ದಾವಣಗೆರೆ: ಬೈಕ್ ಸವಾರರಿಬ್ಬರು ಆಯತಪ್ಪಿ ಬೈಕ್ ನಿಂದ ಬಿದ್ದು ಮೃತಪಟ್ಟ ಘಟನೆ ಮಲೆಬೆನ್ನೂರು ಬಳಿಯ ಕೊಪ್ಪ ಗ್ರಾಮದ ಬಳಿ ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಗದಿಗೇಶ ಕುಂದೂರ (28೮) ಹಾಗೂ ಅಬ್ದುಲ್ ಸತ್ತಾರ್ (30) ಸಾವನ್ನಪ್ಪಿದ ಬೈಕ್ ಸವಾರರು.
ಇವರಿಬ್ಬರು ಹೊನ್ನಾಳಿ ಕಡೆಯಿಂದ ದಾವಣಗೆರೆಗೆ ಬರುತ್ತಿದ್ದರು. ಬೈಕ್ ನಲ್ಲಿ ಬರುತ್ತಿರುವಾಗ ಸವಾರನ ನಿಯಂತ್ರಣ ತಪ್ಪಿ ಬಿದ್ದ ಕಾರಣ ಮೃತರಾಗಿದ್ದಾರೆ.
ಬೈಕ್ ಸವಾರ ಗದಿಗೇಶ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಮತ್ತೋರ್ವ ಸವಾರ ಅಬ್ದುಲ್ ಸತ್ತಾರ ಚಿಕಿತ್ಸೆ ಫಲಕಾರಿ ಆಗದೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.