Advertisement

ಟ್ರ್ಯಾಕ್ಟರ್ ಪಲ್ಟಿಯಾಗಿ 10 ಮಂದಿ ನರೇಗಾ ಕೂಲಿ ಕಾರ್ಮಿಕರಿಗೆ ಗಾಯ

06:38 PM Mar 13, 2021 | Team Udayavani |

ಮಸ್ಕಿ (ರಾಯಚೂರು): ಟ್ರ್ಯಾಕ್ಟರ್ ಪಲ್ಟಿಯಾಗಿ 10 ಜನ ನರೇಗಾ ಕಾರ್ಮಿಕರು ಗಾಯಗೊಂಡಿದ್ದರೆ, ಒಬ್ಬರಿಗೆ ಗಂಭೀರ ಗಾಯವಾದ ಘಟನೆ ಗುಡಿಹಾಳ ಸಮೀಪ ಸಂಭವಿಸಿದೆ.

Advertisement

ತಾಲೂಕಿನ ಕೋಳಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿಹಾಳ ಕೆರೆ ಕಾಮಗಾರಿ ಕೆಲಸಕ್ಕಾಗಿ ಹಂಚಿನಾಳ ಗ್ರಾಮದಿಂದ ನರೇಗಾ ಕೂಲಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಕೆಲಸ  ಮುಗಿಸಿಕೊಂಡು ಮನೆಗೆ  ಬರುವಾಗ ದುರ್ಘಟನೆ ನಡೆದಿದೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನುಳಿದ ಗಾಯಾಳುಗಳನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ .  ಸ್ಥಳಕ್ಕೆ ತುರುವಿಹಾಳ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ಮತ್ತೆ ಪ್ರೀತಿಗೆ ಜಾರಿದ್ರಾ ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸೇನ್ ಖಾನ್

Advertisement

Udayavani is now on Telegram. Click here to join our channel and stay updated with the latest news.

Next