Advertisement

ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದ ಲಾರಿ; ಕನಿಷ್ಠ 48 ಮಂದಿ ಮೃತ್ಯು

09:56 AM Jul 01, 2023 | Team Udayavani |

ನೈರೋಬಿ: ಲಾರಿಯೊಂದು ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 48 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಪಶ್ಚಿಮ ಕೀನ್ಯಾದ ಲೊಂಡಿಯಾನಿಯಲ್ಲಿ ಶುಕ್ರವಾರ ಸಂಜೆ (ಜೂ.30 ರಂದು) ನಡೆದಿರುವುದು ವರದಿಯಾಗಿದೆ.

Advertisement

ಹಡಗಿಗೆ ಸಂಬಂಧಿಸಿದ ಸರಕುಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ಬಳಿಕ ಪಾದಚಾರಿಗಳ ಮೇಲೆ ಎರಗಿದ ಪರಿಣಾಮ ಈ ಭೀಕರ ಘಟನೆ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಮಿನಿ ಬಸ್‌,ಟ್ರಕ್‌, ಕಾರುಗಳು ಮತ್ತು ಮೋಟಾರ್‌ಬೈಕ್‌ಗಳು ಸೇರಿದಂತೆ 6 ಕ್ಕೂ ಹೆಚ್ಚಿನ ವಾಹನಗಳಿಗೆ ಲಾರಿ ಢಿಕ್ಕಿ ಹೊಡೆದು ಪಾದಚಾರಿಗಳಿಗೆ ಢಿಕ್ಕಿ ಹೊಡೆದಿದೆ. ಶುಕ್ರವಾರ ಸಂಜೆಯವರೆಗೆ 48 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಮಣಿಪಾಲ: ಡಿಸಿ ಆಫೀಸ್‌ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ; ವೈದ್ಯ ಸ್ಥಳದಲ್ಲೇ ಸಾವು

“ನಾನು ಸುಮಾರು 20 ಶವಗಳನ್ನು ನನ್ನ ಕಣ್ಣಿನಿಂದಲೇ ನೋಡಿದೆ. ವಾಹನದ ಕೆಳಗೆ ಇತರ ದೇಹಗಳು ಇದ್ದವು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

Advertisement

ಲಾರಿ ಆರಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದು ಪಾದಚಾರಿಗಳ ಮೇಲೆ ಹರಿದಿದೆ. 20 ಕ್ಕೂ ಹೆಚ್ಚು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಎಂದು ಕೀನ್ಯಾ ರೆಡ್‌ಕ್ರಾಸ್ ಹೇಳಿದೆ.

“ಲೊಂಡಿಯಾನಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ದೇಶವು ಶೋಕಿಸುತ್ತದೆ” ಎಂದು ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕೀನ್ಯಾದಲ್ಲಿ ನಡೆದ ರಸ್ತೆ ಅಪಘಾತಗಳನ್ನು ಹೋಲಿಸಿದರೆ ಈ ಅಪಘಾತ ಅತ್ಯಂತ ಭೀಕರ ಅಪಘಾತವಾಗಿದೆ. ಕಳೆದ ವರ್ಷ ಬಸ್ಸೊಂದು ಸೇತುವೆಯಿಂದ ಕಣಿವೆಗೆ ಉರುಳಿ 34 ಮಂದಿ ಸಾವನ್ನಪ್ಪಿದ್ದ ಘಟನೆ ಮಧ್ಯ ಕೀನ್ಯಾದಲ್ಲಿ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next