Advertisement

ಬಿಹಾರ ಚುನಾವಣೆಯಲ್ಲಿ ರಾಹುಲ್ ಪ್ರಚಾರ ಮಾಡಿದ್ದಲ್ಲ, ಪಿಕ್ ನಿಕ್ ಮಾಡಿದ್ದರು: ಆರ್ ಜೆಡಿ ನಾಯಕ

10:55 AM Nov 16, 2020 | keerthan |

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾದ ನಂತರ ಮಹಾಘಟ ಬಂಧನ್ ನಲ್ಲಿ ಬಿರುಕು ಮೂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆರ್ ಜೆಡಿ ನಾಯಕರ ಟೀಕೆ ಆರಂಭವಾಗಿದೆ.

Advertisement

ಆರ್ ಜೆಡಿಯ ಹಿರಿಯ ನಾಯಕ ಶಿವಾನಂದ ತಿವಾರಿ ಈ ಬಗ್ಗೆ ಮಾತನಾಡಿದ್ದು, ಬಿಹಾರ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡಿರಲಿಲ್ಲ. ಅವರು ಬಿಹಾರಕ್ಕೆ ಪಿಕ್ ನಿಕ್ ಗೆ ಬಂದಿದ್ದರು ಎಂದು ಕಟುವಾಗಿ ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಮಹಾಘಟಬಂಧನ್ ನ ಪ್ರಮುಖ ಕೊಂಡಿಯಾಗಿತ್ತು. ಅವರು 70 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ 70 ಪ್ರಚಾರ ಸಭೆಯನ್ನೂ ಮಾಡಿಲ್ಲ. ರಾಹುಲ್ ಗಾಂಧಿ ಕೇವಲ ಮೂರು ದಿನ ಮಾತ್ರ ಪ್ರಚಾರ ಮಾಡಿದರು. ಪ್ರಿಯಾಂಕ ಗಾಂಧಿ ಒಂದು ದಿನವೂ ಬರಲಿಲ್ಲ. ಬಿಹಾರಕ್ಕೆ ಪರಿಚಯವೇ ಇರದವರು ಇಲ್ಲಿಗೆ ಬಂದು ಪ್ರಚಾರ ಮಾಡಿದರು, ಇದು ಸರಿಯಲ್ಲಎಂದು ತಿವಾರಿ ಹೇಳಿದರು.

ಇದನ್ನೂ ಓದಿ:ಕೈ ಪಾಳಯದಲ್ಲಿ ಮತ್ತೆ ಹಿರಿಯರ ಮುನಿಸು: ಹೈಕಮಾಂಡ್ ವಿರುದ್ಧ ಹರಿಹಾಯ್ದ ಕಪಿಲ್ ಸಿಬಲ್

243 ವಿಧಾನಸಭಾ ಕ್ಷೇತ್ರಗಳ ಬಿಹಾರದಲ್ಲಿ ಕಾಂಗ್ರೆಸ್ 70 ಕಡೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಗೆಲುವು ಸಾಧಿಸಿದ್ದು 19 ಕ್ಷೇತ್ರಗಳಲ್ಲಿ ಮಾತ್ರ. ಮಿತ್ರ ಪಕ್ಷ ಆರ್ ಜೆಡಿ 75 ಕ್ಷೇತ್ರಗಳನ್ನು ಜಯಿಸಿತ್ತು.

Advertisement

ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಎನ್ ಡಿಎ 125 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಆರ್ ಜೆಡಿ ನೇತೃತ್ವದ ಮಹಾಘಟನಬಂಧನ್  ಸ್ವಲ್ಪ ಸ್ಥಾನಗಳ ಅಂತರದಲ್ಲಿ ಅಧಿಕಾರ ವಂಚಿತವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next