Advertisement
ಈ ಹೊಸ ನ್ಯಾಯಾಧಿಕರಣವು ಅಸ್ತಿತ್ವಕ್ಕೆ ಬಂದರೆ, ಪ್ರಸ್ತುತವಿರುವ ಎಲ್ಲಾ ನದಿ ವ್ಯಾಜ್ಯಗಳ ನ್ಯಾಯಾಧಿಕರಣಗಳು ಅದರಲ್ಲೇ ವಿಲೀನಗೊಳ್ಳಲಿವೆ. ಪ್ರಸ್ತುತ ದಶಕಗಳಿಂದ ಬೇರೆ ಬೇರೆ ಟ್ರಿಬ್ಯುನಲ್‌ಗಳಲ್ಲಿ ರಾಜ್ಯಗಳ ನದಿ ನೀರು ಹಂಚಿಕೆ ಪ್ರಕರಣಗಳು ಕೊಳೆಯುತ್ತಿವೆ. 5 ನ್ಯಾಯಾಧಿಕರಣಗಳು ವಿವಿಧ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿವೆ. ಆದರೆ ಮುಂದೆ ಹಾಗಾಗುವುದಿಲ್ಲ, ಹೊಸ ನ್ಯಾಯಾಧಿಕರಣವು ಕಾಲ ಮಿತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕಿರುತ್ತದೆ. ನಾಲ್ಕೂವರೆ ವರ್ಷಗಳ ಗಡುವು ವಿಧಿಸಲಾಗಿದೆ.
Related Articles
ಅವರು ನಡೆಸುವ ಪ್ರಸ್ತಾಪವಿತ್ತು.ನ್ಯಾಯಾಧಿಕರಣದ ಅಧ್ಯಕ್ಷರು ಮತ್ತು ಸದಸ್ಯರನ್ನು ನಾಲ್ವರು ಸದಸ್ಯರ ಕೊಲೀಜಿಯಂ
ಆಯ್ಕೆ ಮಾಡಬೇಕೆಂಬ ಸ್ಥಾಯಿ ಸಮಿತಿಯ ಶಿಫಾರಸನ್ನು ನಾವು ಒಪ್ಪಿಕೊಂಡಿದ್ದೇವೆ. ಇದು ಕೇಂದ್ರ ವಿಚಕ್ಷಣಾ ಆಯೋಗದಂತಹ ಸಂಸ್ಥೆಗಳಿಗೆ ಅಧ್ಯಕ್ಷರ ನೇಮಕಾತಿ ನಡೆಸುವ ರೀತಿಯಲ್ಲೇ ಆಗಲಿದೆ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
Advertisement
ಸ್ಥಾಯಿ ಸಮಿತಿ ವಿವಾದ ಇತ್ಯರ್ಥಕ್ಕೆ ಕೇವಲ ಎರಡು ವರ್ಷ ಗಡುವನ್ನಷ್ಟೇ ವಿಧಿಸಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ನಾಲ್ಕೂವರೆ ವರ್ಷ ಅವಧಿಯನ್ನೇ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ಅವರು ಹೇಳಿದರು.
