Advertisement

ನಗರದೊಳಗಿನ ರಸ್ತೆ ಮಧ್ಯೆ ಹೊಂಡ ಸೃಷ್ಟಿ!

09:20 PM Aug 03, 2021 | Team Udayavani |

ಕಾರ್ಕಳ:  ನಗರ ವ್ಯಾಪ್ತಿಯ ಮುಖ್ಯ ಪೇಟೆಯ ಮೂರು ಮಾರ್ಗ ಜಂಕ್ಷನ್‌ನಿಂದ ಆನೆಕೆರೆ, ಮಂಗಳೂರು ಭಾಗಕ್ಕೆ  ತೆರಳುವ ಮಾರ್ಗದಲ್ಲಿ ಅಲ್ಪ ದೂರ  ರಸ್ತೆ  ಸಂಪೂರ್ಣ ಕೆಟ್ಟಿದ್ದು  ಸಂಚಾರ ದುಸ್ತರವಾಗಿದೆ. ಕಾಲ್ನಡಿಗೆಯಲ್ಲಿ ತೆರಳುವುದಕ್ಕೂ ತೊಂದರೆಯಾಗುತ್ತಿದೆ. ಮಳೆಗೆ  ರಸ್ತೆ ಹೊಂಡದಲ್ಲಿ ಕೆಸರು ತುಂಬಿಕೊಂಡು ಸಮಸ್ಯೆಯಾದರೆ, ಬಿಸಿಲು ಬಂದೊಡನೆ ಧೂಳಿನ ಸಮಸ್ಯೆ ಸಂಚಾರಕ್ಕೆ ಕಂಟಕವಾಗಿದೆ.

Advertisement

ನಗರದ ಮುಖ್ಯ ಪೇಟೆಯ ಮೂರು ಮಾರ್ಗ ಜಂಕ್ಸನ್‌ನಿಂದ  ಸ್ವಲ್ಪ ಮುಂದಕ್ಕೆ  ಸೆಂಟ್ರಲ್‌ ಬ್ಯಾಂಕ್‌ ಎದುರಿನ  ಸುಮಾರು 100 ಮೀ.ನಷ್ಟು  ಕೂಡ ದೂರವಿಲ್ಲದ ವ್ಯಾಪ್ತಿಯಲ್ಲಿ  ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಮಧ್ಯೆ ಅಲ್ಲಲ್ಲಿ  ಹೊಂಡಗಳಿರುವುದು ಸಂಚಾರಕ್ಕೆ  ತೀವ್ರ ಅಡಚಣೆಯಾಗುತ್ತಿದೆ.  ವಾಹನಗಳು ಹೊಂಡಗುಂಡಿಗಳಲ್ಲಿ ಎದ್ದು  ಬಿದ್ದು  ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಒಳಚರಂಡಿ ಕಾಮಗಾರಿಗೆ  ಪೈಪ್‌ ಅಳವಡಿಕೆ ವೇಳೆ ರಸ್ತೆಯನ್ನು ಅಗೆಯಲಾಗಿತ್ತು. ಅನಂತರದಲ್ಲಿ  ರಸ್ತೆಯ ಹೊಂಡಗಳನ್ನು  ಮುಚ್ಚಿ,  ಜಲ್ಲಿ ಮತ್ತು  ಜಲ್ಲಿ   ಹುಡಿಯನ್ನು ಹಾಕಿ ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿತ್ತು.

ಇಕ್ಕಟ್ಟಾದ ರಸ್ತೆಯಲ್ಲಿ  ವಾಹನಗಳ ಭಯದ  ಅತ್ತಿತ್ತ ಸಾಗಬೇಕಾದ  ಪರಿಸ್ಥಿತಿ ಪಾದಚಾರಿಗಳದು.  ಮಂಗಳೂರು ಭಾಗದಿಂದ ಬರುವ ಬಸ್‌ಗಳು ಇದೇ ಮಾರ್ಗವಾಗಿ ಬರುವುದು ಹೋಗುವುದು ಮಾಡುತ್ತಿದ್ದು  ಇಕ್ಕಟ್ಟಾದ ರಸ್ತೆಯಲ್ಲಿ  ಸಂಚರಿಸಲಾಗದೆ  ತ್ರಾಸ ಪಡುವ ಸ್ಥಿತಿಯಿದೆ. ಮೂರು ಮಾರ್ಗದಿಂದ ಆನೆಕೆರೆ ತನಕ ಸೂಕ್ತ ಚರಂಡಿಯೂ ಇಲ್ಲ. ಈ ನಡುವೆ  ರಸ್ತೆ ಹದಗೆಟ್ಟ ಸ್ಥಳಗಳಲ್ಲಿ   ಮಳೆ  ನೀರು  ಹರಿಯುತ್ತಿದ್ದು, ಪಕ್ಕದ ಅಂಗಡಿಗಳಿಗೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆ  ಸಂಬಂಧಿಸಿದವರು ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಸಂಚಾರ ಹರಸಾಹಸ :

Advertisement

ದುರಸ್ತಿ ಅನಂತರದಲ್ಲಿ ಮಳೆಯೂ ಸುರಿದಿದ್ದರಿಂದ  ರಸ್ತೆ ಹೆಚ್ಚು ಕೆಡಲು ಕಾರಣವಾಗಿದೆ. ಜತೆಗೆ  ಸೂಕ್ತ ಚರಂಡಿಯೂ ಇಲ್ಲದೆ ಇರುವುದರಿಂದ  ಸಮಸ್ಯೆ ಮತ್ತಷ್ಟು ಹೆಚ್ಚಿದ್ದು  ಆನೆಕೆರೆಯಿಂದ  ಬರುವ ಮತ್ತು ಅಲ್ಲಿಗೆ ತೆರಳುವ  ವಾಹನಗಳು ಮೂರು ಮಾರ್ಗ ದಾಟಿ  ಹಳೆ ಬಸ್‌ ನಿಲ್ದಾಣ ಸಹಿತ ಮುಖ್ಯ ಪೇಟೆ ತಲುಪಲು   ಹರಸಾಹಸ ಪಡಬೇಕಾಗಿದೆ.  ಲಘು,  ದ್ವಿಚಕ್ರ ವಾಹನಗಳು  ಇಲ್ಲಿ  ತೆರಳುವಾಗ  ಎದ್ದು ಬಿದ್ದು ಹೋಗಬೇಕಾದ ಸ್ಥಿತಿಯಿದೆ.  ಈ ವೇಳೆ ಅಪಾಯ  ಸಂಭವಿಸುವ ಸಾಧ್ಯತೆ ಇದೆ.

ಒಳಚರಂಡಿ ಕಾಮಗಾರಿ ನಡೆಸುವ ವೇಳೆ  ರಸ್ತೆಗೆ ಹಾನಿಯಾಗಿದೆ. ಒಳಚರಂಡಿಯವರ ಗಮನಕ್ಕೆ ತಂದಾಗ ಹಣವಿಲ್ಲ ಎನ್ನುವ ಉತ್ತರ ನೀಡಿದ್ದಾರೆ. ಈ ಬಗ್ಗೆ  ಮತ್ತೆ ಅವರ ಗಮನಕ್ಕೆ ತರುವೆ.ರೂಪಾ ಶೆಟ್ಟಿ  ಮುಖ್ಯಾಧಿಕಾರಿ ಪುರಸಭೆ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next