Advertisement

ರೈಲು ಹಳಿ, ರಸ್ತೆ ಅಭಿವೃದ್ಧಿ: 1,350 ಹೆಕ್ಟೇರ್‌ ಭೂಸ್ವಾಧೀನ ಬಾಕಿ

06:07 AM Jan 11, 2019 | |

ಕಾಸರಗೋಡು : ಕೇರಳ ರಾಜ್ಯದಲ್ಲಿ ರೈಲ್ವೇ ಹಳಿ ಅಭಿವೃದ್ಧಿ ಮತ್ತು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಒಟ್ಟು ಇನ್ನೂ 1,350 ಹೆಕ್ಟೇರ್‌ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದೆ. ಅದರಲ್ಲೂ ಕಾಸರಗೋಡಿನಿಂದ ತಿರುವನಂತಪುರದ ವರೆಗಿನ ರಸ್ತೆ ಅಭಿವೃದ್ಧಿಗೆ 1,119 ಹೆಕ್ಟೇರ್‌ಭೂಸ್ವಾಧೀನ ನಡೆಯಬೇಕಾಗಿದೆ.

Advertisement

ಕಾಸರಗೋಡಿನಿಂದ ತಿರುವನಂತಪುರದ ವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಒಟ್ಟು 2,650 ಹೆಕ್ಟೇರ್‌ ಭೂಪ್ರದೇಶ ಸ್ವಾಧೀನ ಮಾಡಬೇಕಾಗಿದ್ದು, ಅದರಲ್ಲಿ ಈಗಾಗಲೇ 1,460 ಹೆಕ್ಟೇರ್‌ ಭೂಸ್ವಾಧೀನ ಪ್ರಕ್ರಿಯೆ ಪೂರ್ತಿಯಾಗಿದೆ. ಇನ್ನೂ 1,119 ಹೆಕ್ಟೇರ್‌ಭೂಪ್ರದೇಶ ಸ್ವಾಧೀನಪಡಿಸಲು ಬಾಕಿ ಉಳಿದುಕೊಂಡಿದೆ.

ಭೂಸ್ವಾಧೀನದ ಪ್ರದೇಶಗಳು
ತಲಪಾಡಿಯಿಂದ ಚೆಂಗರದ ವರೆಗೆ 36 ಹೆಕ್ಟೇರ್‌ ಭೂಪ್ರದೇಶ, ಚೆಂಗರದಿಂದ ನೀಲೇಶ್ವರದ ವರೆಗೆ 41 ಹೆಕ್ಟೇರ್‌, ನೀಲೇಶ್ವರದಿಂದ ತಳಿಪರಂಬದ ವರೆಗೆ 99 ಹೆಕ್ಟೇರ್‌, ತಳಿಪರಂಬದಿಂದ ಮುಳಪ್ಪಿಲಂಗಾಡ್‌ ವರೆಗೆ 103 ಹೆಕ್ಟೇರ್‌, ತಲಶ್ಯೇರಿಯಿಂದ ಮಾಹೆವರೆಗೆ 37 ಹೆಕ್ಟೇರ್‌, ಅಳಿಯೂರುನಿಂದ ವೆಂಗಳಂವರೆಗೆ 129 ಹೆಕ್ಟೆರ್‌, ವೆಂಗಳಂನಿಂದ ರಾಮನಾಟ್ಟುಕ್ಕರದ ವರೆಗೆ 1 ಹೆಕ್ಟೇರ್‌, ರಾಮನಾಟ್ಟುಕ್ಕರದಿಂದ ಕುಟ್ಟಿಪ್ಪುರದ ವರೆಗೆ 140 ಹೆಕ್ಟೇರ್‌, ಕುಟ್ಟಿಪ್ಪುರದಿಂದ ಕಪ್ಪಿರಿಕಾಟ್ಟ್ ವರೆಗೆ 55 ಹೆಕ್ಟೆರ್‌, ಕಪ್ಪಿರಿಕಾಟ್ಟ್ನಿಂದ ಇಡಪಳ್ಳಿವರೆಗೆ 263 ಹೆಕ್ಟೇರ್‌, ತುರವೂರಿನಿಂದ ಪರವೂರು ವರೆಗೆ 47 ಹೆಕ್ಟೇರ್‌, ಪರವೂರಿನಿಂದ ಕೊಟ್ಟನ್‌ಕುಳಂಗರದ ವರೆಗೆ 65 ಹೆಕ್ಟೇರ್‌, ಕೊಟ್ಟನ್‌ಕುಳಂಗರದಿಂದ ಕೊಲ್ಲಂ ಬೈಪಾಸ್‌ವರೆಗೆ 47 ಹೆಕ್ಟೇರ್‌, ಬೈಪಾಸ್‌ನಿಂದ ಕಡಂಬಟ್ಟುಕೋಣಂವರೆಗೆ 28 ಹೆಕ್ಟೇರ್‌, ಕಡಂಬಟ್ಟುಕೋಣಂನಿಂದ ಕುಳಕೂಟ್ಟಂ ವರೆಗೆ 28 ಹೆಕ್ಟೇರ್‌ ಭೂಪ್ರದೇಶ ಸ್ವಾಧೀನ ಮಾಡಲು ಬಾಕಿ ಉಳಿದುಕೊಂಡಿದೆ.

