Advertisement

ಡಿಜಿಟಲ್‌ ಆಧಾರ್‌, ಡ್ರೈವಿಂಗ್‌ ಲೈಸನ್ಸ್‌ ಅಧಿಕೃತ ಗುರುತು: ರೈಲ್ವೆ

11:57 AM Jul 05, 2018 | Team Udayavani |

ಹೊಸದಿಲ್ಲಿ : ರೈಲು ಪ್ರಯಾಣದ ವೇಳೆ ನಿಮ್ಮ ಗುರುತು ಪತ್ರ ಕಳೆದು ಹೋದರೆ ನೀವಿನ್ನು ಚಿಂತಿಸಬೇಕಾಗಿಲ್ಲ. ಸರಕಾರದ ಡಿಜಿ ಲಾಕರ್‌ ನಲ್ಲಿ ಭದ್ರಪಡಿಸಿಡಲಾಗಿರುವ ಆಧಾರ್‌ ಮತ್ತು ಡ್ರೈವಿಂಗ್‌ ಲೈಸನ್ಸ್‌ ನ ಸಾಫ್ಟ್ ಕಾಪಿ ಯನ್ನು ತಾನು ಸ್ವೀಕರಿಸುವುದಾಗಿ ರೈಲ್ವೆ ಇಲಾಖೆ ಹೇಳಿದೆ. 

Advertisement

ಆದರೆ ನಿಮ್ಮ ಗುರುತು ಪತ್ರದ ಸಾಫ್ಟ್ ಕಾಪಿ ದಾಖಲೆಗಳು, ಭಾರತ ಸರಕಾರ ಪ್ರಜೆಗಳಿಗಾಗಿ ಕಲ್ಪಿಸಿರುವ ಡಿಜಿ ಲಾಕರ್‌ CLOUD ನಲ್ಲಿ  ದಾಖಲಾಗಿರುವುದು ಅಗತ್ಯ. ಭಾರತ ಸರಕಾರ ತನ್ನ ಪ್ರಜೆಗಳ ಆಧಾರ್‌, ಡ್ರೈವಿಂಗ್‌ ಲೈಸನ್ಸ್‌, ಪ್ಯಾನ್‌ ಕಾರ್ಡ್‌ ಮುಂತಾದ ಅಧಿಕೃತ ದಾಖಲೆಗಳನ್ನು ಡಿಜಿ ಲಾಕರ್‌ನಲ್ಲಿ  CLOUD ಮೂಲಕ ಶೇಖರಿಸಿಡುವ ವ್ಯವಸ್ಥೆಯನ್ನು ರೂಪಿಸಿ ನಿರ್ವಹಿಸುತ್ತಿದೆ. 

ರೈಲು ಪ್ರಯಾಣಿಕರ ಅಧಾರ್‌ ಮತ್ತು ಡ್ರೈವಿಂಗ್‌ ಲೈಸನ್ಸ್‌ ಸಾಫ್ಟ್ ಕಾಪಿಯನ್ನು ಅಧಿಕೃತ ದಾಖಲೆಯಾಗಿ ಪರಿಗಣಿಸುವಂತೆ ರೈಲ್ವೆ ಇಲಾಖೆ ತನ್ನ ಎಲ್ಲ ವಲಯಗಳ ಮುಖ್ಯ ವಾಣಿಜ್ಯ ಮ್ಯಾನೇಜರ್‌ಗಳಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ. 

ಹಾಗಿದ್ದರೂ ಪ್ರಯಾಣಿಕನು ತಾನೇ ಅಪ್‌ಲೋಡ್‌ ಮಾಡಿರುವ ಮತ್ತು “ಅಪ್‌ಲೋಡೆಡ್‌ ಡಾಕ್ಯುಮೆಂಟ್ಸ್‌’ ಸೆಕ್ಷನಲ್ಲಿರುವ ಈ ದಾಖಲೆ ಪತ್ರಗಳನ್ನು  ಅಧಿಕೃತ ಗುರುತು ಸಾಕ್ಷ್ಯವಾಗಿ ಪರಗಣಿಸಲಾಗದು ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next