Advertisement

ಹದಗೆಟ್ಟ ಹಾಲಾಡಿ ರಾಜ್ಯ ಹೆದ್ದಾರಿ: ವಾಹನ ಸವಾರರಿಗೆ ಸಂಕಷ್ಟ

06:00 AM Jun 30, 2018 | Team Udayavani |

ಹಾಲಾಡಿ: ಕೋಟೇಶ್ವರ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಹಾಲಾಡಿ ಸಮೀಪದ ಕಕ್ಕುಂಜೆ ಕ್ರಾಸ್‌ ಬಳಿಯ ರಸ್ತೆಯಲ್ಲಿ ಹೊಂಡ – ಗುಂಡಿಗಳಿಂದಾಗಿ ವಾಹ ಸಂಚರಿಸುವುದೇ ಕಷ್ಟವಾಗಿದೆ. ಸಂಚಾರ ದಟ್ಟಣೆ ಸಮಯದಲ್ಲಿ ನಿರಂತರವಾಗಿ ಟ್ರಾಫಿಕ್‌ ಜಾಂ ಉಂಟಾಗುತ್ತಿದೆ. 

Advertisement

ಕಕ್ಕುಂಜೆ ಕ್ರಾಸ್‌ ಬಳಿಯಿಂದ ಹಾಲಾಡಿ ಪೇಟೆಗಿಂತ ಸ್ವಲ್ಪ ಹಿಂದಿನವರೆಗೆ ಅನೇಕ ಕಡೆಗಳಲ್ಲಿ ಹೊಂಡ – ಗುಂಡಿಗಳು
ಬಿದ್ದಿದ್ದು, ಇದರಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ವಾಹನ ಸವಾರರಿಗೆ ಸವಾಲಾಗಿದೆ. 

ಎಪ್ರಿಲ್‌ ಹಾಕಿದ ತೇಪೆ
ಈ ರಾಜ್ಯ ಹೆದ್ದಾರಿಯ ಅನೇಕ ಕಡೆಗಳಲ್ಲಿ ಹೊಂಡ- ಗುಂಡಿಗಳಿಗೆ ಕಳೆದ ಎಪ್ರಿಲ್‌ ತಿಂಗಳಲ್ಲಿ ತೇಪೆ ಹಾಕುವ ಮೂಲಕ ಗುಂಡಿಗಳನ್ನು ಮುಚ್ಚಿಸಲಾಗಿತ್ತು. ಆದರೆ ಈಗ ಮಳೆಗಾಲ ಆರಂಭವಾದ ಅನಂತರ ಆ ತೇಪೆ ಹಾಕಿದ್ದೆಲ್ಲವೂ ಎದ್ದು ಹೋಗಿದೆ. ನಿತ್ಯ ಈ ರಸ್ತೆಯ ಮೂಲಕ ಸಾವಿರಾರು ವಾಹನಗಳು ಸಂಚರಿಸುತ್ತಿದೆ. 

ಪಲ್ಟಿಯಾಗಿತ್ತು ಟ್ಯಾಂಕರ್‌ 
ಕಕ್ಕುಂಜೆ ಕ್ರಾಸ್‌ ಬಳಿಯ ಸುಬ್ರಾಯ ಆಚಾರ್‌ ಅವರ ಮನೆಯ ಎದುರಿನ ಈ ಹದಗೆಟ್ಟ ರಸ್ತೆಯಿಂದಾಗಿ ಜೂ. 22 ರಂದು ಟ್ಯಾಂಕರ್‌  ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಆದರೂ ಇನ್ನೂ ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡಿಲ್ಲ. 

2 ವರ್ಷದ ಆಗಿಲ್ಲ ದುರಸ್ತಿ
ಈ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ತೇಪೆ ಹಾಕಿದ್ದು ಬಿಟ್ಟರೆ, ಕಳೆದ 2 ವರ್ಷಗಳಿಂದ ಮರು ಡಾಮರು ಆಗಿಲ್ಲ. ಇನ್ನು   ಕೋಟೇಶ್ವರದಿಂದ ಶಿವಮೊಗ್ಗದವರೆಗೆ ಪೂರ್ತಿಯಾಗಿ ಮರು ಡಾಮರಾಗದೆ ಹಲವು ವರ್ಷಗಳೇ ಕಳೆದಿವೆ ಎನ್ನುತ್ತಾರೆ ಸ್ಥಳೀಯರು. 

Advertisement

ನೀರು ಹೋಗಲು ಚರಂಡಿಯಿಲ್ಲ
ಕಳೆದ ಒಂದು ತಿಂಗಳಿನಿಂದ ಈ ರಸ್ತೆ ಸಂಪೂರ್ಣ ಹಾಳಾಗಿದೆ. ನಮ್ಮ ಮನೆ ಈ ರಸ್ತೆಯ ಬದಿಯೇ ಇದ್ದು, ಇತ್ತೀಚೆಗೆ ಟ್ಯಾಂಕರ್‌ವೊಂದ ಪಲ್ಟಿಯಾಗಿ ನಮ್ಮ ಜಾಗದಲ್ಲೇ ಬಿತ್ತು. ಈ ರಸ್ತೆ ಇಷ್ಟೊಂದು ಕೆಟ್ಟು ಹೋಗಲು ಮುಖ್ಯ ಕಾರಣ ಒಂದು ಬದಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಮೊದಲು ಸರಿಯಾದ ಚರಂಡಿ ವ್ಯವಸ್ಥೆ ಮಾಡಿ, ಅನಂತರ ರಸ್ತೆ ದುರಸ್ತಿ ಪಡಿಸಲಿ. 
– ಸುಬ್ರಾಯ ಆಚಾರ್‌,ಕಕ್ಕುಂಜೆ ಕ್ರಾಸ್‌ ನಿವಾಸಿ

 ಕ್ರಿಯಾ ಯೋಜನೆ ಸಿದ್ದಪಡಿಸಲಾಗುವುದು
ರಸ್ತೆಯ ದುರಸ್ತಿಗೆ ಈ ಬಾರಿ ಅನುದಾನ ಬಿಡುಗಡೆಯಾಗಿಲ್ಲ. ಇನ್ನೀಗ ಕ್ರಿಯಾ ಯೋಜನೆ ಸಿದ್ದಪಡಿಸಿ ಜಿ.ಪಂ. ನಿಂದ ಅನುದಾನ ಕೇಳಲಾಗುವುದು. ಅದಲ್ಲದೆ ಮರು ಡಾಮರೀಕರಣಕ್ಕಾಗಿ ಶಾಸಕರ ಬಳಿಯೂ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗುವುದು. 
– ಸುಪ್ರೀತಾ ಉದಯ ಕುಲಾಲ್‌,ಹಾಲಾಡಿ ಜಿ.ಪಂ. ಸದಸ್ಯರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next