Advertisement

ಕಲ್ಲಿಗೆ ಗುದ್ದಿದ ಬೈಕ್ : ಸವಾರ ಸ್ಥಳದಲ್ಲೇ ಸಾವು

04:42 PM Jul 31, 2021 | Team Udayavani |

ಮುದ್ದೇಬಿಹಾಳ: ಬೈಕ್ ರಸ್ತೆಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮುದ್ದೇಬಿಹಾಳ ತಾಲೂಕು ಬಸರಕೋಡ ಗ್ರಾಮದ ವಿವಾಹಿತ ಬಸವರಾಜ ಕರಬಸಪ್ಪ ಕೊಟಗಿ (38) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಿಣಜಗಿ-ಮೂಕಿಹಾಳ ಮದ್ಯೆ ರಾಜ್ಯ ಹೆದ್ದಾರಿ ಹತ್ತಿರ ನಡೆದಿದೆ.

Advertisement

ಮೃತನ ತಂದೆ ಘಟನೆ ಕುರಿತು ಸಂಶಯ ವ್ಯಕ್ತಪಡಿಸಿದ್ದು ಜಿಲ್ಲಾ ಕೇಂದ್ರದಿಂದ ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿತ್ತು. ಆದರೆ ಯಾವುದೇ ಸುಳಿವು ದೊರಕಲಿಲ್ಲ. ಮೃತನ ತಂದೆ ಕರಬಸಪ್ಪ ಕೊಟಗಿ ದೂರು ನೀಡಿದ್ದು ತನ್ನ ಮಗನ ಸಾವಿನ ಕುರಿತು ತನಿಖೆ ನಡೆಸುವಂತೆ ಕೋರಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುದ್ದೇಬಿಹಾಳ ಸಿಪಿಐ ಆನಂದ ವಾಘ್ಮೋಡೆ, ತಾಳಿಕೋಟೆ ಪಿಎಸೈ ವಿನೋದ ದೊಡಮನಿ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ.

ಇದನ್ನೂ ಓದಿ :ಕೋಟ : ಮನೆಗಳ್ಳತನ, ದೇಗುಲ ಕಳ್ಳತನದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next