Advertisement

ರಿಜ್ವಾನ್,ಬ್ಯೂಮಾಂಟ್ ಐಸಿಸಿ 2021 ವರ್ಷದ ಟಿ 20 ಶ್ರೇಷ್ಠ ಆಟಗಾರರು

05:44 PM Jan 23, 2022 | Team Udayavani |

ದುಬೈ: ಪಾಕಿಸ್ಥಾನದ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಮೊಹಮ್ಮದ್ ರಿಜ್ವಾನ್ ಅವರನ್ನು 2021 ರ ಟಿ20 ವರ್ಷದ ಶ್ರೇಷ್ಠ ಆಟಗಾರ ಮತ್ತು ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್ ಅವರನ್ನು ಟಿ20 ವರ್ಷದ ಶ್ರೇಷ್ಠ ಆಟಗಾರ್ತಿ ಎಂದು ಐಸಿಸಿ ಭಾನುವಾರ ಹೆಸರಿಸಿದೆ.

Advertisement

ಪುರುಷರ ಟಿ20 ಯಲ್ಲಿ ರಿಜ್ವಾನ್ 2021 ರಲ್ಲಿ ಆಳ್ವಿಕೆ ನಡೆಸಿದರು, ಬ್ಯೂಮಾಂಟ್ ಮಹಿಳಾ ಟಿ 20 ಗಳಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದವರಾಗಿ ವರ್ಷವನ್ನು ಪೂರ್ಣಗೊಳಿಸಿದರು.

ರಿಜ್ವಾನ್ ಬ್ಯಾಟಿಂಗ್ ನೊಂದಿಗೆ ಸ್ಟಂಪ್‌ಗಳ ಹಿಂದೆ ಎಂದಿನಂತೆ ಗಟ್ಟಿಯಾಗಿದ್ದರು, ಯುಎಇಯಲ್ಲಿ ನಡೆದ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ಥಾನದ ಸೆಮಿಫೈನಲ್‌ ಪ್ರವೇಶದಲ್ಲಿ ಪ್ರಮುಖ ಪಾತ್ರ ವಹಿಸಿದರು, ಸರಣಿಯಲ್ಲಿ ಅವರು ಮೂರನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದರು.

ವರ್ಷದ ಆರಂಭದಲ್ಲಿ ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಚೊಚ್ಚಲ ಟಿ 20 ಶತಕವನ್ನು ಗಳಿಸಿದ್ದರು. ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 87 ರನ್‌ಗಳ ಅದ್ಭುತ ಆಟದೊಂದಿಗೆ ತಮ್ಮ ಫಾರ್ಮ್ ಮುಂದುವರೆಸಿದ್ದರು. ಮುಂದಿನ ಟಿ 20 ವಿಶ್ವಕಪ್ನಲ್ಲಿ ರಿಜ್ವಾನ್ ಮೇಲೆ ಪಾಕಿಸ್ಥಾನ ಭಾರಿ ನೀರಿಕ್ಷೆ ಇಟ್ಟುಕೊಂಡಿದೆ.

ರಿಜ್ವಾನ್ ಅವರು ಭಾರತದ ವಿರುದ್ಧದ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ 55 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿದ್ದರು, ಜಾಗತಿಕ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಪಾಕಿಸ್ಥಾನ ತನ್ನ ಮೊದಲ ಜಯವನ್ನು ದಾಖಲಿಸಲು ಕೊಡುಗೆ ಸಲ್ಲಿಸಿದ್ದರು.

Advertisement

ಬ್ಯೂಮಾಂಟ್ ಟಿ 20 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾ ಗಿದ್ದಾರೆ.

ತವರಿನ ಹೊರಗೆ ನ್ಯೂಜಿಲೆಂಡ್ ವಿರುದ್ಧ , ಬ್ಯೂಮಾಂಟ್ ಅಗ್ರ ಸ್ಕೋರರ್ ಆಗಿದ್ದರು ಮತ್ತು ಮೂರು ಪಂದ್ಯಗಳಲ್ಲಿ 102 ರನ್ ಗಳಿಸಿದ್ದಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಡಿದ್ದರು. ಭಾರತದ ವಿರುದ್ಧದ ಪಂದ್ಯದಲ್ಲಿ ಅದ್ಭುತವಾದ ಅರ್ಧಶತಕವನ್ನು ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next