Advertisement

ಭೀಕರ ರಸ್ತೆ ಅಪಘಾತ: ಕಿರುತೆರೆ ನಟಿ-ನಟ ದುರ್ಮರಣ

07:55 AM Aug 25, 2017 | Team Udayavani |

ಕುದೂರು(ಮಾಗಡಿ): ರಾಷ್ಟ್ರೀಯ ಹೆದ್ದಾರಿ 75ರ ಸೋಲೂರು ಕ್ರಾಸ್‌ ಬಳಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ರಚನಾ(23) ಹಾಗೂ ಮಜಾಭಾರತ ರಿಯಾಲಿಟಿ ಶೋ ಖ್ಯಾತಿಯ ನಟ ಜೀವನ್‌ ಸುರೇಶ್‌(30) ಮೃತಪಟ್ಟಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಮ್ಮ ಸ್ನೇಹಿತನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ
ಇಬ್ಬರೂ ಉದಯೋನ್ಮುಖ ಕಲಾವಿದರು. ಮಾರ್ಗಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಅಪಘಾತದಲ್ಲಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿರುವ ಅವರ ಸ್ನೇಹಿತರಾದ ರಣಜೀತ್‌ ಶೆಟ್ಟಿ, ಹೋನ್ನೇಶ್‌, ಉತ್ತವ್‌, ಎರಿಕ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Advertisement

ಕನ್ನಡ “ಮಹಾನದಿ’ ಧಾರಾವಾಹಿಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದ ರಚನಾ, ಕೆಲ ಸಿನಿಮಾಗಳಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡಿರುವ ಜೀವನ್‌ ಸುರೇಶ್‌, ಉಳಿದ ಐದು ಮಂದಿ ಸ್ನೇಹಿತರ ಜೊತೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುರುವಾರ ಸ್ನೇಹಿತ ಕಾರ್ತಿಕ್‌ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ, ರಾತ್ರಿ 12.30ಗಂಟೆ ಸುಮಾರಿಗೆ ರಾಜರಾಜೇಶ್ವರಿ ನಗರದಿಂದ ಟಾಟಾ ಸಫಾರಿ ವಾಹನದಲ್ಲಿ ಪಯಣ ಬೆಳೆಸಿದ್ದಾರೆ.

ಮಾರ್ಗಮಧ್ಯೆ ಸೋಲೂರು ಕ್ರಾಸ್‌ ಬಳಿ, ರಸ್ತೆಬದಿ ನಿಲ್ಲಿಸಿದ್ದ ಕ್ಯಾಂಟರ್‌ನ್ನು ಗಮನಿಸದೆ ಕಾರು ಚಲಾಯಿಸುತ್ತಿದ್ದ ಹೊನ್ನೇಶ್‌, ಟ್ಯಾಂಕರ್‌ ಹಿಂಬದಿಗೆ ಡಿಕ್ಕಿ ಹೊಡೆಸಿದ್ದಾರೆ. ವೇಗವಾಗಿ ಬರುತ್ತಿದ್ದ ಕಾರು, ಟ್ಯಾಂಕರ್‌ಗೆ ಅಪ್ಪಳಿಸಿದ ರಭಸಕ್ಕೆ ಕಾರಿನ ಮುಂಭಾಗದಲ್ಲಿದ್ದ ರಚನಾ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೀವನ್‌ ಕೂಡ ಗಂಭೀರ
ಗಾಯಗೊಂಡು ರಕ್ತಸ್ರಾವದಿಂದ ಅಸುನೀಗಿದ್ದಾರೆ. ಕಾರಿನಲ್ಲಿದ್ದ ಉಳಿದವರು ಸಣ್ಣ ಪುಟ್ಟ ಗಾಯಗೊಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಕುದೂರು ಠಾಣೆ ಪೊಲೀಸರು, ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೋಷಕರಿಗೆ ಒಪ್ಪಿಸಿದರು. ಭೀಕರ ಅಪಘಾತಕ್ಕೆ ಕಾರಿನ ಅತಿವೇಗ ಚಾಲನೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಾನ್ವಿತ ನಟಿ ರಚನಾ: ರಾಜರಾಜೇಶ್ವರಿ ನಗರದ ಬಿಇಎಂಎಲ್‌ ಬಡಾವಣೆ ನಿವಾಸಿಗಳಾದ ಗೋಪಾಲ್‌ ಜಾನಕಿ ದಂಪತಿಗಳ ಪುತ್ರಿ ಯಾದ ರಚನಾ ಕಿರುತೆರೆಯಲ್ಲಿ ಮಹಾನದಿ, ತ್ರಿವೇಣಿ ಸಂಗಮ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಗಳಲ್ಲಿ ನಟಿಸುತ್ತಿದ್ದು ಜನಮೆಚ್ಚುಗೆ ಗಳಿಸಿದ್ದರು. ಅಲ್ಲದೆ ತೆಲುಗಿನ ಕೆಲ ಧಾರಾವಾಹಿಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

Advertisement

ಅಕಾಲಿಕ ಸಾವನ್ನಪ್ಪಿದ ಮಗಳ ಮೃತದೇಹವನ್ನು ಮನೆಗೆ ತಂದಾಗ ಹೆತ್ತವರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಜಾಭಾರತದಲ್ಲಿ ಜನಮನ್ನಣೆ: ಅಶೋಕ್‌ ನಗರದ ಪೊಲೀಸ್‌ ಕ್ವಾರ್ಟಸ್‌Õನ ದಿ. ಕಪನಯ್ಯನ ಪುತ್ರ ಜೀವನ್‌, ಅಮೃತ ವರ್ಷಣಿ, ಟೋಪಿ ವಾಲಾ ಸೇರಿ ಹಲವು ಚಲನಚಿತ್ರದಲ್ಲಿ ಹಾಸ್ಯ ನಟನಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಅಲ್ಲದೆ ಇತ್ತೀಚೆಗೆ ಖಾಸಗಿ ವಾಹಿನಿಯೊಂದರ “ಮಜಾಭಾರತ’ ರಿಯಾಲಿಟಿ ಶೋನಲ್ಲಿ ತನ್ನ
ಅಭಿನಯದ ಮೂಲಕ ಜನರ ಮನಸ್ಸು ಗೆದ್ದಿದ್ದರು. ಈ ಉದಯೋನ್ಮುಖ ಕಲಾವಿದರ ಸಾವಿಗೆ ಚಿತ್ರರಂಗ, ಕಿರುತೆರೆಯ ನೂರಾರು ಮಂದಿ ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next