Advertisement
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ| ಇಂದಿರಾ ಹೆಗ್ಡೆ, ತಳವರ್ಗದ ಜನರ ಬೆಂಬಲದಿಂದ ಸಂಶೋಧನಾತ್ಮಕ ಬರೆಹಗಳನ್ನು ಬರೆಯುವಂತಾಯಿತು. ಕರಾವಳಿ ಭಾಗದ ಆಚಾರ, ವಿಚಾರ, ಭೂತಾರಾಧನೆ ಪರಿಕಲ್ಪನೆ ಬದಲಾಗುತ್ತಿದೆ ಹಾಗೂ ಮಾತೃ ಸಂಸ್ಕೃತಿ ಪಲ್ಲಟವಾಗುತ್ತಿದೆ. ಸಾಲು ಸಾಲು ಉದ್ಯಮಗಳು ತಲೆಎತ್ತಿರುವ ಇಲ್ಲಿನ ಈಗಿನ ಪರಿಸರ ಬರವಣಿಗೆಗೆ ಹಿತ ಕೊಡುತ್ತಿಲ್ಲ ಎಂದರು.
ಒಲವು ಕಡಿಮೆ ಇದೆ
“ತುಳು ಸಂಶೋಧನೆ-ಇತ್ತೀಚಿನ ಒಲವುಗಳು’ ಇದರ ಕುರಿತು ಎನ್ನೆಸ್ಸೆಸ್ ರಾಜ್ಯ ಸಂಚಾಲಕ ಡಾ| ಗಣನಾಥ ಶೆಟ್ಟಿ ಎಕ್ಕಾರು ವಿಶೇಷ ಉಪನ್ಯಾಸಗೈದು, ತುಳು ಸಂಶೋಧನೆಯತ್ತ ವಿದ್ಯಾರ್ಥಿಗಳ ಒಲವು ಕಡಿಮೆ ಇದೆ. ಪಿಎಚ್‌ಡಿ ಮಾಡುವವರಲ್ಲಿ ಶೇ. 90ರಷ್ಟು ಮಂದಿ ಅದನ್ನು ಪ್ರಕಟಿಸಲು ಹಿಂಜರಿಯು ತ್ತಾರೆ. ಅವರು ಮಾಡಿದ ಸಂಶೋಧನೆ ಗಳ ಮೇಲೆ ಅವರಿಗೇ ನಂಬಿಕೆ ಇರುವು ದಿಲ್ಲ. ಸಂಶೋಧನೆ ಪದವಿ ಪಡೆಯಲು ಮಾತ್ರ ಮಾಡುವಂಥದ್ದಲ್ಲ. ವಿದೇಶಿಗರ ಸ್ಫೂರ್ತಿಯಿಂದ ದೇಶೀಯ ಸಂಶೋಧಕರು ಹುಟ್ಟಿಕೊಂಡಿದ್ದಾರೆ. ಭಾಷಾ ಕೀಳರಿಮೆ ಇನ್ನೂ ಹೋಗಿಲ್ಲ. ತುಳು ಜನಪದ ಸಂಗ್ರಹ, ಸಂಶೋಧನೆ ಹೆಚ್ಚಬೇಕಿದೆ. ಪ್ರಾದೇಶಿಕ ಭಾಷೆಗಳ ಸಂಶೋಧನೆಗೆ ಮಂಗಳೂರು ವಿ.ವಿ. ಹೆಚ್ಚಿನ ಒತ್ತು ಕೊಡಬೇಕಿದೆ ಎಂದರು. ಉಡುಪಿ ಡಾ| ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಮಹಾಬಲೇಶ್ವರ ರಾವ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ಸ್ವಾಗತಿಸಿದರು. ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಅಭಿನಂದನ ಮಾತುಗಳನ್ನಾಡಿದರು. ಡಾ| ಜ್ಯೋತಿ ಚೇಳಾÂರು ಕಾರ್ಯಕ್ರಮ ನಿರೂಪಿಸಿದರು. ಡಾ| ಅಶೋಕ್ ಆಳ್ವ ಅವರು ವಂದಿಸಿದರು.
Related Articles
ಪೊಳಲಿ ಶೀನಪ್ಪ ಹೆಗ್ಡೆ ಅವರ ಈ ಪ್ರಶಸ್ತಿ 10,000 ರೂ. ನಗದು ಪುರಸ್ಕಾರವನ್ನು ಸಮಾಜ ಸೇವೆಗೈಯುತ್ತಿರುವ ಚಾರಿಟೆಬಲ್ ಟ್ರಸ್ಟ್‌ಗೆ ನೀಡುವುದಾಗಿ ಘೋಷಿಸಿದ ಡಾ| ಇಂದಿರಾ ಹೆಗ್ಡೆ, ಮಣಿಪಾಲ ವಿ.ವಿ.ಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಜತೆಗೆ ಕೈ ಜೋಡಿಸಿ “ಪೊಳಲಿ ಶೀನಪ್ಪ ಹೆಗ್ಡೆ-ಎಸ್.ಆರ್. ಹೆಗ್ಡೆ’ ಜಂಟಿ ಹೆಸರಿನಲ್ಲಿ ಪ್ರಶಸ್ತಿಯನ್ನು ಮುಂದಿನ ವರ್ಷದಿಂದ ನೀಡಲಾಗುವುದು. ಈ ಪ್ರಶಸ್ತಿ ಅತ್ಯಂತ ಸೂಕ್ತ ವ್ಯಕ್ತಿಗಳಿಗೆ ಲಭಿಸುವಂತಾಗಬೇಕು ಎಂದರು.
Advertisement