Advertisement

Road Mishap: ಶಾಲಾ ಬಸ್ – ಟ್ರಾಕ್ಟರ್ ನಡುವೆ ಭೀಕರ ಅಪಘಾತ… ನಾಲ್ವರು ಮಕ್ಕಳು ದುರ್ಮರಣ

08:53 AM Jan 29, 2024 | Team Udayavani |

ಬಾಗಲಕೋಟೆ: ಟ್ರಾಕ್ಟರ್ ಮತ್ತು ಶಾಲಾ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಶಾಲಾ ಮಕ್ಕಳು ಮೃತಪಟ್ಟು ಸುಮಾರು ಎಂಟು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಆಲಗೂರು ಗ್ರಾಮದ ಸಮೀಪ ಸಂಭವಿಸಿದೆ.

Advertisement

ಮೃತರನ್ನು ಗೋವಿಂದ ಜಂಬಗಿ(13), ಸಾಗರ ಕಡಕೋಳ(17), ಶ್ವೇತಾ ಪಾಟಿಲ್ (16), ಬಸವರಾಜ ಕೊಟಗಿ(17) ಎನ್ನಲಾಗಿದೆ.

ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಮುಗಿಸಿ ತಡರಾತ್ರಿ ೧೨ ಗಂಟೆಗೆ ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಆಲಗೂರು ಕಡೆಯಿಂದ ಕವಟಗಿ ಗ್ರಾಮಕ್ಕೆ ಕರೆದೊಯ್ಯುತ್ತಿದ್ದ ವೇಳೆ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ, ಘಟನೆಯಲ್ಲಿ ಓರ್ವ ಬಾಲಕಿ ಸ್ಥಳದಲ್ಲೇ ಮೃತಪಟ್ಟರೆ ಮೂವರು ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಗಾಯಗೊಂಡ ಮಕ್ಕಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ: Bigg Bossನಿಂದ ಬಂದ ಒಂದು ರೂಪಾಯಿಯೂ ನನಗೆ ಬೇಡ; ಅದನ್ನು ದಾನ ಮಾಡುತ್ತೇನೆ: ಡ್ರೋನ್ ಪ್ರತಾಪ್

Advertisement

Udayavani is now on Telegram. Click here to join our channel and stay updated with the latest news.

Next