ಆನಂದಪುರ: ಆನಂದಪುರ – ಶಿಕಾರಿಪುರ ರಾಷ್ಟ್ರೀಯ ಹೆದ್ದಾರಿಯ ಗೌತಮಪುರ ಸಮೀಪ ನಂದಿನಿ ಹಾಲಿನ ಟ್ಯಾಂಕರ್ ಹಾಗೂ ಓಮ್ನಿ ನಡುವೆ ಮುಖಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಯಡೇಹಳ್ಳಿ ನಂದಿನಿ ಹಾಲಿನ ಕೇಂದ್ರದಿಂದ ಹಾಲು ತುಂಬಿಕೊಂಡು ಶಿಕಾರಿಪುರಕ್ಕೆ ತೆರಳುತ್ತಿದ್ದ ಹಾಲಿನ ಟ್ಯಾಂಕರ್, ಶಿಕಾರಿಪುರದಿಂದ ಆನಂದಪುರ ಕಡೆಗೆ ಬರುತ್ತಿದ್ದ ಓಮ್ನಿ, ಗೌತಮಪುರ ಸಮೀಪ ದೊಡ್ಡಬ್ಯಾಣ ಕ್ರಾಸ್ ಬಳಿ ಮುಖಮುಖಿ ಡಿಕ್ಕಿಯಾಗಿದ್ದು, ಓಮ್ನಿಯಲ್ಲಿ 5 ಜನರು ಪ್ರಯಾಣಿಸುತ್ತಿದ್ದು ಇದರಲ್ಲಿ ವೀರಪ್ಪ (55) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ,
ಗಾಯಗೊಂಡ ನಾಲ್ವರಲ್ಲಿ ನಾಗಾರ್ಜುನ್ ಎಂಬುವರಿಗೆ ತಲೆಗೆ ತೀವ್ರ ಗಾಯವಾಗಿದ್ದು ಆನಂದಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಓಮ್ನಿ ಯಲ್ಲಿದ್ದವರನ್ನು ರಿಪ್ಪನ್ ಪೇಟೆ ಸಮೀಪದ ಹುಂಚದ ಕಟ್ಟೆ ಗ್ರಾಮವದ್ದವರೆಂದು ತಿಳಿದು ಬಂದಿದೆ. ಅಪಘಾತ ನಡೆದ ವಿಷಯ ತಿಳಿಯುತ್ತಿದ್ದಂತೆ ಪಿಎಸ್ಐ ಯುವರಾಜ್ ಕಂಬಳಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಸ್ಥಳ ಪರಿಶೀಲನೆ ನಡೆಸಿದರು.
ಘಟನೆಗೆ ಸಂಬಂಧಿಸಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