Advertisement
ರೈತರ ಸೇವೆಯೇ ದೇಶ ಸೇವೆಸಮಾಜ ಸೇವಕ ಹಾಗೂ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡ ಆರ್.ಕೆ. ರಮೇಶ್ ಮಾತನಾಡಿ, ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಲೋಕಸಭಾ ಸದಸ್ಯರಾದ ಡಿ.ಕೆ.ಸುರೇಶ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಮಾರ್ಗದರ್ಶನ, ಆಶೀರ್ವಾದದೊಂದಿಗೆ ರೈತರ ತೋಟಗಳಿಗೆ ಭೇಟಿ ನೀಡಿ ರೈತರ ಸಹಾಯಕ್ಕೆ
ಮುಂದಾಗಿದ್ದೇನೆ. ನಾನು ರೈತರ ಮಗನಾಗಿದ್ದು ರೈತರ ಕಷ್ಟ ಸುಖಗಳನ್ನು ಹತ್ತಿರದಿಂದ ಬಲ್ಲೆ. ರೈತ ಸುಖವಾಗಿದ್ದರೆ ದೇಶವೇ ಕ್ಷೇಮವಾಗಿರುತ್ತದೆ. ರೈತಕಣ್ಣೀರು ಹಾಕಿದರೆ ದೇಶವೇ ಹಸಿವಿನಿಂದ ಬಳಲುತ್ತದೆ. ಅದಕ್ಕಾಗಿ ಮೊದಲು ರೈತರ ಸೇವೆ ಮಾಡಿದರೆ ದೇಶ ಸೇವೆಯನ್ನು ಮಾಡಿದ ಪುಣ್ಯ ಬರುತ್ತದೆ ಎಂಬ ನಂಬಿಕೆ ನನ್ನದು. ಅದಕ್ಕಾಗಿ ರೈತರಿಂದಲೇ ತರಕಾರಿ ಖರೀದಿಸಿ ಕ್ಷೇತ್ರದ 60 ಸಾವಿರ ಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇನೆ. ಇದು ನಮ್ಮ ಅಳಿಲುಸೇವೆ. ನನಗೆ ಸಂತೃಪ್ತಿ ಮತ್ತು ಖುಷಿ ನೀಡುತ್ತಿದೆ ಎಂದರು.
ಆನೇಕಲ್ ಸುತ್ತಮುತ್ತ ಚಂದಾಪುರ, ಹೆನ್ನಾಗರ, ಕಾಚನಾಯಕನಹಳ್ಳಿ, ಹುಸ್ಕೂರು, ಮರಸೂರು, ಜಿಗಣಿ ಹಿನ್ನಕ್ಕಿ, ಹಾರಗದ್ದೆ, ಅತ್ತಿಬೆಲೆ, ಮಂಚೇನಹಳ್ಳಿ , ಕೊಪ್ಪ ಮುಂತಾದ ಗ್ರಾಮಗಳ ರೈತರ ತೋಟಗಳಿಗೆ ತಾವೇ ನೇರವಾಗಿ ತೆರಳಿ ರೈತರ ಕುಂದುಕೊರತೆ ವಿಚಾರಿಸಿ ನೂರಾರು ಎಕರೆ ಪ್ರದೇಶಗಳಲ್ಲಿ ಬೆಳೆದ ಕ್ಯಾರೆಟ್, ಬೀಟ್‌ರೋಟ್, ಮೂಲಂಗಿ, ಕೋಸು, ಟೊಮೆಟೋ, ಕ್ಯಾಪ್ಸಿಕಂ, ಈರುಳ್ಳಿ, ಆಲೂಗಡ್ಡೆ , ಬದ ನೆಕಾಯಿ, ಕುಂಬಳಕಾಯಿ ಮತ್ತಿತರ ತರಕಾರಿಗಳನ್ನು ಸುಮಾರು 700 ಟನ್ ನಷ್ಟು ಬೃಹತ್ ಪ್ರಮಾಣದಲ್ಲಿ ಖರೀದಿಸಿದ್ದಾರೆ. ಇದರ ಜೊತೆಯಲ್ಲಿ ಕಲ್ಲಂಗಡಿ, ಬಾಳೆ ಹಣ್ಣು. ದ್ರಾಕ್ಷಿ ಮತ್ತಿತರೆ ಹಣ್ಣುಗಳನ್ನು ಖರೀದಿಸಿದ್ದಾರೆ. ಸಂಕಷ್ಟ ಕಾಲದಲ್ಲಿ ದೇವರಾಗಿ ಬಂದರು
ಹತ್ತು ಎಕರೆಯಲ್ಲಿ ಬೆಳೆದ ಕ್ಯಾರೇಟ್ ಮತ್ತು ಕೋಸು ಬೆಳೆಯಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿತ್ತು. ಆದರೆ ಕೊರೊನಾ ಲಾಕ್ ಡೌನ್‌ನಿಂದ ಭಾರೀ ನಷ್ಟ ಉಂಟಾಗಿ ನಮ್ಮ ಬದುಕು ಬೀದಿಗೆ ಬಂದು ನೇಣು ಹಾಕಿಕೊಳ್ಳುವ ದಾರಿ ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ ಎಂಬ ಚಿಂತೆಯಲ್ಲಿದ್ದಾಗ ದೇವರಂತೆ ಬಂದು ನಮ್ಮ ಹಣ್ಣು, ತರಕಾರಿಗಳನ್ನು ಖರೀದಿಸಿ ಮ್ಮ ಬದುಕು ಹಾಗೂ ಕುಟುಂಬವನ್ನು ರಕ್ಷಿಸಿದ್ದಾರೆ. ಆದರೆ ಇಲ್ಲಿವರೆಗೆ ಸರ್ಕಾರವಾಗಲಿ, ಯಾವುದೇ ಅಧಿಕಾರಿಗಳಾಗಲೀ ನಮ್ಮ ಕಡೆ ತಿರುಗಿ ನೋಡದ ಸಂದರ್ಭದಲ್ಲಿ ನಮ್ಮ ಕಷ್ಟಕ್ಕೆ ಸಹಾಯ ಮಾಡಿದ ಆರ್.ಕೆ.ರಮೇಶ್ ನಮ್ಮ ಪಾಲಿಗೆ ದೇವರು ಎಂದರೆ ತಪ್ಪಾಗಲಾರದು ಎಂಬುದಾಗಿ ಹೆನ್ನಾಗರ ಗ್ರಾಮದ ರೈತ ಮಧು ಎದೆ ತುಂಬಿ ಮಾತನಾಡಿದರು.
Related Articles
ರಮೇಶಣ್ಣ ಅವರು ಯಾವುದೇ ಪಕ್ಷ ಬೇಧ, ಜಾತಿ ಧರ್ಮಗಳನ್ನು ನೋಡದೇ ರೈತರಿಗೆ ಮತ್ತು ಕೂಲಿಕಾರ್ಮಿಕರ ಸಂಕಷ್ಟಕ್ಕೆ ನೆರವಾಗಬೇಕು ಎಂಬ ಉದ್ದೇಶದಿಂದ ಸುಮಾರು ಒಂದು ವಾರದಿಂದ ತಮ್ಮ ಕಾರ್ಯಕರ್ತರ ಸಹಕಾರದೊಂದಿಗೆ ತೋಟಗಳಿಂದ ತರಕಾರಿ ಕಿತ್ತುಕೊಂಡು ಬಂದು ಹತ್ತು ಕೆಜಿಯಷ್ಟು ಪ್ಯಾಕೇಟ್‌ಗಳ ಸುಮಾರು 60 ಸಾವಿರ ಪ್ಯಾಕೇಟ್ ಮಾಡಿಸಿ ಲಾರಿಗಳಲ್ಲಿ ತುಂಬಿಸಿ ಹಂಚುವ ಕಾರ್ಯ ಮಾಡುತ್ತಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಗ್ರಾಮಾಂತರ ಪ್ರದೇಶ ಹೆನ್ನಾಗರ ಜಿಗಣಿ, ಬನ್ನೇರುಘಟ್ಟಕ್ಕೆ ಮಾತ್ರ ಸೀಮಿತವಾಗದೇ, ಇವರ ಸೇವಾ ಕಾರ್ಯದ ವ್ಯಾಪ್ತಿ ಬಿಬಿಎಂಪಿ ವಾರ್ಡ್‌ಗಳಿಗೂ ವಿಸ್ತರಣೆಗೊಂಡಿದೆ. ಉತ್ತರಹಳ್ಳಿ, ಕೋಣನಕುಂಟೆ, ಯಲಚೇನಹಳ್ಳಿ, ವಸಂತಪುರ, ಅಂಜನಾಪುರ ಹಾಗೂ ಗೊಟ್ಟಿಕೆರೆ ವಾರ್ಡ್‌ಗಳ 60 ಸಾವಿರ ಬಡವರ ಮನೆಮನೆಗೆ ಆಹಾರ ಹಾಗೂ ಸೊಪ್ಪು, ತರಕಾರಿ ಕಿಟ್ ವಿತರಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಇವರ ಈ ನಿಸ್ವಾರ್ಥ ಸೇವೆ ಇಡೀ ಕ್ಷೇತ್ರಕ್ಕೆ ಮಾದರಿ ಹಾಗೂ ಯುವಕರಿಗೆ ಸ್ಫೂರ್ತಿ ನೀಡುತ್ತಿದೆ ಎಂಬುದು ಬೆಂಗಳೂರು ದಕ್ಷಿಣ ಕ್ಷೇತ್ರದ ಜನರ ಮನದಾಳದ ಮಾತಾಗಿದೆ.
Advertisement
ಪ್ರತಿದಿನ 20 ಸಾವಿರ ಬಡವರಿಗೆ ಊಟಬೆಂಗಳೂರು ದಕ್ಷಿಣ ಕ್ಷೇತ್ರದ ಜಿಗಣಿ, ಬೊಮ್ಮಸಂದ್ರ, ಹೆನ್ನಾಗರ ಕೈಗಾರಿಕ ಪ್ರದೇಶಗಳಲ್ಲಿ ಕೈಗಾರಿಕೆಗಳು ಲಾಕ್ ಡೌನ್ ಪರಿಣಾಮ ಸಾವಿರಾರು ಕೂಲಿ ಕಾರ್ಮಿಕರು, ಬಡವರು ಒಂದೊತ್ತು ಊಟಕ್ಕೂ ಪರಡಾಡುತ್ತಿದ್ದರು. ಕೆಲಸವಿಲ್ಲ, ಹಣವಿಲ್ಲ, ತಿನ್ನಲು ಅನ್ನವಿಲ್ಲದ ದುಸ್ಥಿತಿಯನ್ನು ಕಂಡ ಆರ್.ಕೆ.ರಮೇಶ್ ಅವರು, ಹಸಿದ ಬಡವರಿಗೆ ಎರಡು ಹೊತ್ತು ಊಟ ನೀಡಲೆಂದು ಕಾಚನಾಯಕನಹಳ್ಳಿ ಗ್ರಾಮ, ಹೆನ್ನಾಗರ, ಮಾಸ್ತೆನಹಳ್ಳಿ, ಜಿಗಣಿ, ಹಾರಗದ್ದೆ, ಬನ್ನೇರುಘಟ್ಟ ಸೇರಿ ಹಲವೆಡೆ ಅಡುಗೆ ಕೇಂದ್ರಗಳನ್ನು ತೆರೆದು 20 ಸಾವಿರ ಆಹಾರ ಪ್ಯಾಕೇಟ್ ಮಾಡಿಸಿ ಪ್ರತಿದಿನ ವಿತರಿಸುತ್ತಿದ್ದಾರೆ. ಇವರು ಮಾಡುತ್ತಿರುವ ಅನ್ನ ದಾಸೋಹ ಕಾರ್ಯದಿಂದ ರೈತರ ಕುಟುಂಬಗಳಿಗೆ ಸೊಪ್ಪು, ತರಕಾರಿಗಳ ಕೊಂಡುಕೊಳ್ಳುವ ಮೂಲಕ ಆರ್ಥಿಕ ಸಹಾಯವಾಗಿದೆ. ಸಾವಿರಾರು ಕೂಲಿ ಕಾರ್ಮಿಕರು, ಹೊರ ರಾಜ್ಯದ ಅಸಂಘಟಿತ ಕಾರ್ಮಿಕರು ಹೊಟ್ಟೆ ತುಂಬ ಊಟ ಮಾಡಿ ಅನ್ನದಾತೋ ಸುಖೀ ಭವ ಎಂದು ಹರಸುತ್ತಿದ್ದಾರೆ. ಮಂದಹಾಸ ಮೂಡಿಸಿದ ರೈತರ ಆಪ್ತಮಿತ್ರ
