Advertisement

ಲಾೖಲದಲ್ಲಿ ಅಪಘಾತ: ಸಂಚಾರಕ್ಕೆ ಅಡ್ಡಿ

10:00 AM Mar 31, 2018 | Team Udayavani |

ಬೆಳ್ತಂಗಡಿ: ಲಾೖಲ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಅಪಘಾತದಿಂದ ಸುಮಾರು ಅರ್ಧ ತಾಸು ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಕಲೇಶಪುರದ ಚಿರಾಗ್‌ ಅವರು ಕಾರಿನಲ್ಲಿ ಮಂಗಳೂರು ಕಡೆಯಿಂದ ಚಾರ್ಮಾಡಿ ಕಡೆಗೆ ತೆರಳುತ್ತಿದ್ದರು. ಕಾರು ಲಾೖಲ ಸೇತುವೆ ಸಮೀಪ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದು ಬಿದ್ದಿದೆ. ಆಗ ಲಾೖಲ ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಖಾಸಗಿ ಬಸ್‌ ಕಾರಿಗೆ ತಾಗಿದೆ. ಪರಿಣಾಮ ಕಾರು ಒಂದು ಸುತ್ತು ತಿರುಗಿ ನಿಂತಿದ್ದು, ಎಡಬದಿಯ ಚಕ್ರ ಕಳಚಿದೆ. ಅದೃಷ್ಟವಶಾತ್‌ ಯಾವುದೇ ಜೀವಹಾನಿ ಸಂಭವಿಸಿಲ್ಲ.

Advertisement

ಟ್ರಾಫಿಕ್‌ ಜಾಮ್‌


ಇಕ್ಕಟ್ಟಾದ ಜಾಗವಾದ್ದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಸುಮಾರು 1 ಕಿ.ಮೀ. ಉದ್ದದ ವಾಹನ ಸಾಲು ಕಂಡುಬಂತು. ತತ್‌ಕ್ಷಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ವಾಹನವನ್ನು ಬದಿಗೆ ಸರಿಸಿದರು. ಏಕಮುಖ ಸಂಚಾರ ಆರಂಭವಾದರೂ ಸಮರ್ಪಕವಾಗಿರಲಿಲ್ಲ. ಈ ವೇಳೆ ಕಾರಿನ ಒಂದು ಚಕ್ರ ಮುರಿದಿದ್ದರೂ, ಸಾರ್ವಜನಿಕರು ಸೇರಿ ಕಾರನ್ನು ತಳ್ಳಿ ಬದಿಗೆ ಸರಿಸಿ, ಸುಗಮ ಸಂಚಾರಕ್ಕೆ  ಸಹಕರಿಸಿದರು.

ಸಂಚಾರಿ ಠಾಣೆಯಲ್ಲಿಲ್ಲ ಕ್ರೇನ್‌
ಬೆಳ್ತಂಗಡಿ ಸಂಚಾರ ಠಾಣೆ ವಾರದ ಹಿಂದೆ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಿದ್ದರೂ ಸಮರ್ಪಕ ವ್ಯವಸ್ಥೆಗಳಿಲ್ಲ. ವಾಹನ ಬದಿಗೆ ಸರಿಸಲು ಕ್ರೇನ್‌, ಟೋಯಿಂಗ್‌ ವಾಹನ ಇಲ್ಲಿಲ್ಲ. ಇಬ್ಬರೂ ಪ್ರಕರಣವನ್ನು ರಾಜಿಯಲ್ಲಿ ಮುಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next