ತೆಯ ಭಾಗಕ್ಕೆ ವೆಟ್ ಮಿಕ್ಸ್ ಅಳವಡಿಸಲಾಗಿತ್ತು. ವಿಪರೀತ ಮಳೆಯ ಕಾರಣದಿಂದ ಮತ್ತೆ ರಸ್ತೆಯು ದುಸ್ಥಿತಿ ಕಂಡಿತ್ತು. ಇದೀಗ ಮೂರನೇ ಬಾರಿಗೆ ವೆಟ್ ಮಿಕ್ಸ್ ಅಳವಡಿಸಲಾಗಿದೆ. ಶಾಶ್ವತ ಪರಿಹಾರವಾಗಿ ಸಿಆರ್‌ಎಫ್ ಅನುದಾನದಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಎನ್.ಎಚ್. ಇಲಾಖೆ ಕೈಗೊಳ್ಳಲಿದೆ.
-ಸುಧೀರ್ ಕುಮಾರ್ ಕೆ., ಎ.ಇ.,ಲೋಕೋಪಯೋಗಿ ಇಲಾಖೆ