ಬೆಳೆದ ತರಕಾರಿ , ಹಣ್ಣು ಕೇಳುವರಿಲ್ಲದೇ ಕಂಗಾಲಾಗಿ ಹೋಗಿದ್ದ ಎಷ್ಟೋ ರೈತರು ತರಕಾರಿಗಳನ್ನು ರಸ್ತೆಗೆ, ತಿಪ್ಪೆಗೆ ಸುರಿದಿದ್ದರು. ಇಂತಹ ರೈತರ ಮುಖದಲ್ಲಿ ಇಂದು ಜೀವ ಕಳೆ
ಮೂಡಿ ಮಂದಹಾಸ ತುಂಬಿದೆ. ಆರ್.ಕೆ.ರಮೇಶ ಅವರ ನೆರವಿನ ಹಸ್ತದಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸಮಾಜ ಸೇವಕ, ಹೃದಯ ವಂತ ಆರ್.ಕೆ. ಬ್ರದರ್ಸ್ ಸಹಾಯಕ್ಕೆ ಶುಭ ಹಾರೈಸಿ, ಇಂತಹ ರೈತರ ಆಪ್ತಮಿತ್ರ, ಹೃದಯವಂತ ನೂರು ಕಾಲ ಬಾಳಲಿ ಎಂಬುದಾಗಿ ರೈತರಾದ ಹುಸ್ಕೂರು ಮಂಜಣ್ಣ, ಕರಿಯಣ್ಣ, ಜಿಗಣಿ ರಾಜಣ್ಣ ಸೇರಿದಂತೆ ನೂರಾರು ರೈತರು ಎದೆ ತುಂಬಿ ಆಶೀರ್ವದಿಸಿದ್ದಾರೆ. ಹೆಲ್ತ್ ವಾರಿಯರ್ಸ್‌ಗೂ ಸಹಾಯ
ಕೋವಿಡ್ -19 ವಿರುದಟಛಿ ಹೋರಾಡುತ್ತಿರುವ ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತರು ಹಾಗೂ ಪೊಲೀಸರಿಗೆ ಆಹಾರದ ಕಿಟ್, ವೈದ್ಯಕೀಯ ಕಿಟ್ ಮಾಸ್ಕ್, ಸ್ಯಾನಿಟೈಜರ್ ವಿತರಿಸಿ ಅವರ ತ್ಯಾಗದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಗಣ್ಯರಿಂದ ಅಭಿನಂದನೆ, ಶ್ಲಾಘನೆ
ಆರ್.ಕೆ.ರಮೇಶ್ ಕೈಗೊಂಡಿರುವ ಕೋವಿಡ್ -19 ಸಂಕಷ್ಟದ ಪರಿಹಾರದ ಹತ್ತು ಹಲವಾರು ವಿವಿಧ ರೀತಿಯ ಕೈಂಕರ್ಯಗಳನ್ನು ಹತ್ತಿರದಿಂದ ನೋಡಿ ಹಾಗೂ ಜನರ ಬಾಯಿಂದ ಕೇಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಕೃಷ್ಣ ಬೈರೇಗೌಡ ಮತ್ತಿತರೆ ಗಣ್ಯರು ಆರ್.ಕೆ. ರಮೇಶ್ ಅವರ ಜನ ಸೇವೆ ಮೆಚ್ಚಿ ಅಭಿನಂದಿಸಿ, ಹೃದಯ ತುಂಬಿ ಶ್ಲಾಘಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಣ್ಣನ ಸೇವೆಗೆ ತಮ್ಮನ ನೆರವು
ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆರ್.ಕೆ.ಕೇಶವ ಅವರು ಅಣ್ಣ ಆರ್.ಕೆ. ರಮೇಶ್ ಅವರ ಜನಸೇವೆ ಹಾಗೂ ಜನ ಮುಖೀ ಕಾರ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಂತು
ಶ್ರೀರಾಮನಿಗೆ ಲಕ್ಷ್ಮಣನಂತೆ ಹಗಲಿರುಳು ಜೊತೆ ಜೊತೆಯಾಗಿ ನೆರಳಾಗಿ ಶ್ರಮಿಸುತ್ತಿದ್ದಾರೆ. ಮನೆ ಮನೆ ಬಾಗಿಲಿಗೆ ತರಕಾರಿ, ಆಹಾರ ಕಿಟ್ ಹಂಚಿಕೆ ದೀನ ದಲಿತರ ಮಿತ್ರ, ಹೃದಯ ಶ್ರೀಮಂತ , ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜನಸೇವೆಗಾಗಿ ಸದಾ ಮಿಡಿಯುವ ಸಮಾಜ ಸೇವಕ ಆರ್. ಕೆ.ರಮೇಶ್. ರೈತರ ತೋಟಗಳಿಂದ 700 ಟನ್ ತರಕಾರಿ ಖರೀದಿಸಿ , ಕ್ಷೇತ್ರದ 60 ಸಾವಿರ ಮನೆ ಮನೆಗಳ ಬಾಗಿಲಿಗೆ ಆಹಾರ ಕಿಟ್, ಹಣ್ಣು ತರಕಾರಿ ಕಿಟ್ ಹಂಚಿದ ಕರುಣಾಮಯಿ. 30 ಸಾವಿರ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊಳಗೇರಿಗಳಿಗೆ ವಿತರಿಸಿ ಜನಜಾಗೃತಿ ಮೂಡಿಸಿದ ಚಿಂತಕ. 20 ಸಾವಿರ ಬಡವರು ,ಕೂಲಿಕಾರ್ಮಿಕರು, ಹಾಗೂ ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಪ್ರತಿ ದಿನ ಎರಡು ಹೊತ್ತು ಊಟ
ನೀಡುತ್ತಿರುವ ಅನ್ನದಾತ. ಕೋವಿಡ್-19 ರ ಸಂಕಷ್ಟದ ದಿನಗಳಲ್ಲಿ ಎಲೆಮರೆ ಕಾಯಿಯಂತೆ ಸ್ವಯಂ ಪ್ರೇರಿತರಾಗಿ, ಸದ್ದಿಲ್ಲದೇ ಜನಸೇವೆಯಲ್ಲಿ ನಿರತರಾದ ಯುವಕರ ಸ್ಫೂರ್ತಿ, ಪ್ರೇರಣಾ ಶಕ್ತಿಯಾಗಿರುವ ಜನನಾಯಕನ ಯಶೋಗಾಥೆ ಇಲ್ಲಿದೆ.
● ಮಹೇಶ್ ಊಗಿನಹಳ್ಳಿ, ಚಂದಾಪುರ