Advertisement
ಮನುಷ್ಯನ ದೇಹಕ್ಕೆ ಕಾಯಿಲೆ ಅಂಟಿಕೊಳ್ಳಲು ತಿನ್ನುವ ಆಹಾರ, ಕುಡಿಯುವ ಪಾನೀಯ, ಉಸಿರಾಡುವ ಅಶುದ್ಧ ಗಾಳಿಯೇ ಕಾರಣವಾಗಬೇಕೆಂದಿಲ್ಲ. ಸುತ್ತಮುತ್ತಲಿನ ಪರಿಸರ, ದಿನನಿತ್ಯ ಓಡಾಡುವ ವಾತಾವರಣಗಳೇ ವಿವಿಧ ರೀತಿಯ ಸೋಂಕುಗಳನ್ನು ತಂದೊಡ್ಡಬಹುದು. ಅಂತಹ ರೋಗ ಹರಡುವ ಪ್ರಮುಖ ಕಾರಣಗಳಲ್ಲಿ ಶಿಲೀಂಧ್ರಗಳೂ ಒಂದು.
Related Articles
ಶಿಲೀಂಧ್ರಗಳ ಬೆಳವಣಿಗೆಗೆ ತೇವಾಂಶವೇ ಕಾರಣವಾಗಿರುತ್ತದೆ. ದೇಹದ ಯಾವುದೇ ಭಾಗ ತೇವಾಂಶದಿಂದ ಕೂಡಿರದಂತೆ ನೋಡಿಕೊಳ್ಳಿ. ಸ್ನಾನ ಮಾಡಿದ ಅನಂತರ ದೇಹವನ್ನು ಬಾತ್ ಟವೆಲ್‌ನಿಂದ ಸರಿಯಾಗಿ ಒರೆಸಿಕೊಳ್ಳಬೇಕು. ಸ್ವತ್ಛ ಕಾಲುಚೀಲ, ಟವೆಲ್, ಬಟ್ಟೆಗಳನ್ನು ಪ್ರತಿನಿತ್ಯ ಬಳಸಬೇಕು. ತೇವಾಂಶರಹಿತ ಒಳ ಉಡುಪು, ಒಳಲಂಗಗಳನ್ನು ಬಳಸಬೇಕು. ಸಾಬೂನು, ಬಾಚಣಿಗೆಯನ್ನು ಇನ್ನೊಬ್ಬರು ಬಳಸದಂತೆ ಜಾಗೃತೆ ವಹಿಸಿ. ವಾರದಲ್ಲಿ ಕನಿಷ್ಠ ಎರಡು ಬಾರಿ ತಲೆ ಸ್ನಾನ ಮಾಡಬೇಕಾದುದು ಅತೀ ಅವಶ್ಯ.
Advertisement
ಹಳ್ಳಿಮದ್ದುಇನೆ#ಕ್ಷನ್ ರಿಂಗ್‌ವರ್ಮ್ ಎಂತಲೂ ಕರೆಯಲ್ಪಡುವ ಫಂಗಸ್ ಸೋಂಕುಗಳು ಹೆಚ್ಚಾಗಿ ಬೆರಳ ಸಂಧಿಯಲ್ಲೇ ಕಾಣಿಸಿಕೊಳ್ಳುತ್ತವೆ. ಉಗುರು ಸುತ್ತು ಎಂದೂ ಇದನ್ನು ಹೇಳಲಾಗುತ್ತದೆ. ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಈ ಜಾಗದಲ್ಲಿ ಒಂದು ವಾರ ನಿರಂತರ ಹಚ್ಚಿದರೆ ಫಂಗಸ್ ಕಡಿಮೆಯಾಗುತ್ತದೆ. ಎರಡು ಟೀ ಸ್ಪೂನ್ ತೆಂಗಿನ ಎಣ್ಣೆಗೆ ಒಂದೆರಡು ಬೆಳ್ಳುಳ್ಳಿ ಜಜ್ಜಿ ಹಾಕಿ ಬಿಸಿ ಮಾಡಿ ಅನಂತರ ಅದೇ ಎಣ್ಣೆಯಲ್ಲಿ ಈ ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಶಿಲೀಂಧ್ರ ಸೋಂಕು