Advertisement
ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪುರಭವನದಲ್ಲಿ ರವಿವಾರ ಆಯೋಜಿಸಿದ್ದ “ತಲ್ಲೂರು ನುಡಿಮಾಲೆ 2017: ಕರಾವಳಿ ಕಟ್ಟು’ ಕಾರ್ಯಕ್ರಮದಲ್ಲಿ “ಡಿಜಿಟಲ… ಯುಗದಲ್ಲಿ ಗ್ರಾಮೀಣ ಭಾರತದ ಕಥನ’ ಕುರಿತು ಉಪನ್ಯಾಸ ನೀಡಿ ಸಂವಾದ ನಡೆಸಿದ ಅವರು ಜಲ ಸಮಸ್ಯೆ ಬಂದಾಗ ಮುಂಗಾರು ಇಳಿಮುಖ, ಜಲ ಹಂಚಿಕೆಯನ್ನು ತೋರಿಸುತ್ತಾರೆ. ಒಟ್ಟು ನೀರಾವರಿಗೆ ಬರುವ ಶೇ. 60 ಭೂಗರ್ಭದ ನೀರನ್ನು ಮರುಪೂರಣಗೊಳಿಸದ ವಿಷಯವನ್ನು ಹೇಳುತ್ತಿಲ್ಲ. ನೀರಿನ ಕೊರತೆಗೆ ಇದೇ ಮುಖ್ಯ ಕಾರಣ ಎಂದರು.
1980ರಲ್ಲಿ ನರ್ಮದಾ, ಆಲಮಟ್ಟಿ ಅಣೆಕಟ್ಟುಗಳ ಬಗೆಗೆ ಮಾಧ್ಯಮ ಚರ್ಚೆ ನಡೆಯುತ್ತಿತ್ತು. ಈಗ ಇದು ಕಣ್ಮರೆಯಾಗಿದೆ. ಬಾಲಿವುಡ್‌ನಿಂದ ಹಣ ಬರುತ್ತದೆ ವಿನಾ ಯಕ್ಷಗಾನದಿಂದ ಹಣ ಬರುವುದಿಲ್ಲ. ಕಳೆದ 20 ವರ್ಷಗಳಿಂದ ಮಾಧ್ಯಮ ರಂಗ ಕಾರ್ಪೊರೇಟ್ ರಂಗವಾಗಿದೆ ಎಂದು ಸಾಯಿನಾಥ್ ಅಭಿಪ್ರಾಯಿಸಿದರು. ಪ್ರತಿರೋಧದ ಪತ್ರಿಕಾರಂಗ
ಗಾಂಧೀಜಿ, ನೆಹರೂ, ಅಂಬೇಡ್ಕರ್ ಅವರಂತಹವರು ಪತ್ರಿಕಾರಂಗದವರು. ತಪ್ಪುಗಳಾಗಿದ್ದಲ್ಲಿ ಅದನ್ನು ವಿರೋಧಿಸಿ ಎಚ್ಚರಿಸುವುದು ಪತ್ರಿಕಾರಂಗದ ಮುಖ್ಯ ಕರ್ತವ್ಯ ಎಂದರು.
Related Articles
Advertisement
ಕಳೆದ 50 ವರ್ಷಗಳಲ್ಲಿ ಸುಮಾರು 225 ಭಾಷೆಗಳು ನಶಿಸಿ ಹೋಗಿವೆ. ಶಿಕ್ಷಣ ವ್ಯವಸ್ಥೆ ದುಬಾರಿಯಾಗುತ್ತಿದ್ದು ಕೇವಲ ಸಿರಿವಂತರಿಗೆ ಮಾತ್ರ ಸೀಮಿತ ವಾಗುತ್ತಿದೆ. ಶೈಕ್ಷಣಿಕ ಪಠ್ಯ ಪುಸ್ತಕಗಳು ಸಹ ಸಾಮಾನ್ಯ ವಿದ್ಯಾರ್ಥಿಗೆ ಸಿಗದ ಪರಿಸ್ಥಿತಿಯಿದೆ. ಅದಕ್ಕಾಗಿಯೇ ಯುವಕರಿಗೆ ಅನುಕೂಲ ಆಗಬಲ್ಲ ಪಠ್ಯಗಳನ್ನು ರೂರಲ… ಇಂಡಿಯಾ ಆನ್‌ಲೈನ್ ಪತ್ರಿಕೆ ಪ್ರಕಟಿಸುತ್ತಿದೆ ಎಂದರು.
