ಬಾಗೇಪಲ್ಲಿ: 2018ರ ವಿಧಾನಸಭಾ ಚುನಾವಣೆ ಬಹಿಷ್ಕಾರ ಹಾಕಿರುವ ಮರಪಲ್ಲಿ ತಾಂಡ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕರು ಒಪ್ಪಿದರೆ ಸ್ವಂತ ಹಣದಲ್ಲಿ ಗ್ರಾಮಕ್ಕೆ ರಸ್ತೆ ಮಾಡಿಕೊಡುವುದಾಗಿ ಸಮಾಜ ಸೇವಕ ಆರ್.ಮಿಥುನ್‌ರೆಡ್ಡಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ತಾ
ಲೂಕಿನ ಮರವಪಲ್ಲಿ ತಾಂಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಾರಮ್ಮ ದೇಗುಲ ಹಾಗೂ ಸಂತ ಸೇವಾಲಾಲ್ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಯಲ್ಲಂಪಲ್ಲಿ ಗ್ರಾಪಂನ ಮರವಪಲ್ಲಿ ಮತ್ತು ದೇಶಮಾರತಾಂಡ ಗ್ರಾಮಗಳಿಗೆ ಸಮರ್ಪಕ ರಸ್ತೆಗಳಿಲ್ಲದ ಕಾರಣ ತುರ್ತು ಚಿಕಿತ್ಸೆ ಸಮಯದಲ್ಲಿ ಆ್ಯಂಬುಲೆನ್ಸ್ ವಾಹನವೂ ಗ್ರಾಮಕ್ಕೆ ಹೋಗುವುದಿಲ್ಲ. ಬಹುತೇಕ ತಾಂಡ ಗ್ರಾಮಗಳು ಸೂಕ್ತ ರಸ್ತೆ ಮತ್ತು ಮೂಲ ಸೌಕರ್ಯಗಳಿಂದ ವಂಚಿತಗೊಂಡಿದ್ದು, ತಾಂಡ ಗ್ರಾಮಗಳ ಜನರಿಗೆ ಆರೋಗ್ಯದಲ್ಲಿ ಏರುಪೇರಾದರೆ ಸಕಾಲಕ್ಕೆ ಆಸ್ಪತ್ರೆ ಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸಕಾಲಕ್ಕೆ ಆ್ಯಂಬುಲೆನ್ಸ್ ವಾಹನ ಬಾರದ ಕಾರಣ ಚಿಕಿತ್ಸೆ ಫಲಕಾರಿ ಆಗದೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿ ರುವ ಪ್ರಕರಣಗಳು ನಡೆದಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಆಂಧ್ರದ ಗಡಿಯಲ್ಲಿರುವ ಬಾಗೇಪಲ್ಲಿ ಕ್ಷೇತ್ರ ದಲ್ಲಿ ಆರೋಗ್ಯ, ಶುದ್ಧ ಕುಡಿವ ನೀರು ಪೂರೈಕೆ, ಉಚಿತ ಶಿಕ್ಷಣ, ರಸ್ತೆಗಳು ಸೇರಿದಂತೆ ಹಲವು ಜಲ್ವಂತ ಸಮಸ್ಯೆಗಳು ಜನರನ್ನು ಕಾಡುತ್ತಿವೆ ಅದ್ದರಿಂದ ಮೊಬೈಲ್ ಆ್ಯಂಬುಲೆನ್ಸ್ , ಮನೆ ಬಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೆರವು, ಶುದ್ಧ ಕುಡಿವ ನೀರು ಪೂರೈಕೆ ಮಾಡುವ ಯೋಜನೆಯೊಂದಿಗೆ ಸಮಾಜಸೇವೆ ಮಾಡುವ ಗುರಿಯನ್ನು ಹೊಂದಿದ್ದು, ನನಗೆ ಬಾಗೇಪಲ್ಲಿ ಕ್ಷೇತ್ರದ ಜನರು ಅರ್ಶೀವದಿಸಬೇಕು ಎಂದು ಮನವಿ ಮಾಡಿದರು. ಮುಖಂಡ ರಾಜಾರೆಡ್ಡಿ, ಎಂ.ಜಿ.ಕಿರಣ್‌ಕುಮಾರ್, ಪಿ.ಡಿ.ವೆಂಕಟರಾಮ್, ತಿಪ್ಪೇನಾಯಕ, ಹನುಮೇನಾಯಕ್, ಕೃಷ್ಣೇ ನಾಯಕ್, ವೆಂಕಟರಮಣನಾಯಕ್, ರವಿನಾಯಕ್, ಪ್ರಸಾದ್, ಶ್ರೀನಿವಾಸ್, ಸೋಮ್ಲಾ ನಾಯಕ್, ರಾಜಾ ನಾಯಕ್, ಶಂಕರ್, ನಾಗಾರ್ಜುನ ಇತರರಿದ್ದರು.
ಮತದಾನ ಮಾಡದೆ ಪ್ರತಿಭಟಿಸಿದ್ದ ಗ್ರಾಮಸ್ಥರು : ಹದಗೆಟ್ಟಿರುವ ಮರವಪಲ್ಲಿ ತಾಂಡ ಗ್ರಾಮದ ರಸ್ತೆಯನ್ನು ದುರಸ್ತಿಗೊಳಿಸಿ ಡಾಂಬರು ಕಾಮಗಾರಿ ಹಾಕಿಕೊಡುವಂತೆ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳು ರಸ್ತೆ ಅಭಿವೃದ್ದಿಗೆ ಮುಂದಾಗದ ಕಾರಣ ಗ್ರಾಮ ಸ್ಥರು 2018ರ ವಿಧಾನಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಹಾಕಿದ್ದರು. ಚುನಾ ವಣೆ ಬಹಿಷ್ಕಾರದ ನಂತರ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿ ಭರವಸೆ ನೀಡಿದ್ದರು. ಭರವಸೆ ಕೊಟ್ಟು 4 ವರ್ಷಗಳಾದರೂ ರಸ್ತೆ ಕಾಮಗಾರಿ ಮಾಡಿಲ್ಲದ ಕಾರಣ ಕ್ಷೇತ್ರದ ಶಾಸಕರು ಒಪ್ಪಿದರೆ ಸ್ವಂತ ಹಣದಲ್ಲಿ ಗ್ರಾಮಕ್ಕೆ ರಸ್ತೆ ಅಭಿವೃದ್ಧಿ ಮಾಡಿಸುವುದಾಗಿ ಸಮಾಜ ಸೇವಕ ಮಿಥುನ್ ರೆಡ್ಡಿ ತಿಳಿಸಿದರು.