Advertisement

ಗೊಂಡಬಾಳ ಗ್ರಾಮ ಪಂಚಾಯತ್ ಗೆ ದಾರಿ ಯಾವುದಯ್ಯ?

12:11 PM Oct 13, 2022 | Team Udayavani |

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ತಾಲೂಕಿನ ಗೊಂಡಬಾಳ ಗ್ರಾಮ ಪಂಚಾಯತ್ ಗೆ ತೆರಳಲು ದಾರಿಯೇ ಇಲ್ಲದಂತಾಗಿ ಗ್ರಾಮದ ಜನರು ತೊಂದರೆ ಎದುರಿಸುವಂತಾಗಿದೆ.

Advertisement

ತಾಲೂಕಿನ ಗೊಂಡಬಾಳ ಗ್ರಾಪಂ ಮೂರು ಗ್ರಾಮಗಳ ವ್ಯಾಪ್ತಿ ಹೊಂದಿದ್ದು ನಿತ್ಯವೂ ಸರ್ಕಾರಿ ಕೆಲಸಕ್ಕೆ ಹಾಗೂ ತಮ್ಮ ಇತರೆ ಕೆಲಸಕ್ಕಾಗಿ ತೆರಳುವ ಜನರಿಗೆ ಮಳೆಯಿಂದಾಗಿ ದಾರಿ ಬಂದ್ ಆಗಿದೆ. ಎಲ್ಲವೂ ಮಣ್ಣಿನ ರಸ್ತೆಗಳಿದ್ದು ವಾಹನಗಳು ಸೇರಿ ಜನ ಸಾಮಾನ್ಯರೇ ಕಾಲ್ನಡಿಯಲ್ಲಿ ತೆರಳುವುದು ದುಸ್ಥರವಾಗಿದೆ.

ಅತಿಯಾದ ಮಳೆಯಿಂದ ಗ್ರಾಮ ಪಂಚಾಯತಿ ಆವರಣ ಕೆಸರು ಗದ್ದೆಯಂತಾಗಿದೆ. ಎಲ್ಲಿ ಕಾಲಿಟ್ಟರೂ ಜಾರಿ ಬೀಳುವಂತ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ನಮಗೆ ಮುಖ್ಯ ರಸ್ತೆಯಿಂದ ಗ್ರಾಪಂ ಕಚೇರಿಯವರೆಗೂ ಸಿಸಿ ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಹಲವು ಬಾರಿ ಕೊಪ್ಪಳ ಶಾಸಕರಿಗೆ ಮನವಿ ಮಾಡಿದರೂ ಸಹ ಈ ವರೆಗೂ ಮಾಡಿಕೊಟ್ಟಿಲ್ಲ.

ಗ್ರಾಮ ಪಂಚಾಯತ್ ಗೆ ತೆರಳಲು ಗ್ರಾಪಂ ಸದಸ್ಯರೇ ನಿತ್ಯ ಪ್ರಯಾಸ ಮಡುವಂತಾಗಿದೆ. ಇನ್ನು ಜನ ಸಾಮಾನ್ಯರ ಪರಿಸ್ಥಿತಿ ಹೇಗೆ ಎಂದು ಸ್ವತಃ ಗ್ರಾಪಂ ಸದಸ್ಯ ಶೇಖರಯ್ಯ ಇನಾಮದಾರ್ ವೇದನೆ ವ್ಯಕ್ತಪಡಿಸಿದ್ದಾರೆ. ನಮಗೆ ಸಿಸಿ ರಸ್ತೆ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ. ಬರಿ ಮಣ್ಣು ಹಾಕಿದರೆ ಮತ್ತೆ ಮಳೆ ನೀರಿಗೆ ಅದು ಕಿತ್ತು ಹೋಗಲಿದೆ. ಅಧಿಕಾರಿಗಳು ಇದಕ್ಕೆ ಸ್ಪಂದಿಸಲಿ ಎಂದು ಒತ್ತಾಯ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next