Advertisement

Road Mishap: ಜಾಲಿರೇಡ್‌ಗೆ ತೆರಳಿದ್ದ ಇಬ್ಬರ ದುರ್ಮರಣ

10:14 AM Aug 14, 2023 | Team Udayavani |

ಬೆಂಗಳೂರು: ಜಾಲಿರೇಡ್‌ಗೆ ತೆರಳಿ ವಾಪಸ್‌ ಮನೆ ಕಡೆ ಬರು ವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಎಂಜಿನಿಯರ್‌ಗಳು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮತ್ತಿಕೆರೆ ನಿವಾಸಿಗಳಾದ ಕಾರ್ತಿಕ್‌(23) ಮತ್ತು ಆದರ್ಶ್‌ (23) ಮೃತ ಎಂಜಿನಿಯರ್‌ಗಳು.  ಅವರ ಮೂವರು ಸ್ನೇಹಿ ತರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ.

ಕಾರ್ತಿಕ್‌ ಮತ್ತು ಆದರ್ಶ್‌ ಹಾಗೂ ಇತರೆ ಮೂವರು ಸ್ನೇಹಿತರು ಶನಿವಾರ ತಡರಾತ್ರಿ ಸ್ನೇಹಿತರೊಬ್ಬರ ಕಾರಿನಲ್ಲಿ ನಂದಿ ಬೆಟ್ಟಕ್ಕೆ ಹೋಗುತ್ತಿದ್ದರು. ಆದರೆ, ಮಾರ್ಗ ಮಧ್ಯೆ ನಸುಕಿನ ಮೂರು ಗಂಟೆಗೆ ಹುಣಸಮಾರನಹಳ್ಳಿ ಕಡೆಯಿಂದ ವಾಪಸ್‌ ಬೆಂಗಳೂರಿನ ಕಡೆ ಬಂದಿದ್ದಾರೆ.

ಈ ವೇಳೆ ಕಾರ್ತಿಕ್‌ ಕಾರು ಚಾಲನೆ ಮಾಡುತ್ತಿದ್ದು, ಪಕ್ಕದಲ್ಲೇ ಆದರ್ಶ್‌ ಕುಳಿತಿದ್ದ. ಹಿಂಭಾಗದಲ್ಲಿ ಮೂವರು ಸ್ನೇಹಿತರು ಕುಳಿತಿದ್ದರು. ಬಳ್ಳಾರಿ ರಸ್ತೆಯ ದೇವನಹಳ್ಳಿ ಸಮೀಪದ ಪಾಲನ ಹಳ್ಳಿ ಗೇಟ್‌ ಬಳಿ ನಿಯಂತ್ರಣ ಕಳೆದುಕೊಂಡ ಕಾರ್ತಿಕ್‌, ಸರ್ವೀಸ್‌ ರಸ್ತೆ ವಿಭಜಕದ ಕಬ್ಬಿಣದ ಗ್ರಿಲ್‌ಗೆ ಡಿಕ್ಕಿ ಹೊಡೆದಿ ದ್ದಾನೆ. ಪರಿಣಾಮ ಇಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿ ದ್ದಾರೆ. ಹಿಂಭಾಗದಲ್ಲಿ ಕುಳಿತಿದ್ದ ಮೂವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next