Advertisement

ರಸ್ತೆ ಬಂದ್‌: ಸಾರ್ವಜನಿಕರ ಪರದಾಟ

04:13 PM Apr 24, 2020 | Suhan S |

ದೊಡ್ಡಬಳ್ಳಾಪುರ: ಲಾಕ್‌ಡೌನ್‌ ಜಾರಿಗೆ ಬಂದ ಒಂದೆರೆಡು ದಿನಗಳ ಕಾಲ ಗ್ರಾಮೀಣ ಪ್ರದೇಶದ ಯಾವುದೇ ಹಳ್ಳಿಗೆ ಹೊರಗಿನವರು ಬರದಂತೆ ರಸ್ತೆಗಳಿಗೆ ಅಡ್ಡಲಾಗಿ ಬೇಲಿ ಹಾಕಿದ್ದನ್ನು, ರಸ್ತೆಗೆ ಅಡ್ಡಲಾಗಿ ಜೆಸಿಬಿ ಮೂಲಕ ಕಾಲುವೆ ತೋಡಲಾಗಿತ್ತು. ಈಗ ನಗರದಲ್ಲಿಯೂ ಸಹ ರಸ್ತೆಗನ್ನು ಬಂದ್‌ ಮಾಡಲಾಗುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

Advertisement

ನಗರದ ಬಿಎಸ್‌ಎನ್‌ಎಲ್‌ ಕಚೇರಿ ರಸ್ತೆ (ಮುಕ್ತಾಂಬಿಕ ರಸ್ತೆ), ವಡ್ಡರಪೇಟೆ ಸೇರಿದಂತೆ ಹತ್ತಾರು ಕಡೆ ಎÇÉೆಂದರಲ್ಲಿ ರಸ್ತೆಗಳಿಗೆ ಅಡ್ಡಲಾಗಿ ಹಳೆಯ ಬೀರುಗಳು, ಹಳೆಯ ಕಬ್ಬಿಣದ ಸಾಮಾನುಗಳು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಅಡ್ಡಲಾಗಿ ಹಾಕಿ ಬಂದ್‌ ಮಾಡಲಾಗಿದೆ.

ನಗರದಲ್ಲಿಯೇ ಮುಖ್ಯ ರಸ್ತೆಗಳಲ್ಲಿ ಮುಕ್ತಾಂಬಿಕ ರಸ್ತೆಯು ಒಂದಾಗಿದೆ. ಈ ರಸ್ತೆಯಲ್ಲಿ ಹಳೆಯ ಬಸ್‌ ನಿಲ್ದಾಣ, ತರಕಾರಿ ಮಾರುಕಟ್ಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದಿನಸಿ ಅಂಗಡಿಗಳಿಗೆ ಹೋಗುವವರಿಗೆ ಈ ರಸ್ತೆಗಳು ಮುಖ್ಯವಾಗಿವೆ. ಇಂತಹ ರಸ್ತೆಗಳನ್ನೇ ಸ್ಥಳೀಯ ಜನರು ತಮಗಿಷ್ಟ ಬಂದ ರೀತಿಯಲ್ಲಿ ಬಂದ್‌ ಮಾಡಿಕೊಂಡರೆ ಸಾರ್ವಜನಿಕರ ಹಾಗೂ ಸರ್ಕಾರಿ ಅಧಿಕಾರಿಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ.

ರಸ್ತೆ ಬಂದ್‌ ಮಾಡಲೇ ಬೇಕಾದ ತುರ್ತು ಅಗತ್ಯ ಇದ್ದರೆ ಪೊಲೀಸರು ಬ್ಯಾರಿಕೇಡ್‌ಳನ್ನು ಹಾಕಿ ಬಂದ್‌ ಮಾಡುತ್ತಾರೆ. ಆದರೆ ಸ್ಥಳೀಯರು ಕೈಗೆ ಸಿಕ್ಕ ವಸ್ತುಗಳಿಂದ ಬಂದ್‌ ಮಾಡುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next