Advertisement

7.50 ಕೋಟಿ ರೂ.ನಲ್ಲಿ ರಸ್ತೆ ಅಭಿವೃದ್ಧಿ

07:40 PM Jul 26, 2021 | Team Udayavani |

ಬಂಗಾರಪೇಟೆ: ಪ್ರಧಾನ ಮಂತ್ರಿಗ್ರಾಮ ಸಡಕ್‌ ಯೋಜನೆಯಡಿ 7.50ಕೋಟಿ ರೂ.ನಲ್ಲಿ ತಾಲೂಕಿನಗಡಿಭಾಗದ ಗ್ರಾಮಗಳ ರಸ್ತೆ ಅಭಿವೃದ್ಧಿಮಾಡಲಾಗಿದೆ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ಬೂದಿಕೋಟೆ ಹೋಬಳಿಯ ದಿನ್ನೂರು ಗ್ರಾಮದಲ್ಲಿ ರಸ್ತೆ ಸೇವೆಗೆಅರ್ಪಿಸಿ ಮಾತನಾಡಿ, ಶಾಸಕನಾಗಿಆಯ್ಕೆ ಆದ ಬಳಿಕ 8 ವರ್ಷಗಳಲ್ಲಿಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಮಾಡಲಾಗಿದೆ. ಕ್ಷೇತ್ರದ ಕಟ್ಟಕಡೆಯಗಡಿಭಾಗದ ದಿನ್ನೂರು ಗ್ರಾಮಕ್ಕೆಗುಲ್ಲಹಳ್ಳಿಯಿಂದ ಡಾಂಬರು ರಸ್ತೆಮಾಡಲಾಗಿದೆ ಎಂದು ವಿವರಿಸಿದರು.

Advertisement

ಬೂದಿಕೋಟೆ ಬ್ಲಾಕ್‌ ಕಾಂಗ್ರೆಸ್‌ಅಧ್ಯಕ್ಷ ಕೆ.ವಿ.ನಾಗರಾಜ್‌ ಮಾತನಾಡಿ,ಕಾಡಾನೆ ದಾಳಿಗೆ ರೈತರೊಬ್ಬರುಮೃತರಾದಾಗ ಆಸ್ಪತ್ರೆಗೆ ಭೇಟಿ ನೀಡಿ,ಆದಷ್ಟು ಬೇಗ ಆನೆ ಕಾರಿಡಾರ್‌ಯೋಜನೆ ಮಾಡಿಕೊಡುತ್ತೇನೆ ಎಂದುಹೇಳಿ ಹೋದ ಸಂಸದರು, ಇತ್ತಮುಖ ಮಾಡಲಿಲ್ಲ ಎಂದರು.

ತಾಪಂ ಮಾಜಿ ಅಧ್ಯಕ್ಷ ಮಹದೇವ್‌,ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷರಘು, ಗುಲ್ಲಹಲ್ಲಿ ಗ್ರಾಪಂ ಅಧ್ಯಕ್ಷನೀಲಾ ಬಾಯಿ ಗೋವಿಂದರಾವ್‌,ಉಪಾ ಧ್ಯಕ್ಷೆ ಸುಷ್ಮಾ ಶಿವರಾಜ್‌,ಕಾಮ ಸಮುದ್ರ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ವಿಠuಲ್‌ ವೈ.ತಳವಾರ್‌,ಯಳೇಸಂದ್ರ ಗ್ರಾಪಂ ಅಧ್ಯಕ್ಷಶ್ರೀನಿವಾಸರೆಡ್ಡಿ, ಬೂದಿಕೋಟೆ ಗ್ರಾಪಂಉಪಾಧ್ಯಕ್ಷ ಬಿ.ಆರ್‌.ಮಂಜುನಾಥ,ಮುಖಂಡ ರಾದ ಮುನಿಯಪ್ಪ, ಆರ್‌.ಚಲಪತಿ, ವೆಂಕಟಮುನಿಯಪ್ಪಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next