ಕಾರ್ಕಳ: ಕಾರ್ಕಳ ತಾಲೂಕಿನ ಮಲೆಬೆಟ್ಟು, ಕೆರ್ವಾಶೆ ಗ್ರಾಮಗಳ ನಡುವೆ ಹರಿಯುವ ಸ್ವರ್ಣ ನದಿಯ ಬಾಂಕ ಗುಂಡಿಗೆ ಕಿಡಿಗೇಡಿಗಳು ವಿಷಪ್ರಾಶನ ಹಾಕಿದ ಹಿನ್ನೆಲೆಯಲ್ಲಿ ನೀರು ಕಲುಷಿತಗೊಂಡಿದೆ. ಇದರಿಂದಾಗಿ ಮೀನುಗಳು ಸಾವನ್ನಪ್ಪಿವೆ.
Advertisement
ನೀರಿನ ಕೊರತೆಯ ನಡುವೆಯೂ ಗುಂಡಿಯಲ್ಲಿ ಶೇಖರಣೆಗೊಂಡಿದ್ದ ನೀರಿಗೆ ಗೇರುಬೀಜ ಎಣ್ಣೆ ಇಲ್ಲವೇ ಯಾವುದೋ ಕೀಟನಾಶಕ ಹಾಕಿರುವ ಶಂಕೆ ಇದ್ದು. ಮೀನು ಹಿಡಿಯಲೆಂದು ಈ ರೀತಿ ಮಾಡಿರುವ ಶಂಕೆಯಿದೆ. ಇದರಿಂದ ಯಥೇತ್ಛವಾಗಿ ಮೀನುಗಳ ಮಾರಣ ಹೋಮವಾಗಿದೆ.
ಕುಡಿಯುವ ನೀರಿಗೆ ಬರ ಇರುವ ಈ ಸಮಯದಲ್ಲಿ ದಿನನಿತ್ಯದ ಬಳಕೆಗೆ ಆಧಾರವಾಗಿದ್ದ ನೀರಿನ ಮೂಲಕ್ಕೆ ವಿಷ ಪ್ರಾಶನ ಮಾಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.