ಹೆಚ್ಚು ಭೂಸ್ವಾಧೀನದ ಸ್ಥಳ
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅತ್ಯಂತ ಹೆಚ್ಚು ಭೂಸ್ವಾಧೀನ ಮಾಡಲಿರುವ ಸ್ಥಳವೆಂದರೆ ಕಾಪ್ಪಿರಿಕ್ಕಾಡ್‌ನಿಂದ ಇಡಪಳ್ಳಿವರೆಗೆ 263 ಹೆಕ್ಟೆರ್‌ಭೂಪ್ರದೇಶ ಸ್ವಾಧೀನ ಪಡಿಸಿಕೊಳ್ಳಬೇಕು. ಸ್ಥಳೀಯರ ವಿರೋಧ, ನ್ಯಾಯಾಲಯಗಳಲ್ಲಿ ಮೊಕ ದ್ದಮೆ ಮತ್ತು ಸರ್ವೆ ತಂಡದಲ್ಲಿ ಸಿಬಂದಿಗಳ ಕೊರತೆಯಿಂದಾಗಿ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ.

ರೈಲು ಹಳಿ ಅಭಿವೃದ್ಧಿ
ಕೆಲವೇ ಹೆಕ್ಟೆರ್‌ಪ್ರದೇಶವನ್ನು ಸ್ವಾಧೀನ ಮಾಡಿಕೊಂಡಲ್ಲಿ ಕೋಟ್ಟಯಂ- ಎರ್ನಾಕುಳಂ ರೈಲು ಹಳಿ ದ್ವಿಗುಣಗೊಳಿಸುವ ಕಾಮಗಾರಿ ಪೂರ್ತಿಯಾಗಲಿದೆ.

Advertisement

ಅದೇ ವೇಳೆ ಶಬರಿ ರೈಲು ಹಳಿ ನಿರ್ಮಾಣಕ್ಕೆ ಬೇಕಾಗಿರುವ 151 ಹೆಕ್ಟೆರ್‌ಪ್ರದೇಶದಲ್ಲಿ ಒಂದು ಹೆಕ್ಟೆರ್‌ಪ್ರದೇಶವನ್ನೂ ಸ್ವಾಧೀನ ಪಡಿಸಿಕೊಂಡಿಲ್ಲ. ಸರ್ವೆ ಬಿಟ್ಟರೆ ಯಾವುದೇ ಕೆಲಸ ಸಾಗಿಲ್ಲ. ರೂಟ್ ನಿಗದಿಯಾಗಿದ್ದರೂ, ಸ್ಥಳ ಗುರುತು ಹಾಕಿಕೊಂಡು ಭೂ ಸ್ವಾಧೀನಗೊಳಿಸಲು ತೀರ್ಮಾನ ತೆಗೆದು ಕೊಳ್ಳಬೇಕಾಗಿದೆ.

