ಬೆಂಗಳೂರು: ಬನ್ನೇರುಘಟ್ಟ-ತುಮಕೂರು ರಸ್ತೆ ಬಳಿಯ ನೈಸ್ ರಸ್ತೆಯಲ್ಲಿ ಕಾರಿಗೆ ಲಾರಿ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ (08)ರಾತ್ರಿ ಸಂಭವಿಸಿದೆ.
Advertisement
ಬನ್ನೇರುಘಟ್ಟ-ತುಮಕೂರು ರಸ್ತೆ ಬಳಿಯ ಪುರವಂಕರ ಅಪಾರ್ಟ್‌ಮೆಂಟ್ ಸಮೀಪ ನಿಂತಿದ್ದ ಕಾರಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ.
ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕುಮಾರಸ್ವಾಮಿ ಲೇಜೌಟ್ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.