Advertisement

ಹಾಲಾಡಿ ಸೇತುವೆಗೆ ಕಾರು ಡಿಕ್ಕಿ : ಕೆಎಂಫ್ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಸಾವು

05:05 PM Dec 09, 2020 | sudhir |

ಹಾಲಾಡಿ : ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಕೆಎಂಫ್ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ(60) ಸಾವನ್ನಪ್ಪಿದ ಘಟನೆ ಹಾಲಾಡಿಯಲ್ಲಿ ಬುಧವಾರ ಸಂಭವಿಸಿದೆ.

Advertisement

ಹಾಲಾಡಿಯಲ್ಲಿ ಕಾರ್ಯಕ್ರಮ ಮುಗಿಸಿ ಶಂಕರನಾರಾಯಣಕ್ಕೆ ಬರುತ್ತಿರುವ ಸಂದರ್ಭ ಹಾಲಾಡಿಯಲ್ಲಿ ಸೇತುವೆಗೆ ಡಿಕ್ಕಿ ಹೊಡೆದಿದೆ ಪರಿಣಾಮ ಗಂಭೀರ ಗಾಯಗೊಂಡ ರಾಜೀವ ಶೆಟ್ಟಿ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ, ಹೈನುಗಾರ ಹದ್ದೂರು ರಾಜೀವ ಶೆಟ್ಟಿ:
ಹದ್ದೂರು ರಾಜೀವ ಶೆಟ್ಟಿ ಅವರು ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕರಾಗಿದ್ದು, ಹೈನುಗಾರಿಕೆಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ.

ರಾಜೀವ ಶೆಟ್ಟಿ ಅವರು ತಮ್ಮ 15 ಎಕರೆ ಭೂಮಿಯ 11 ಎಕರೆ ಗುಡ್ಡ ಪ್ರದೇಶವನ್ನು ಕೃಷಿಭೂಮಿಯಾಗಿ ಪರಿವರ್ತಿಸಿ, ಬರಡು ಭೂಮಿಗೆ ಜೀವಕಳೆ ತುಂಬಿದರು. ಇವರು 35 ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹದ್ದೂರು ರಾಜೀವ ಶೆಟ್ಟಿ ಅವರಿಗೆ ಕುಂದಾಪುರ ತಾಲೂಕು ಉತ್ತಮ ಕೃಷಿಕ ಪ್ರಶಸ್ತಿ, ಸಬ್ಲಾಡಿ ಸೀನಪ್ಪ ಶೆಟ್ಟಿ ಕೃಷಿ ಸಾಧಕ ಪ್ರಶಸ್ತಿಗಳು ಲಭಿಸಿವೆ. ಅವರಿಗೆ ಅನೇಕ ಸಂಘ, ಸಂಸ್ಥೆಗಳಿಂದ ಸಮ್ಮಾನಗಳು ಸಂದಿವೆ.

Advertisement

ರಾಜೀವ ಶೆಟ್ಟಿ ಅವರು ಕೆ.ಎಂ. ಎಫ್‌. ನಿರ್ದೇಶಕರಾಗಿದ್ದು, ಬೈಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಂಕರನಾರಾಯಣ ಮಂಡಲ ಪಂಚಾಯತ್‌ ಅಧ್ಯಕ್ಷರಾಗಿದ್ದು, ಮಾಜಿ ಸದಸ್ಯರಾಗಿದ್ದು, ಕುಂದಾಪುರ ತಾ. ಪಂ. ಸದಸ್ಯರಾಗಿದ್ದು, ಬಿಜೆಪಿ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next