1956ರ ಮೂಲ ಕಾಯ್ದೆಯಲ್ಲಿ ನ್ಯಾಯಾಧಿಕರಣಗಳಿಗೆ ಆರು ವರ್ಷಗಳ ಗಡುವು ಇತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುವ ಅವಕಾಶವಿತ್ತು. ನೂತನ ಕರಡು ಮಸೂದೆಯ ಪ್ರಕಾರ,ನ್ಯಾಯಾಧಿಕರಣ ನೀಡುವ ತೀರ್ಪಿಗೆ ಕಕ್ಷಿದಾರ ರಾಜ್ಯಗಳು ಬದಟಛಿವಾಗಿರಬೇಕು. ಈ ತೀರ್ಪು ಸುಪ್ರೀಂ ಕೋರ್ಟ್‌ನ ತೀರ್ಪು ಅಥವಾ ಡಿಕ್ರಿಯಷ್ಟೇ ಮಹತ್ವ ಹೊಂದಿರುತ್ತದೆ. ಯಾವುದೇ ವಿವಾದವನ್ನು ನ್ಯಾಯಾಧಿಕರಣಕ್ಕೆ ಕೊಂಡೊಯ್ಯುವ ಮುನ್ನ, ಕೇಂದ್ರ ಸರ್ಕಾರ ಸ್ಥಾಪಿಸಲಿರುವ ವಿವಾದ ಇತ್ಯರ್ಥ ಸಮಿತಿ (ಡಿಆರ್‌ಸಿ)ಯ ಮುಂದೆ ವಿಲೇವಾರಿ ನಡೆಸಲು ಪ್ರಯತ್ನಿಸಬೇಕು. ಅಲ್ಲಿ ಒಂದೂವರೆ ವರ್ಷದೊಳಗೆ ಇತ್ಯರ್ಥವಾಗದಿದ್ದರೆ ವಿವಾದವನ್ನು ನ್ಯಾಯಾಧಿಕರಣದತ್ತ ಕೊಂಡೊಯ್ಯಬಹುದಾಗಿದೆ. ನ್ಯಾಯಾಧಿಕರಣದ ಅಧ್ಯಕ್ಷರು ಹಾಗೂ ಸದಸ್ಯರಿಗೆ ಇದೇ ಮೊದಲ ಬಾರಿಗೆ ವಯಸ್ಸಿನ ಮಿತಿ ನಿಗದಿಗೊಳಿಸಲಾಗಿದ್ದು, 70 ವರ್ಷಕ್ಕೆ ನಿವೃತ್ತಿ ಹೊಂದಲಿದ್ದಾರೆ. 1956ರ ಕಾಯ್ದೆಯಲ್ಲಿ ವಯಸ್ಸಿನ ಮಿತಿ ಇರಲಿಲ್ಲ. ಅಷ್ಟೇ ಅಲ್ಲ, ಸ್ಥಾಯಿ ಸಮಿತಿಯ ಶಿಫಾರಸಿನಂತೆ, ಹೊಸ ಏಕ ನ್ಯಾಯಾಧಿಕರಣ ಅಸ್ತಿತ್ವಕ್ಕೆ ಬಂದ ಮರುಕ್ಷಣದಿಂದಲೇ ಈಗ ಇರುವ ಎಲ್ಲಾ ನ್ಯಾಯಾಧಿಕರಣಗಳ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರ ಮೊಟಕುಗೊಳ್ಳಲಿದೆ. ಮೂಲ ಮಸೂದೆಯಲ್ಲಿ ಮೂರು ತಿಂಗಳ ತನಕ ಮುಂದುವರಿಯಲು ಅವಕಾಶವಿತ್ತು. ಈ ಮಸೂದೆ ಅಂಗೀಕಾರಗೊಂಡು ಕಾಯ್ದೆಯಾಗುತ್ತಿದ್ದಂತೆ, ಪ್ರಸ್ತುತ ಇರುವ ಎಲ್ಲಾ ನದಿ ವ್ಯಾಜ್ಯಗಳನ್ನು ಪ್ರಸ್ತುತವಿರುವ ನ್ಯಾಯಾಧಿಕರಣಗಳು ಬರ್ಕಾಸ್ತುಗೊಳಿಸಲಿವೆ ಮತ್ತು ಹೊಸ ನ್ಯಾಯಾಧಿಕರಣಕ್ಕೆ ವರ್ಗಾಯಸಿಲಿವೆ. ಈಗಿರುವ ನ್ಯಾಯಾಧಿಕರಣಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಆಯಾ ರಾಜ್ಯ ಸರ್ಕಾರಗಳ ಸೇವೆಗೆ ಮರಳಲಿದ್ದಾರೆ ಎಂದು ಇನ್ನೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ. ದೇಶದಲ್ಲಿದೆ 20 ಪ್ರಮುಖ ನದಿ ಪಾತ್ರಗಳು
ಭಾರತದಲ್ಲಿ 20 ಪ್ರಮುಖ ಅಂತರ್‌ರಾಜ್ಯ ನದಿ ಪಾತ್ರಗಳಿವೆ. ಇವುಗಳ ನೀರು ಹಂಚಿಕೆಯ ಸಂಬಂಧ ರಾಜ್ಯಗಳ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಈ ಕೆಲವು ವಿವಾದಗಳು ವರ್ಷಗಳಿಂದ ಚಾಲ್ತಿಯಲ್ಲಿವೆ. ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಜಲ ವಿವಾದ 27 ವರ್ಷಗಳಿಂದ ನ್ಯಾಯ ತೀರ್ಮಾನವಾಗದೆ ಹಾಗೆಯೇ ಉಳಿದುಕೊಂಡಿದೆ.