Advertisement
ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ಹಾಗೂ ಮದ್ದೂರು ತಾಲೂಕು ಗಡಿಭಾಗದಲ್ಲಿ ಇರುವ ಸುಗ್ಗನಹಳ್ಳಿಯಿಂದ ಕೊಡವತ್ತಿ ಹಾಗೂ ಕೆಶಿಪ್ ರಸ್ತೆಯಿಂದ ತೊರೆಬೊಮ್ಮನಹಳ್ಳಿ ವರೆಗೆ ಸಮರ್ಪಕವಾಗಿ ರಸ್ತೆ ಇಲ್ಲದೇ ಇಲ್ಲಿನ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದರು. ಇದನ್ನು ಮನಗೊಂಡ ಶಾಸಕರು, ಹೇಮಾವತಿ ಇಲಾಖೆಯಿಂದ 6 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಕೊನೆಗೂ ರಸ್ತೆಗೆ ಮುಕ್ತಿ ಸಿಕ್ಕಿದ್ದು, ಮೂರು ಗ್ರಾಮದ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತ್ತಾಗಿದೆ.
Related Articles
Advertisement
ಗ್ರಾಮಸ್ಥರಿಗೆ ಊಟ ಬಡಿಸಿದ ಶಾಸಕ: ಕೊಡವತ್ತಿ ಗ್ರಾಮದಲ್ಲಿ ಕೈಗೊಂಡ ರಸ್ತೆ ಕಾಮಗಾರಿ ವೇಳೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದಂತೆ ಊಟಕ್ಕೆ ಸಾಲಾಗಿ ಕುಳಿತ್ತಿದ್ದ ಗ್ರಾಮಸ್ಥರಿಗೆ ಸ್ವತಃ ಶಾಸಕರೇ ಊಟ ಬಡಿಸಿ ಗ್ರಾಮಸ್ಥರೊಂದಿಗೆ ಸಂತಸ ಹಂಚಿಕೊಂಡರು.
ಹೇಮಾವತಿ ಎಇಇ ಮುರುಳಿ, ಎಇ ಜಯರಾಜು, ತಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಗ್ರಾಪಂ ಸದಸ್ಯ ಬಾ.ನ.ರವಿ ಮತ್ತಿತರರು ಇದ್ದರು.
ಸಮಿಶ್ರ ಸರ್ಕಾರವು ತಾಲೂಕಿನ ರಸ್ತೆ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸ ಗಳಿಗೆ ಮಂಜೂರು ಮಾಡಿದ ನೂರಾರು ಕೋಟಿ ರೂ.ಬಿಜೆಪಿ ಹಿಂಪಡೆದ ಕಾರಣ ರಸ್ತೆ ಕಾಮಗಾರಿಗೆ ಹಿನ್ನಡೆ ಆಗಿದೆ. ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಿ ಅನುದಾನ ಮಂಜೂರು ಮಾಡಿಸಿ ಕಾಮಗಾರಿಯನ್ನು ಹಂತ ಹಂತವಾಗಿ ಎಲ್ಲಾ ಗ್ರಾಮಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. –ಡಾ.ಎಚ್.ಡಿ.ರಂಗನಾಥ್, ಶಾಸಕ