Advertisement
ಹೆದ್ದಾರಿ ಗುಂಡಿಉಡುಪಿಯಿಂದ ಕುಂದಾಪುರದವರೆಗೆ ರಸ್ತೆ ಚತುಷ್ಪಥವಾಗಿದೆ. ವಾಹನಗಳ ಓಡಾಟಕ್ಕೂ ಯೋಗ್ಯವಾಗಿದೆ. ಕುಂದಾಪುರದ ಹಂಗಳೂರಿಗೆ ದ್ವಿಪಥ ರಸ್ತೆ ಕೊನೆಯಾಗುತ್ತದೆ. ಅನಂತರ ಆರಂಭವಾಗುವುದೇ ಯಮಯಾತನೆ. ಕುಂದಾಪುರ, ಬೈಂದೂರು, ಶಿರೂರು, ಭಟ್ಕಳವರೆಗೂ ಈ ರಸ್ತೆ ತೀರಾ ಹದಗೆಟ್ಟಿದೆ. ನಿತ್ಯ ಓಡಾಡುವ ವಾಹನಗಳು, ಬಸ್‌ಗಳಿಗೆ ಇಷ್ಟು ದಾರಿ ಸವೆಸುವುದೇ ದೊಡ್ಡ ಸಮಸ್ಯೆಯಾಗಿದೆ. ಪ್ರಯಾಣಿಕರಿಗೂ ನರಕ ದರ್ಶನ.
ಸಹಾಯಕ ಕಮಿಷನರ್ ಆದೇಶದ ಮೇರೆಗೆ ಪೇಟೆಯಲ್ಲಿ ಮುಖ್ಯ ರಸ್ತೆಗೆ ತೇಪೆ ಹಾಕಲಾಗಿತ್ತು. ಆದರೆ ತೇಪೆ ಕಾರ್ಯ ಕಾಟಾಚಾರಕ್ಕೆ ನಡೆಸಲಾಗಿದೆ ಎನ್ನುವುದು ಒಂದೇ ಮಳೆಯಲ್ಲಿ ಬಟಾ ಬಯಲಾಗಿದೆ. ಬಸೂರು ಮೂರುಕೈವರೆಗೆ ಮಾರ್ಗ ಹಾಳಾಗಿದ್ದರೂ ತೇಪೆ ಕಾರ್ಯ ನಡೆದೇ ಇಲ್ಲ. ಸಹಾಯಕ ಕಮಿಷನರ್ ಅವರ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ.