Advertisement
ಕಡೆಯಿಂದ ಹೋದರೂ ರಸ್ತೆ ಗುಂಡಿಗೆ ಬೀಳಲೇಬೇಕು!ಗುರುವಾಯನಕೆರೆಯಿಂದ ಕುಪ್ಪೆಟ್ಟಿ (ಉರುವಾಲು) ತನಕ ಅಂದಾಜು 13 ಕಿ.ಮೀ. ದೂರದ ರಸ್ತೆಯುದ್ದಕ್ಕೂ 50ಕ್ಕೂ ಹೆಚ್ಚು ಕಡೆಗಳಲ್ಲಿ ಗುಂಡಿಗಳಿವೆ. ಇಲ್ಲಿನ ರಸ್ತೆಯ ಗುಂಡಿಗಳಿಗೆ ದ್ವಿಚಕ್ರ ವಾಹನ ಸವಾರರು ಬಿದ್ದು ಕೈ, ಕಾಲು, ತಲೆಗೆ ಗಂಭೀರವಾದ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ ಹಲವು ನಿದರ್ಶನಗಳಿವೆ.
Related Articles
Advertisement
ಹಲವು ಸಂಪರ್ಕ ರಸ್ತೆಗಳ ಜೋಡಣೆಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ಗ್ರಾಮೀಣ ಭಾಗದಿಂದಲೂ ಸಂಪರ್ಕವಿದೆ. ಹಿಂದಿನ ಸರಕಾರ ಹಾಗೂ ಈಗಿನ ಸರಕಾರದ ಅವಧಿಯಲ್ಲಿ ರಸ್ತೆಗೆ ಮರು ಡಾಮರೀಕರಣ, ಚರಂಡಿ ರಿಪೇರಿ ಮೊದಲಾದ ಯಾವ ಕಾಮಗಾರಿಯೂ ನಡೆದಿಲ್ಲ. ಹೀಗಾಗಿ ರಸ್ತೆ ಈ ಪರಿಯಲ್ಲಿ ಕೆಟ್ಟು ಹೋಗಲು ಕಾರಣವಾಗಿದೆ. ಹೊಂಡ-ಗುಂಡಿಗಳಿಂದ ಕೂಡಿ ಪ್ರಯಾಣಿಕರಿಗೆ ಪ್ರಾಣ ಸಂಕಟವಾಗಿದೆ. ಎಲ್ಲೆಲ್ಲಿ ಅಪಾಯಕಾರಿ ಸ್ಥಿತಿ?
ಈ ರಸ್ತೆಯು ಬೆಳ್ತಂಗಡಿ ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಬರುತ್ತದೆ. ಎರಡು ಪಟ್ಟಣಗಳನ್ನು ಸೇರಿಸುವ ರಸ್ತೆಯಲ್ಲಿ 20 ಕಿ.ಮೀ. ಉದ್ದಕ್ಕೆ ಸರಿಯಾಗಿರುವ ಒಂದರ್ಧ ಕಿ.ಮೀ. ರಸ್ತೆ ಕೂಡಾ ಕಾಣುವುದಿಲ್ಲ. ಗುರುವಾಯನಕೆರೆ ಪೇಟೆಯಿಂದ ಆರಂಭಗೊಂಡು 1.ಕಿ.ಮೀ. ದೂರದವರೆಗಿನ ಪಣೆಜಾಲು ತನಕವೇ ರಸ್ತೆಯಲ್ಲಿ ಹತ್ತಾರು ಬೃಹತ್ ಗುಂಡಿಗಳಿವೆ ಇಡ್ಯ, ರೇಷ್ಮೆ ರೋಡ್, ಗೇರುಕಟ್ಟೆ, ಪರಪ್ಪು, ನಾಳ, ಜಾರಿಗೆಬೈಲು, ಗೋವಿಂದೂರು, ಯಂತ್ರಡ್ಕ, ಮಾವಿನಕಟ್ಟೆ, ಹಲೇಜಿ ಮತ್ತು ಕುಪ್ಪೆಟ್ಟಿ ಪೇಟೆಯ ಮುಖ್ಯ ಭಾಗದಲ್ಲಿರುವ ರಸ್ತೆ ಗುಂಡಿಗಳನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಕೆಲವರು ತಪ್ಪಿಸಲು ಹೋಗಿ ಅಪಘಾತಕ್ಕೆ ಒಳಗಾಗಿದ್ದಾರೆ. – ಇತ್ತೀಚೆಗೆ ಕೆಲವು ಭಾಗದಲ್ಲಿ ಚರಂಡಿ ರಿಪೇರಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಆದರೆ ಅದನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಚರಂಡಿಯ ಹಸಿ ಮಣ್ಣನ್ನು ರಸ್ತೆಯ ಪಕ್ಕದಲ್ಲಿ ಹಾಕಿದ ಪರಿಣಾಮ ಮಳೆಗೆ ಹರಿದು ಮತ್ತಷ್ಟು ಸಮಸ್ಯೆಯಾಗಿದೆ.
ಯಂತ್ರಡ್ಕ ಸಮೀಪ ತಿರುವಿನಲ್ಲಿ ರಸ್ತೆಯ ತುಂಬಾ ಕಿರಿದಾಗಿದೆ, ರಸ್ತೆ ಬದಿಯೂ ಕುಸಿದಿದೆ. ಹೀಗಾಗಿ ಇತ್ತೀಚೆಗೆ ಇಲ್ಲಿ ಘನ ವಾಹನವೊಂದು ಚರಂಡಿಗೆ ಬಿದ್ದಿತ್ತು. ಈ ಭಾಗದಲ್ಲಿ ರಸ್ತೆ ಇನ್ನಷ್ಟು ಕುಸಿದು ಬೀಳುವ ಅಪಾಯವಿದ್ದರೂ ಸಂಬಂಧಿಸಿದ ಇಲಾಖೆಯವರು ಯಾವುದೇ ರೀತಿಯ ಸೂಚನೆ ಫಲಕ ಅಥವಾ ಅಪಾಯ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ.
ಕೆಲವು ಕಡೆ ಸ್ಥಳೀಯರು ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆಯ ನಿಯಮ ಪಾಲಿಸದೆ ರಸ್ತೆಯ ಪಕ್ಕದಲ್ಲಿ ಮನೆ, ಅಂಗಡಿ ಹಾಗೂ ವಸತಿ ಕಟ್ಟಡ ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ ರಸ್ತೆ ಚರಂಡಿಯನ್ನೇ ಮುಚ್ಚಲಾಗುತ್ತದೆ. ಕೆಲವು ಕಡೆ ಸಣ್ಣ ಗಾತ್ರದ ಮೋರಿಯಿಂದಾಗಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇನ್ನು ಕೆಲವು ಕಡೆ ದೊಡ್ಡ ಗಾತ್ರದ ಕಲ್ಲುಗಳನ್ನು, ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಹಾಳಾದ ಸಿಮೆಂಟ್, ಟೈಲ್ಸ್ ತುಂಡುಗಳನ್ನು ಗೋಣಿ ಚೀಲದಲ್ಲಿ ತುಂಬಿ ರಸ್ತೆ ಗುಂಡಿಗೆ ಹಾಕುತ್ತಾರೆ. ಇದು ಕೂಡಾ ಸಣ್ಣ ವಾಹನಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. -ಕೆ.ಎನ್. ಗೌಡ, ಗೇರುಕಟ್ಟೆ