ಕೆಜಿಎಫ್: ದಶಕಗಳ ಬೇಡಿಕೆ ಯಾದ ಊರಿಗಾಂ ರಸ್ತೆ ವಿಸ್ತರಣೆಗೂ ಕಾಲ ಕೂಡಿ ಬಂದಿದ್ದು,ನಗರಸಭೆಮತ್ತುಬಿಜಿಎಂಎಲ್ ಅಧಿಕಾರಿಗಳು ಬುಧವಾರ ಜಂಟಿಯಾಗಿ ನಡೆಸಿದ ಕಾರ್ಯಚಾರಣೆಯಲ್ಲಿ ಊರಿಗಾಂ ರೈಲ್ವೆ ನಿಲ್ದಾಣದ ಬಳಿ ರಸ್ತೆ ಎರಡು ಬದಿಗಳಲ್ಲಿಕಟ್ಟಡ ತೆರವುಮಾಡಿಸಿದರು.
ನಗರದಲ್ಲಿ ಅಮೃತ ಸಿಟಿ ಯೋಜನೆ ನಡೆಯುತ್ತಿದ್ದು, ಊರಿಗಾಂ- ರಾಬರ್ಟಸನ್‌ಪೇಟೆ ನಡುವಿನ ರಸ್ತೆ ಅಭಿವೃದ್ಧಿಯಾಗಬೇಕಾಗಿದೆ. ಅದಕ್ಕಾಗಿ 175 ಲಕ್ಷ ರೂ.ಮೀಸಲಾಗಿದೆ. ಊರಿಗಾಂ ರೈಲ್ವೆ ನಿಲ್ದಾಣದ ಬಳಿ ತಿರುವಿನಲ್ಲಿ ವೃತ್ತ ರಚನೆಯಾಗಬೇಕಾಗಿದೆ.
ಅಲ್ಲಿ 50 ಅಡಿಗೂ ಮೀರಿ ಜಾಗ ಬೇಕಾಗಿದೆ.ಉಳಿದೆಡೆ50ಅಡಿಗಳಜಾಗ ರಸ್ತೆ ನಿರ್ಮಾಣಕ್ಕೆ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಶ್ರೀಧರ್ ನೇತೃತ್ವದಲ್ಲಿ ರಸ್ತೆಯ ಅಕ್ಕಪಕ್ಕದ ಒತ್ತುವರಿ ಕಟ್ಟಡವನ್ನು ನಗರಸಭೆ ಸಿಬ್ಬಂದಿ ತೆರವು ಮಾಡಿದರು.
ಇದನ್ನೂ ಓದಿ :50ಕ್ಕೂ ಹೆಚ್ಚು ಮಂದಿಗೆ ಕಚ್ಚಿದ ನಾಯಿ : ನಾಯಿಯನ್ನು ಅಟ್ಟಾಡಿಸಿ ಕೊಂದ ಸಾರ್ವಜನಿಕರು
ಜೊತೆಗೆಬಿಜಿಎಂಎಲ್‌ಅಧಿಕಾರಿಗಳು ಕೂಡ ಕೈಜೋಡಿಸಿದರು. ಅವರು ತಮ್ಮ ನೆಲದಲ್ಲಿ ಒತ್ತುವರಿ ಮಾಡಿಕೊಂಡು ಕಟ್ಟಿದ್ದ ಕಟ್ಟಡಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಿದರು. ಜ್ವಾಲ ಪೆಟ್ರೋಲ್ ಬಂಕ್ ವರೆಗೂ ತೆರವು ಕಾರ್ಯಾಚರಣೆ ನಡೆಯಿತು. ತೆರವು ಕಾರ್ಯ ಸುಗಮವಾಗಿ ನಡೆಯುತ್ತಿದ್ದು, ಅತಿ ಶೀಘ್ರದಲ್ಲಿಯೇ ಜೋಡಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಪೌರಾಯುಕ್ತ ಶ್ರೀಧರ್ ತಿಳಿಸಿದರು.
ಅಮೃತಸಿಟಿ ಯೋಜನೆಯ ತಂತ್ರಜ್ಞ ರಾಜೇಶ್‌ಈಸಂದರ್ಭದಲ್ಲಿಹಾಜರಿದ್ದು, ರಸ್ತೆ ಗುರುತು ಹಾಕಿಕೊಟ್ಟರು.