ಆಗಿರುವ ಜಾಗಕ್ಕೆ ಹಚ್ಚಿದರೆ ಕ್ರಮೇಣ ರೋಗ ವಾಸಿಯಾಗುತ್ತದೆ. ಅರ್ಧ ಟೇಬಲ್ ಸ್ಪೂನ್ ಬೇಕಿಂಗ್ ಸೋಡಾವನ್ನು ಒಂದೆರಡು ಸ್ಪೂನ್ ಬಿಸಿ ನೀರಿನೊಂದಿಗೆ ಮಿಶ್ರಣ ಮಾಡಿ ಆ ಜಾಗಕ್ಕೆ ಹಚ್ಚಿಕೊಂಡರೆ ಪರಿಣಾಮಕಾರಿಯಾಗುತ್ತದೆ. ಶಿಲೀಂಧ್ರ ಸೋಂಕಿನ ಲಕ್ಷಣಗಳು
ಕುತ್ತಿಗೆ, ಭುಜ, ಬೆನ್ನಿನ ಮೇಲೆ ದುಂಡಗಿನ ಅಥವಾ ಬಿಳಿ, ಕೆಂಪು, ಕಪ್ಪು, ಕಂದು ಬಣ್ಣದ ಆಕಾರರಹಿತ ಮಚ್ಚೆಗಳು, ಈ ಮಚ್ಚೆಗಳಲ್ಲಾಗುವ ತುರಿಕೆ, ತೊಡೆ ಸಂಧಿ, ಕಂಕಳು, ಕೈ, ಕಾಲು ಬೆರಳಿನ ಸಂಧಿ, ಸ್ತನಗಳ ಕೆಳಭಾಗದಲ್ಲಿ, ಸೊಂಟದ ಭಾಗದಲ್ಲಿ ಚರ್ಮದ ಬಣ್ಣ ಬದಲಾಗುವುದು, ಉರಿ, ತುರಿಕೆ ಉಂಟಾಗುವುದು ಮುಂತಾದವು ಫಂಗಸ್ ಸೋಂಕಿನ ಲಕ್ಷಣವಾಗಿವೆೆ. ಇಂತಹ ಲಕ್ಷಣಗಳು ಕಂಡು ಬಂದರೆ ತಡ ಮಾಡದೇ, ವೈದ್ಯರಲ್ಲಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೋಂಕನ್ನು ನಿರ್ಲಕ್ಷé ಮಾಡಿದರೆ ಮುಂದೆ ಜೀವಕ್ಕೂ ಅಪಾಯವಾಗುವ ಸನ್ನಿವೇಶಗಳು ಎದುರಾಗುತ್ತವೆ. ಸ್ವತ್ಛತೆ ಅಗತ್ಯ
ತೇವಾಂಶ ಅಧಿಕವಾಗಿರುವ ಪ್ರದೇಶಗಳಲ್ಲಿ ಶಿಲೀಂಧ್ರ ಸೋಂಕು ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು. ಶ್ವಾಸಕೋಶ, ಮೆದುಳಿಗೆ ಈ ಸೋಂಕು ತಗುಲಿದರೆ ಅಪಾಯಕಾರಿ. ಅತಿಯಾಗಿ ಶಿಲೀಂಧ್ರ ಸೋಂಕುಗಳು ಕಾಣಿಸಿಕೊಳ್ಳುವುದು ಚರ್ಮದ ಕಾಯಿಲೆಗಳ ಮುಖಾಂತ. ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವವರು, ಮಧುಮೇಹಿಗಳು ಜಾಗ್ರತೆ ವಹಿಸಬೇಕು. ಸ್ವತ್ಛತೆಯೆಡೆಗೆ ಜಾಸ್ತಿ ಗಮನ ಕೊಡಬೇಕು. ಸಣ್ಣ ಲಕ್ಷಣ ಕಂಡು ಬಂದರೂ ವೈದ್ಯರನ್ನು ಸಂಪರ್ಕಿಸಬೇಕು.
– ಡಾ| ನವೀನ್‌ಚಂದ್ರ,ವೈದ್ಯರು -ಧನ್ಯಾ ಬಾಳೆಕಜೆ