ವಿಮಾನ ನಿಲ್ದಾಣ
ತಿರುವನಂತಪುರ ವಿಮಾನ ನಿಲ್ದಾಣ ಅಭಿವೃದ್ಧಿಗೆ 18 ಎಕ್ರೆ ಸ್ಥಳ ಸ್ವಾಧೀನ ನಡೆಯಬೇಕಾಗಿದೆ. ಇದಕ್ಕಾಗಿ ಪ್ರಕ್ರಿಯೆ ನಡೆಯುತ್ತಿದೆ.

 ಶೀಘ್ರ ಪೂರ್ಣ
 ರೈಲ್ವೇ, ರಸ್ತೆ ಅಭಿವೃದ್ಧಿಗೆ ಅಗತ್ಯದ ಭೂಸ್ವಾಧೀನ ಪ್ರಕ್ರಿಯೆಗೆ ಸಹಜವಾದ ವಿಳಂಬವಾಗುತ್ತಿದೆ. ರಸ್ತೆ ಚತುಷ್ಪಥಗೊಳಿಸಲು ಮಧ್ಯ ಕೇರಳದಲ್ಲಿ ಹೆಚ್ಚಿನ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದೆ. ಎರ್ನಾಕುಳಂ-ಚೆಂಗನ್ನೂರು ರೈಲು ಹಳಿ ದ್ವಿಗುಣಗೊಳಿಸಲು ನಾಮಮಾತ್ರ ಸ್ಥಳ ಸಾಕು. ಈ ಎಲ್ಲಾ ಯೋಜನೆಗಳು ಶೀಘ್ರವೇ ಪೂರ್ತಿಗೊಳಿಸಲು ಸಾಧ್ಯವಾಗಲಿದೆ.
-ಇ.ಚಂದ್ರಶೇಖರನ್‌,
 ಕಂದಾಯ ಸಚಿವ

ರೈಲ್ವೇ ಅಭಿವೃದ್ಧಿಗೆ ಭೂಸ್ವಾಧೀನ ಬಾಕಿ
. ಎರ್ನಾಕುಳಂ-ಚೆಂಗನ್ನೂರು ರೈಲು ಹಳಿ ದ್ವಿಗುಣಗೊಳಿಸಲು ಕುರುಪ್ಪುಂತರ-ಚಿಂಗಾವನಂ ಪ್ರದೇಶದಲ್ಲಿ 4.32 ಹೆಕ್ಟೇರ್‌. .ತಿರುವಲ್ಲ ಗೂಡ್ಸ್‌ ಯಾರ್ಡ್‌ಗೆ 75.02 ಹೆಕ್ಟೇರ್‌.
. ಮೂರನೇ ಹಂತದ ಹರಿಪ್ಪಾಡ್‌-ಅಂಬಲಪ್ಪುಳ ಲೈನ್‌ ದ್ವಿಗುಣಗೊಳಿಸಲು 7.40 ಹೆಕ್ಟೇರ್‌. 
. ಅರೂರು ಸೇತುವೆಗೆ 0.026 ಹೆಕ್ಟೇರ್‌. .ಚೇರ್ತಲದಲ್ಲಿ ರೈಲ್ವೇ ಸುರಕ್ಷೆಗಾಗಿ 0.0174 ಹೆಕ್ಟೇರ್‌. 
. ಕನ್ಯಾಕುಮಾರಿ ಹಳಿ ದ್ವಿಗುಣಗೊಳಿಸಲು ತಿರುವನಂತಪುರದಿಂದ ನೇಮಂವರೆಗೆ 15 ಹೆಕ್ಟೇರ್‌. ನೇಮಂನಿಂದ ನೆಯ್ನಾಟಿಂಕರವರೆಗೆ 3.20 ಹೆಕ್ಟೇರ್‌. 
. ಅಂಗಮಾಲಿ-ಶಬರಿ ರೈಲು ಹಳಿ ನಿರ್ಮಾಣ : ಎರ್ನಾಕುಳಂ ಜಿಲ್ಲೆಯಲ್ಲಿ 131.62 ಹೆಕ್ಟೇರ್‌. ಕೋಟ್ಟಯಂ ಜಿಲ್ಲೆಯಲ್ಲಿ 13 ಗ್ರಾಮಗಳಲ್ಲಾಗಿ 22.19 ಹೆಕ್ಟೆರ್‌ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಾಗಿದೆ.

ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next