Advertisement

ಅಪಾಯ ಆಹ್ವಾನಿಸುತ್ತಿರುವ ರಸ್ತೆ ಅಂಚಿನ ಏರುತಗ್ಗು

10:12 PM Nov 09, 2019 | Team Udayavani |

ಮಂಗಳೂರು ನಗರವೂ ಸ್ಮಾರ್ಟ್‌ ಸಿಟಿಯಾಗಲು ಅಣಿಯಾಗುತ್ತಿದೆ. ರಸ್ತೆಗಳು ಸ್ಮಾರ್ಟ್‌ ಆಗಲಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಸ್ಮಾರ್ಟ್‌ರಸ್ತೆಗಳ ಕಾಮಗಾರಿಗಳು ಯಾವಾಗ ಆರಂಭವಾಗುತ್ತವೆ. ಜನರ ಉಪಯೋಗಕ್ಕೆ ಯಾವಾಗ ಸಿಗುತ್ತದೆ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.

Advertisement

ಸದ್ಯ ನಗರದ ಬಹುತೇಕ ರಸ್ತೆಗಳ ಅಂಚಿನ ಏರುತಗ್ಗುಗಳ ಸಮಸ್ಯೆ ಮಾತ್ರ ವಾಹನ ಸವಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಈ ಬಗ್ಗೆ ತಿಳಿದಿದ್ದರೂ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ನಗರದ ಜನತೆ ಕಷ್ಟ ಅನುಭವಿಸು ವಂತಾಗುತ್ತಿದೆ. ಒಂದೆಡೆ ಮಳೆ ಸುರಿದ ಪರಿಣಾಮ ಹದಗೆಟ್ಟಿರುವ ರಸ್ತೆಗಳಲ್ಲಿ ವಾಹನ ಚಲಾಯಿಸುವ ಅನಿವಾರ್ಯತೆ ವಾಹನ ಸವಾರದ್ದಾಗಿದೆ. ಇನ್ನೊಂದೆಡೆ ಅವೈಜ್ಞಾನಿಕ ಕಾಮಗಾರಿಗಳಿಂದ ತೊಂದರೆ ಅನುಭವಿಸುವ ಸ್ಥಿತಿ ಕೂಡ ಎದುರಾಗಿದೆ.

ನಗರದ ಕೆಲವು ರಸ್ತೆಗಳಲ್ಲಿ ಓಡಾಡಬೇಕಾದರೆ ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ನಗರದ ಟಿಎಂಎ ಪೈ ಸಭಾಂಗಣದ ಮುಂಭಾಗ, ಬಿಜೈ ಮುಖ್ಯ ರಸ್ತೆ, ಯೆಯ್ನಾಡಿ ರಸ್ತೆ, ಕಾಪಿಕಾಡ್‌, ಲೇಡಿಹಿಲ್‌, ಅಶೋಕನಗರ ಸಹಿತ ಬಹುತೇಕ ಭಾಗಗಳಲ್ಲಿ ರಸ್ತೆ ಅಂಚು ಹಾಗೂ ರಸ್ತೆ ಬದಿಯ ನಡುವೆ ಇರುವ ಅಂತರ ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದಿದೆ. ರಸ್ತೆ ಕಾಂಕ್ರೀಟ್‌ ಮಾಡಿದ ಸಂದರ್ಭದಲ್ಲಿ ಅದರ ಅಂಚುಗಳಿಗೆ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದರಿಂದ ಈಗ ಜನರಿಗೆ ಸಮಸ್ಯೆ ಎದುರಾಗಿದೆ. ಕೆಲವೆಡೆ ರಸ್ತೆ ಬದಿಗಳಲ್ಲಿ ಆಳವಾದ ಗುಂಡಿಗಳಿದ್ದು, ರಸ್ತೆಯ ಬದಿಗೆ ಯಾವುದೇ ತಡೆ ಇಲ್ಲದೆ ಇರುವುದರಿಂದ ಸ್ವಲ್ಪ ಆಯಾ ತಪ್ಪಿದರೂ ಆ ಗುಂಡಿಗೆ ವಾಹನಗಳು ಬಿದ್ದು, ಅಪಾಯಗಳಾಗುವ ಸಾಧ್ಯತೆ ಇದೆ. ಅಧಿಕಾರಿಗಳ ಬೇಜಾವಾಬ್ದಾರಿಯಿಂದ ವಾಹನ ಸವಾರರ ಜೀವಕ್ಕೆ ಕುತ್ತು ತಂದುಕೊಳ್ಳುವ ಭಯ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next