Advertisement

ಕುಸ್ತಿ ಕೂಟದಲ್ಲಿ ಒಂದು ಅಂಕದಿಂದ ಸೋಲು: ಮನನೊಂದ ಗೀತಾ ಪೋಗಟ್ ಸಹೋದರಿ ಆತ್ಮಹತ್ಯೆ!

09:40 AM Mar 18, 2021 | Team Udayavani |

ಹೊಸದಿಲ್ಲಿ: ಭಾರತದ ಪ್ರಸಿದ್ದ ಕುಸ್ತಿ ಪಟುಗಳಾದ ಗೀತಾ- ಬಬಿತಾ ಪೋಗಟ್ ರ ಸಹೋದರಿ ರಿತಿಕಾ ಇಂದು ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಸ್ತಿ ಕೂಟದಲ್ಲಿ ಸೋಲನುಭವಿಸಿದ ಹತಾಶೆಯಿಂದ ರಿತಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದೆ.

Advertisement

17 ವರ್ಷದ ರಿತಿಕಾ ಅವರು ಗೀತಾ ಪೋಗಟ್ ಮತ್ತು ಬಬಿತಾ ಪೋಗಟ್ ಅವರ ಸೋದರ ಸಂಬಂಧಿಯಾಗಿದ್ದಾರೆ. ಈಕೆ ಮಾರ್ಚ್ 14ರಂದು ರಾಜ್ಯ ಮಟ್ಟದ ಕೂಟದ ಫೈನಲ್ ನಲ್ಲಿ ಸೋಲನುಭವಿಸಿದ್ದರು. ಫೈನಲ್ ಪಂದ್ಯದಲ್ಲಿ ಕೇವಲ ಒಂದು ಅಂಕದಿಂದ ಸೋಲನುಭವಿಸಿದ ಹತಾಶೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಬಿಜೆಪಿ ಸಂಸದನ ನಿವಾಸದ ಬಳಿ 15 ಕಡೆ ಕಚ್ಚಾ ಬಾಂಬ್ ದಾಳಿ: ಮೂವರಿಗೆ ಗಾಯ

ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ತರಬೇತುದಾರ ಮಹಾವೀರ್ ಸಿಂಗ್ ಪೋಗಟ್ ಅವರ ಬಳಿ ರಿತಿಕಾ ತರಬೇತಿ ಪಡೆಯುತ್ತಿದ್ದಾರೆ. ಫೈನಲ್ ಪಂದ್ಯ ನಡೆಯುವ ವೇಳೆ ಮಹಾವೀರ್ ಸಿಂಗ್ ಪೋಗಟ್ ಕೂಡಾ ಸ್ಥಳದಲ್ಲಿದ್ದರು.

ಮಹಾವೀರ್ ಸಿಂಗ್, ಬಬಿತಾ- ಪೋಗಟ್ ಅವರ ಜೀವನಗಾಥೆಯನ್ನು ಅಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ದಂಗಲ್ ಚಿತ್ರ ನಿರ್ಮಿಸಲಾಗಿತ್ತು.

Advertisement

ಇದನ್ನೂ ಓದಿ: 14 ವರ್ಷ ಹಿಂದೆ ನಾಪತ್ತೆಯಾಗಿದ್ದ ಸೈನಿಕ ಪತ್ತೆ! ಅಪಘಾತವಾಗಿ ಸ್ಮರಣ ಶಕ್ತಿ ನಾಶ

Advertisement

Udayavani is now on Telegram. Click here to join our channel and stay updated with the latest news.

Next