ಬೆಂಗಳೂರು: ರಸ್ತೆ ಗುಂಡಿ ಸಮಸ್ಯೆಗೆ ಕಾರಣವಾದ ರಸ್ತೆ ಅಗೆಯುವ (ರೋಡ್ ಕಟ್ಟಿಂಗ್) ಸಾರ್ವಜನಿಕರಿಗೆ ದಂಡ ವಿಧಿ ಸಲು ಬಿಬಿಎಂಪಿ ನಿರ್ಧರಿಸಿದೆ.
ಪ್ರಸಕ್ತ ವರ್ಷದಲ್ಲಿ ಮಳೆ ಪ್ರಮಾಣ ಹೆಚ್ಚಾದ ಕಾರಣ ನಗರದಲ್ಲಿ ರಸ್ತೆ ಗುಂಡಿ ಗಳ ಸಮಸ್ಯೆಯೂ ಉಲ್ಬಣವಾಗುವಂತಾ ಗಿತ್ತು. ಈವರೆಗೆ ನಗರದಲ್ಲಿ 32 ಸಾವಿ ರಕ್ಕೂ ಹೆಚ್ಚಿನ ರಸ್ತೆ ಗುಂಡಿಗಳು ಪತ್ತೆ ಯಾಗಿದ್ದು, ಅದರಲ್ಲಿ ಶೇ. 95ಕ್ಕೂ ಹೆಚ್ಚಿನ ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ.
ಪ್ರಮುಖವಾಗಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿನ ಗುಂಡಿಗಳಲ್ಲಿ ಬಹು ತೇಕ ಗುಂಡಿಗಳನ್ನು ಮುಚ್ಚಲಾ ಗಿದೆ. ಇದೀಗ ವಾರ್ಡ್ ರಸ್ತೆಗಳಲ್ಲಿನ ಗುಂಡಿ ಗಳನ್ನು ಮುಚ್ಚುವ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗುತ್ತಿದೆ. ಅದರ ಜತೆಗೆ ವಾರ್ಡ್ ರಸ್ತೆಗಳಲ್ಲಿ ನೀರಿನ ಪೈಪ್ ದುರಸ್ತಿ ಸೇರಿ ಇನ್ನಿತರ ಕಾರಣಕ್ಕಾಗಿ ಸಾರ್ವಜನಿಕರು ರಸ್ತೆ ಅಗೆದರೆ ಅವರಿಗೆ ದಂಡ ವಿಧಿಸುವ ಬಗ್ಗೆ ನಿರ್ಧರಿಸಲಾಗಿದೆ. ಈ ಕುರಿತು ವಾರ್ಡ್ ಎಂಜಿನಿಯರ್ ಗಳಿಗೂ ಸೂಚಿಸಲಾಗಿದ್ದು, ರಸ್ತೆ ಅಗೆ ಯುವವರನ್ನು ಪತ್ತೆ ಮಾಡಿ ಅವರಿಗೆ ದಂಡ ವಿಧಿಸುವಂತೆ ಹಿರಿಯ ಅಧಿಕಾರಿ ಗಳು ತಿಳಿಸಿದ್ದಾರೆ.
ಜಲಮಂಡಳಿಗೆ ಗಡುವು: ವಾರ್ಡ್ ರಸ್ತೆಗಳಲ್ಲಿ ನೀರಿನ ಪೈಪ್, ಒಳಚರಂಡಿ ದುರಸ್ತಿಗಾಗಿ ರಸ್ತೆ ಅಗೆಯುವುದನ್ನು ತಪ್ಪಿ ಸಲು ಬಿಬಿಎಂಪಿ ಅಧಿಕಾರಿಗಳು ಜಲ ಮಂಡಳಿ ಅಧಿಕಾರಿಗಳ ಜತೆ ಸಭೆ ನಡೆಸಿ ದ್ದಾರೆ. ನೀರಿನ ಪೈಪ್‌ಗ್ಳನ್ನು ಪರೀಕ್ಷಿಸಿ ಲೀಕೇಜ್ ಇದ್ದರೆ ಕೂಡಲೆ ಅದನ್ನು ದುರಸ್ತಿ ಮಾಡಬೇಕು. ರಸ್ತೆಗಳನ್ನು ಬಿಬಿ ಎಂಪಿಯಿಂದ ದುರಸ್ತಿ ಮಾಡಿದ ನಂತರ ಮತ್ತೆ ರಸ್ತೆ ಅಗುವುದನ್ನು ಮಾಡಬಾರದು ಎಂದು ಜಲಮಂಡಳಿಗೆ ಸೂಚಿಸಲಾಗಿದೆ. ಹೀಗಾಗಿ ನಾಲ್ಕೈದು ದಿನಗಳಲ್ಲಿ ನೀರಿನ ಪೈಪ್ ಸೇರಿ ಇನ್ನಿತರ ಲೀಕೇಜ್ ಪರೀಕ್ಷಿ ಸುವಂತೆಯೂ ತಿಳಿಸಲಾಗಿದೆ.