ಗಂಗಾವತಿ: ಕಳೆದ 1 ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ನೀಲಕಂಠೇಶ್ವರ ಕ್ಯಾಂಪಿನ ರಸ್ತೆಗಳು ಕೆಸರು ಗದ್ದೆಯಾಗಿದ್ದು, ಮಳೆ ನೀರಿನಿಂದಾಗಿ ಗುಂಡಿಗಳು ನಿರ್ಮಾಣವಾಗಿವೆ.
ಕಳೆದ ಇಪ್ಪತ್ತು ವರ್ಷಗಳ ಹಿಂದೆ ನಿರ್ಮಿಸಿದ ಈ ರಸ್ತೆಗೆ ನಗರಸಭೆಯವರು ಮಾತ್ರ ಇದನ್ನು ಯಾವುದೇ ರೀತಿಯಲ್ಲಿ ಅಭಿವೃದ್ಧಿ ಪಡಿಸಿಲ್ಲ. ಹೀಗಾಗಿ ಬಸ್ ಡಿಪೋ ರೋಡ್, ಆನಂದ ನರ್ಸಿಂಗ್ ಹೋಮ್ ಹಿಂದುಗಡೆಯ ರಸ್ತೆಗಳು ಸಂಪೂರ್ಣವಾಗಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ.
ಇದನ್ನೂ ಓದಿ:ವರದಕ್ಷಣೆ ಕಿರುಕುಳ : 6 ತಿಂಗಳ ಜೈಲುವಾಸದ ಶಿಕ್ಷೆ ನೀಡಿದ ನ್ಯಾಯಾಲಯ
25 ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆಗಳು ಮಳೆಯಿಂದಾಗಿ ಹದಗೆಟ್ಟಿದ್ದು, ಮೊಣಕಾಲು ತನಕ ಗುಂಡಿಗಳು ಬಿದ್ದಿವೆ.ಈ ಗುಂಡಿಗಳಲ್ಲಿ ಹಲವಾರು ಜನರು ಬಿದ್ದು ವಾಹನ ಸವಾರರು ಕೈಕಾಲು ಮುರಿದುಕೊಂಡಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ರಸ್ತೆ, ಶೌಚಾಲಯ, ಬೀದಿದೀಪಗಳನ್ನು ನಿರ್ಮಿಸುವುದಾಗಿ ಭರವಸೆ ನೀಡುತ್ತಾರೆ ಹೊರತು ಯಾವೊಬ್ಬ ಪ್ರತಿನಿಧಿಯೂ ಇಲ್ಲಿ ಬಂದು ಕೆಲಸ ಮಾಡುತ್ತಿಲ್ಲ.
ಹೀಗಾಗಿ ಬೇಸತ್ತಿರುವ ಜನರು ಈ ಕೂಡಲೇ ರಸ್ತೆಗೆ ಸಿಮೆಂಟ್ ಅಥವಾ ಡಾಂಬರ್ ರಸ್ತೆ ನಿರ್ಮಿಸುವಂತೆ ವಾರ್ಡಿನ ಒತ್ತಾಯಿಸುತ್ತಿದ್ದಾರೆ.