ಮೈಸೂರು: ಕಾರ್ಮಿಕರ ದಿನದ ಹಿನ್ನೆಲೆ ಮೈಸೂರು ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿ ಯೇಷನ್‌ನಿಂದ ಸೋಮವಾರ ಆಯೋಜಿ ಸಿದ್ದ ರಸ್ತೆ ಓಟ ಸ್ಪ$ರ್ಧೆಯಲ್ಲಿ ವಿವಿಧ ವಯೋ ಮಾನದ ನೂರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡರು.
ಆರೋಗ್ಯಕ್ಕಾಗಿ ಓಟ ಎಂಬ ಘೋಷಣೆ ಯೊಂದಿಗೆ ಆಯೋಜಿಸಿದ್ದ ಆರ್. ನರಸಿಂಹ ಮೂರ್ತಿ (ಆರ್‌ಎನ್‌ಎಂ) ಸ್ಮಾರಕ ಏಳನೇ ವರ್ಷದ ರಸ್ತೆ ಓಟಕ್ಕೆ ಮೇಯರ್ ಎಂ.ಜೆ.ರವಿಕುಮಾರ್ ಚಾಲನೆ ನೀಡಿದರು. ಓಟದಲ್ಲಿ 4 ರಿಂದ 6, 7ರಿಂದ 9, 10ರಿಂದ 15, 16 ರಿಂದ 34, 35ರಿಂದ 54 ಹಾಗೂ 55 ವರ್ಷ ಮೇಲ್ಪಟ್ಟ ವಿಭಾಗವನ್ನು ವಿಂಗಡಿಸಲಾಗಿತ್ತು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಆರಂಭಗೊಂಡ ರಸೆ ¤ಓಟ ಕೃಷ್ಣ ಬುಲೇವಾರ್ಡ್ ರಸ್ತೆ ಮಾರ್ಗವಾಗಿ ತೆರಳಿ ಜಿಲ್ಲಾ ನ್ಯಾಯಾಲಯದ ಮೂಲಕ ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಅಂತ್ಯಗೊಂಡಿತು.
ರಸ್ತೆ ಓಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಅತ್ಯಂತ ಉತ್ಸಾಹದಿಂದ ಹೆಜ್ಜೆ ಹಾಕಿದರು. ಅದರಂತೆ ವಿವಿಧ ವಿಬಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 657 ಸ್ಪರ್ಧಿಗಳು ಭಾಗ ವಹಿಸಿದ್ದರು. ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಪಾರಿತೋಷಕ, ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಮಹಿಳೆಯರ ವಿಭಾಗ: 10 ರಿಂದ 16 ವರ್ಷದ ಬಾಲಕಿಯರ ವಿಭಾಗದಲ್ಲಿ ಕುರುಬೂರು ನ್ಪೋರ್ಟ್ಸ್ ಕ್ಲಬ್ ಬಿ.ಚೈತ್ರಾ (ಪ್ರ), ಎಕ್ಸ್‌ಲೆಂಟ್ ನ್ಪೋರ್ಟ್ಸ್ನ ಟಿ.ಕವನ (ದಿ), ಕುರುಬೂರು ನ್ಪೋರ್ಟ್ಸ್ ಕ್ಲಬ್‌ನ ಎಂ.ಕೃತಿಕಾ (ತೃ), ಮಹಿಳೆಯರ ವಿಭಾಗದಲ್ಲಿ ಕುರುಬೂರು ನ್ಪೋರ್ಟ್ಸ್ ಕ್ಲಬ್‌ನ ಕೆ.ಎಸ್.ಮೇಘಾ (ಪ್ರ), ಎಂ.ವೀಣಾ (ದ್ವಿ), ಎಂ.ಸಹನಾ (ತೃ) ಹಾಗೂ 36 ರಿಂದ 44 ವರ್ಷದ ಮಹಿಳೆಯರು ವಿಭಾಗದಲ್ಲಿ ಜಯಶ್ರೀ (ಪ್ರ), ಪಿ.ಕವಿತಾ (ದ್ವಿ), ಕಲ್ಪನಾ (ತೃ) ಮತ್ತು 50ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಬಿ.ಎಸ್.ಪಾರ್ವತಿ (ಪ್ರ), ಕೆ.ಎಸ್.ರಮಾಮಣಿ (ದ್ವಿ), ಪದ್ಮಾ ಪಾರ್ಥಸಾರಥಿ (ತೃ) ಬಹುಮಾನ ಪಡೆದುಕೊಂಡರು.
ಪುರುಷರ ವಿಭಾಗ: ಬಾಲಕರ ವಿಭಾಗದಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ಪಿ.ಅಶುತೋಷ್ (ಪ್ರ), ಕೇಂದ್ರೀಯ ವಿದ್ಯಾಲಯದ ಡಿ.ವಿಶಾಲ್ (ದ್ವಿ), ಸೆಂಟ್ರಲ್ ಸ್ಕೂಲ್‌ನ ಎಸ್.ಆರ್.ಪೂರ್ವಿಕ್ (ತೃ). 17 ರಿಂದ 35 ವರ್ಷ ಪುರುಷರು ವಿಭಾಗದಲ್ಲಿ ಶರತ್ (ಪ್ರ), ಪಿಆರ್‌ಎಂ ವಿಜಯಕಾಲೇಜಿನ ಮಾಂತಪ್ಪ (ದ್ವಿ), ಬೋಗಾದಿಯ ಬಿ.ಬಿ.ತ್ರಿಶೂಲ್ (ತೃ), ಪುರುಷರ ವಿಭಾಗದಲ್ಲಿ ಸಂತೋಷ್ (ಪ್ರ), ಮೋಹನ್ (ದ್ವಿ), ಮನೀಷ್ (ತೃ). ಪುರುಷರ ವಿಭಾಗದಲ್ಲಿ ಎಸ್.ಎಂ.ಹರೀಶ್ (ಪ್ರ), ಡಿ. ನಾಗೇಶ್ (ದ್ವಿ), ಜಿ.ಜೆ.ಸಂತೋಷ್‌ಕುಮಾರ್ (ತೃ) ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಎಂ.ಬಿ.ಹರೀಶ್ (ಪ್ರ), ವಿಶ್ವೇಶ್ವರ ಆರಾಧ್ಯ (ದ್ವಿ), ವೈ.ಕೆ.ಜಗನ್ನಾಥ್ ಶೆಟ್ಟಿ (ತೃ) ಬಹುಮಾನ ತಮ್ಮದಾಗಿಸಿಕೊಂಡರು.
ರಸ್ತೆ ಓಟ ಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾ ಲಯದ ದೈಹಿಕ ವಿಭಾಗದ ನಿವೃತ್ತ ನಿರ್ದೇಶಕ ಡಾ. ಸಿ. ಕೃಷ್ಣ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಸ್.ಟಿ. ರವಿಕುಮಾರ್, ಪಾಲಿಕೆ ಸದಸ್ಯ ಪ್ರಶಾಂತಗೌಡ, ಅಸೋಸಿಯೇಷನ್‌ನ ಸುಮನಾ, ಪಿ.ಜಿ. ಸತ್ಯನಾರಾಯಣ ಹಾಜರಿದ್ದರು.