Advertisement

Gujarat: ಅಪಾಯದ ಮಟ್ಟ ಮೀರಿದ ನದಿಗಳು

11:19 PM Aug 27, 2024 | Team Udayavani |

ಗಾಂಧಿನಗರ: ಗುಜರಾತ್‌ನಲ್ಲಿ ಸತತ 3ನೇ ದಿನವೂ ಭಾರೀ ಮಳೆ ಆಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಳೆದ 2 ದಿನದಲ್ಲಿ 15,000 ಮಂದಿಯನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದ್ದು, 300 ಮಂದಿಯನ್ನು ರಕ್ಷಿಸಲಾ ಗಿದೆ. ರಕ್ಷಣೆಗಾಗಿ ಸೇನೆಯ 6 ತುಕಡಿಯನ್ನೂ ನಿಯೋಜಿಸಲಾಗಿದೆ.

Advertisement

ವಿಶ್ವಾಮಿತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಮೀಪದ ಪ್ರದೇಶಗಳು ಜಲಾವೃತವಾಗಿವೆ. ವಡೋದರದಲ್ಲಿ 8361 ಮಂದಿ,  ಪಂಚ ಕಮಲ್‌ ಜಿಲ್ಲೆಯಲ್ಲಿ 4000 ಮಂದಿ ಯನ್ನು ಸ್ಥಳಾಂತರಿಸಲಾಗಿದೆ. ವಾಯು ಪಡೆ ಮತ್ತು ಕರಾವಳಿ ಭದ್ರತಾ ಪಡೆ ಸಹಾಯದಿಂದ 300 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ 75 ಮಂದಿ ತುಂಬು ಗರ್ಭಿಣಿಯರಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಾರೆ ಮಳೆ ಪೀಡಿತ ಪ್ರದೇಶಗಳಿಂದ ಈ ವರೆಗೆ 23,870 ಮಂದಿಯನ್ನು ಸ್ಥಳಾಂತರಿಸಲಾಗಿದೆ. ರಾಜಸ್ಥಾನದ ಜೈಪುರ, ಉದಯಪುರ, ಬನಸ್ವಾರ, ದುಂಗಾರ್‌ಪುರ ಜಿಲ್ಲೆಗಳಲ್ಲೂ  ಭಾರೀ ಮಳೆಯಾಗಿದೆ. ಕಾಶ್ಮೀರದಲ್ಲಿ ಮೇಘ ಸ್ಫೋಟದಲ್ಲಿ ನಾಪತ್ತೆಯಾಗಿ ದ್ದವರ ಪೈಕಿ 2 ಶವ ಮಂಗಳವಾರ ಪತ್ತೆಯಾಗಿದೆ. ಇದರಲ್ಲಿ 12 ವರ್ಷದ ಬಾಲಕನ ಶವವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next