ಪತ್ರಕರ್ತ ರಾಜಾರಾಂ ತಲ್ಲೂರು ಬರೆದ “ನುಣ್ಣನ್ನ ಬೆಟ್ಟ’ ಕೃತಿ ಯನ್ನು ಬಿಡುಗಡೆಗೊಳಿಸಿದರು. ಪ್ರೊ| ರಾಬರ್ಟ್ ಜೋಸ್ ಕೃತಿ ಪರಿಚ ಯಿಸಿದರು. ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ, ಜಿ. ಎನ್. ಮೋಹನ್, ಕತೆಗಾರ ಪ್ರೊ| ಎಂ.ಎಸ್. ಶ್ರೀರಾಮ…, ಅಜೀಂ ಪ್ರೇಂಜಿ ವಿ.ವಿ. ಪ್ರಾಧ್ಯಾಪಕ ಡಾ| ಎ. ನಾರಾಯಣ ಸಂವಾದ ನಡೆಸಿದರು. ಸಂಘಟಕ ಸದಸ್ಯರಾದ ಡಾ| ಪಿ.ವಿ. ಭಂಡಾರಿ ಸ್ವಾಗತಿಸಿ, ಐವನ್ ಡಿಸಿಲ್ವ, ರಾಮಕೃಷ್ಣ ಹೇಳೆì ವಂದಿಸಿದರು. ಸುಮಾ ನಿರ್ವಹಿಸಿದರು. ಸತೀಶ ಚಪ್ಪರಿಕೆ ಅತಿಥಿಗಳನ್ನು ಪರಿಚಯಿಸಿದರು.
ಚೀನಿಯರೆಲ್ಲ ಒಂದೇ ತೆರನಾಗಿ ಕಾಣುತ್ತಾರೇಕೆ?ಚೀನ ದೇಶದವರನ್ನು ಕಂಡಾಗ ಒಂದೇ ತೆರನಾಗಿ ಕಾಣುತ್ತದೆಯಲ್ಲ? ಈ ಒಂದೇ ತೆರನಾದ ಮುಖವರ್ಣಿಕೆಗೆ ಒಂದು ಕರಾಳ ಚರಿತ್ರೆ ಇದೆ. 3,500- 4,000 ವರ್ಷಗಳ ಹಿಂದೆ ಅಲ್ಲಿದ್ದ ಎಲ್ಲ ಗುಡ್ಡಗಾಡು ಸಂಸ್ಕೃತಿಯನ್ನು ನಾಶ ಮಾಡುವ ಅಭಿಯಾನ ನಡೆಯಿತು. ಇದರಿಂದ ಒಂದೇ ಸಂಸ್ಕೃತಿ, ಧರ್ಮ ಅಲ್ಲಿ ಸ್ಥಾಪನೆಯಾಯಿತು. ಭಾರತಕ್ಕೆ ಹಿಮಾಲಯ ಪರ್ವತ ಒಂದು ರಕ್ಷಣಾ ಗೋಡೆ ಇದೆ. ಹೀಗಾಗಿ ಚೀನಿಯರ ಆಕ್ರಮಣ ನಡೆಯಲಿಲ್ಲ, ಇಲ್ಲದೆ ಇದ್ದರೆ ನಾವೆಲ್ಲರೂ ಚೀನಿಯರಂತೆ ಆಗುತ್ತಿದ್ದೆವು.
– ನಾಗೇಶ್ ಹೆಗಡೆ