Advertisement

ರೈಲ್ವೇ ಉದ್ಯೋಗಿಗಳ ಪ್ರಮೋಶನ್‌, ಬೋನಸ್‌ಗೆ ಹೊಸ ಅಪ್ರೈಸಲ್‌

04:25 PM Feb 10, 2018 | Team Udayavani |

ಹೊಸದಿಲ್ಲಿ : ಭಾರತೀಯ ರೈಲ್ವೇ ಉದ್ಯೋಗಿಗಳ ನೈತಿಕ ಸ್ಥೈರ್ಯ ಮತ್ತು ಕಾರ್ಯನಿರ್ವಹಣೆ ಹುಮ್ಮಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರಿಗೆ ಹೊಸ ರೀತಿಯ ಅಪ್ರೈಸಲ್‌ ವ್ಯವಸ್ಥೆಯೊಂದಿಗೆ ಬೋನಸ್‌, ಪ್ರೋತ್ಸಾಹನ ಧನ ಮತ್ತು ಗೌರವ ಬ್ಯಾಜ್‌ ನೀಡುವುದನ್ನು ರೈಲ್ವೇ ಸಮಿತಿಯೊಂದು ಶಿಫಾರಸು ಮಾಡಿದೆ.

Advertisement

ಹದಿಮೂರು ಲಕ್ಷ ಸಿಬಂದಿಗಳನ್ನು ರೈಲ್ವೇ ಇಲಾಖೆ ಹೊಂದಿದೆ. ಈ ಉದ್ಯೋಗಿಗಳ ಭಡ್ತಿಗೆ ಹೊಸ ಕ್ರಮವನ್ನು ಜಾರಿಗೆ ತರುವ, ಅವರಿಗೆ ಇನ್ನೂ ಹೆಚ್ಚಿನ ಆರ್ಥಿಕ ಪ್ರೋತ್ಸಾಹ ನೀಡುವ ಕ್ರಮವನ್ನು ರೈಲ್ವೇ ಇಲಾಖೆ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 

ರೈಲ್ವೇ ಉದ್ಯೋಗಿಗಳ ಐದು ವರ್ಷ ಅವಧಿಯ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಅಪ್ರೈಸಲ್‌ ವರದಿ ಸಲ್ಲಿಕೆಯ ಕ್ರಮ ಪ್ರಕೃತ ಜಾರಿಯಲ್ಲಿದೆ. ಆದರೆ ಇದನ್ನು ವಾರ್ಷಿಕ ವಾರ್ಷಿಕ ನೆಲೆಯ ಕಾರ್ಯನಿರ್ವಹಣೆ ಪರೀಶೀಲನೆಯ ಕ್ರಮಕ್ಕೆ ಒಳಪಡಿಸುವ ಇರಾದೆ ಎಂದು ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next