Advertisement
ಹಲವಾರು ವರ್ಷಗಳಿಂದ ಇಲ್ಲಿ ವಾಹನಗಳು ಕತ್ತಲಲ್ಲಿ ಸಂಚಾರ ಮಾಡುತ್ತಿದೆಯಾದರೂ ವಾಹನ ಚಾಲಕರು, ಜನರು ತಮ್ಮ ಸಮಸ್ಯೆ ಹೇಳದೇ ಸುಮ್ಮ ನಿರುವುದು ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳದಿರುವುದು ಒಂದು ಕಾರಣವೆಂದು ಹೇಳಲಾಗುತ್ತಿದೆ.
ಕುಂದೋಡಿಯಿಂದ ಪದ್ರೆಂಗಿಯವರೆಗಿನ ರಸ್ತೆಯ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ದಾರಿದೀಪವೇ ಇಲ್ಲ. ಕುಂದೋಡಿಯ (ಮೈಲು ಕಲ್ಲು) ಕಿ.ಮೀ. ಕಲ್ಲು ನಿಂದ ಒಂದು ಕಿ.ಮೀ.ನಲ್ಲಿ 2 ವಿದ್ಯುತ್ ದೀಪಗಳು ಮಾತ್ರ ಕಾಣಿಸುತ್ತವೆ. ಅದು ಕೂಡ ರಾತ್ರಿ ಸರಿಯಾಗಿ ಉರಿಯುತ್ತದೆ ಎಂದು ಹೇಳುವಂತಿಲ್ಲ. 14 ವಿದ್ಯುತ್ ಕಂಬಗಳಿಗೆ ದಾರಿದೀಪವೇ ಇಲ್ಲ. ಅದರಲ್ಲಿ ನಿರಂತರ 8 ವಿದ್ಯುತ್ ಕಂಬಗಳಲ್ಲಿ ದಾರಿದೀಪವೇ ಇಲ್ಲ. ಒಂದರಲ್ಲಿ ದಾರಿ ದೀಪ ಇದ್ದರೆ ಮತ್ತೆ 2ಕಂಬಗಳಲ್ಲಿ ಇಲ್ಲ, ಹೀಗೆ ಮಧ್ಯೆಮಧ್ಯೆ ಒಂದರಲ್ಲಿ ದಾರಿ ದೀಪಗಳಿವೆ.ದುರ್ಗಾನಗರ ಬಸ್ಸು ನಿಲ್ದಾಣದಲ್ಲಿ ಪಂಚಾಯತ್‌ನಿಂದ 2 ದಾರಿದೀಪಗಳನ್ನು ಹಾಕಿಸಿದ್ದಾರೆ.
Related Articles
ದುರ್ಗಾನಗರ ಸಮೀಪದಲ್ಲಿರುವ ಮಾವಿನ ಮರ ರಸ್ತೆಯ ಬದಿಯಲ್ಲಿಯೇ ಇರುವುದರಿಂದ ರಾತ್ರಿಯಲ್ಲಿ ದಾರಿ ದೀಪ ಇಲ್ಲದ ಕಾರಣ ವಾಹನಕ್ಕೆ ಅಪಾಯ ವಿದೆ. ಈಗಾಗಲೇ ಅಪಘಾತಗಳು ಇಲ್ಲಿ ಸಂಭವಿಸಿವೆ. ತಿರುವುಗಳಿಂದ ಕೂಡಿದ ರಸ್ತೆ ಅಪಘಾತಕ್ಕೆ ಇನ್ನೊಂದು ಕಾರಣವಾಗಿದೆ.
Advertisement
ಮಹಿಳೆಯರಿಗೆ ಸಂಕಷ್ಟನಿತ್ಯ ಹಲವಾರು ಬಸ್ಸುಗಳು, ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುವವರಿಗೆ ವಾಹನಗಳು ಸಮೀಪ ಬಂದರೂ ಗೊತ್ತಾಗುವುದಿಲ್ಲ. ಸಂಜೆಯ ಬಳಿಕ ಮಹಿಳೆಯರು ನಡೆದು ಕೊಂಡು ಹೋಗುವುದೇ ಸುರಕ್ಷಿತವಲ್ಲ ಎನ್ನುವಂತಾಗಿದೆ. ಹೈಟೆಶ್ಶನ್ ಕಂಬಕ್ಕೆ ದಾರಿದೀಪ ಹಾಕುವಂತಿಲ್ಲ
ಹೈಟೆಶ್ಶನ್ ತಂತಿ ಹಾದೂ ಹೋಗುವ ಕಂಬಕ್ಕೆ ದಾರಿದೀಪ ಹಾಕುವಂತಿಲ್ಲ. ಇಲ್ಲಿ ಹೆಚ್ಚಾಗಿ ಹೈಟೆಶ್ಶನ್ ತಂತಿ ಹಾದು ಹೋಗುವ ಕಂಬಗಳು ಈ ರಸ್ತೆಯ ಬದಿಯಲ್ಲಿರುವುದರಿಂದ ದಾರಿ ದೀಪಕ್ಕೆ ಬೇರೆಯೇ ತಂತಿ ಹಾಕಬೇಕಾದ ಕಾರಣ ಇಲ್ಲಿ ದೀಪಗಳು ಉರಿಯಲು ಸಾಧ್ಯವಿಲ್ಲವಾಗಿದೆ. ಕ್ರಮ ತೆಗೆದುಕೊಳ್ಳಬೇಕಾಗಿದೆ
ರಸ್ತೆಯ ಬದಿಯಲ್ಲಿ ಹೆಚ್ಚಿನವು ಹೈಟೆಶ್ಶನ್ ತಂತಿಗಳು ಹಾದು ಹೋಗಿವೆ. ಹೊಸ ಲೈನ್ ಗಳಿಗೆ ಪಂಚಾಯತ್ ಕಾರ್ಯಯೋಜನೆ ರೂಪಿಸಬೇಕಾಗಿದೆ. ದಾರಿದೀಪಕ್ಕೆ ಬೇರೆಯೇ ಕಂಬಗಳನ್ನು ಹಾಕಬೇಕಾಗಿದೆ. ಈಗ ಚುನಾವಣೆ ಆದ ಕಾರಣ ಇದನ್ನು ತಾಲೂಕು ಕಾರ್ಯನಿರ್ವಾಹಣಾಧಿಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಬೇಕಾಗಿದೆ.
– ಭೋಗಮಲ್ಲಣ್ಣ, ಪಿಡಿಒ,
ಎಡಪದವು ಗ್ರಾಮ ಪಂಚಾಯತ್. ಅಪಘಾತಕ್ಕೆ ಕಾರಣ
ಕಳೆದ ಆರು ವರ್ಷಗಳಿಂದ ಈ ರಸ್ತೆಯಲ್ಲಿ ರಾತ್ರಿ ಕತ್ತಲಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದೇನೆ. ಕತ್ತಲಿನಿಂದ ಕೂಡಿದ ಈ ಪ್ರದೇಶದಲ್ಲಿ ಸಂಚರಿಸುವುದು ಭಯವಾಗುತ್ತದೆ. ಕತ್ತಲಲ್ಲಿ ಇಲ್ಲಿರುವ ತಿರುವುಗಳು ಅಪಘಾತಕ್ಕೆ ಕಾರಣವಾಗಬಹುದು ಎಂದು ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರೋರ್ವರು ತಿಳಿಸಿದ್ದಾರೆ. ಸುಬ್ರಾಯ ನಾಯಕ್ ಎಕ್ಕಾರು