ಉಡುಪಿ: ಜಿಲ್ಲೆಯಲ್ಲಿ ಮಲೇರಿಯಾ ಜ್ವರದ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗು ತ್ತಿದ್ದರೂ ನಿರೀಕ್ಷೆಯಷ್ಟು ಕಡಿಮೆಯಾ ಗಿಲ್ಲ. ಇದೇ ವೇಳೆ ಡೆಂಗ್ಯೂ ಒಂದೇ ಪ್ರಮಾಣ ದಲ್ಲಿ ಏರಿಳಿತ ಕಾಣುತ್ತಿದೆ.
ಮಲೇರಿಯಾ ಪ್ರಮಾಣ ಲೆಕ್ಕ ಹಾಕುವುದು ಜನವರಿಯಿಂದ ಡಿಸೆಂಬರ್ ಕೊನೆಯವರೆಗೆ. 2012ರಲ್ಲಿ 2,217, 2013ರಲ್ಲಿ 2,205, 2014ರಲ್ಲಿ 1,639, 2015ರಲ್ಲಿ 1,366, 2016ರಲ್ಲಿ 1,168, 2017ರಲ್ಲಿ 513, 2018ರಲ್ಲಿ 221, 2019ರಲ್ಲಿ 150 ಪ್ರಕರಣ ವರದಿ ಯಾಗಿತ್ತು. 2020ರಲ್ಲಿ ನೂರಕ್ಕೂ ಕಡಿಮೆ ಪ್ರಕರಣಗಳಿರಬಹುದು ಎಂದು ಆರೋಗ್ಯ ಇಲಾಖೆ ಅಂದಾಜಿಸಿದ್ದರೂ 126 ಪ್ರಕರಣಗಳಾದವು.
2020ರಲ್ಲಿ ಮಲೇರಿಯಾ ಪ್ರಕರಣ ಹೆಚ್ಚು ಕಂಡು ಬಂದಿರುವುದು ಉಡುಪಿ ಬಸ್ ನಿಲ್ದಾಣ ಆಸುಪಾಸಿನಲ್ಲಿ. ಮುಖ್ಯವಾಗಿ ಬಸ್ ನಿಲ್ದಾಣದಲ್ಲಿ ಮಲಗಿರು ವವರಿಗೆ, ಮಲ್ಪೆ ಆಸುಪಾಸಿನಲ್ಲಿರುವ ಮೀನು ಕಟ್ಟಿಂಗ್ ಕಾರ್ಖಾನೆ, ಮೀನು ಗಾರಿಕೆ ನಡೆಯುವ ಸ್ಥಳಗಳಲ್ಲಿ ಇದು ಹೆಚ್ಚಾಗಿ ಕಂಡುಬಂದಿದೆ. ಕಟ್ಟಡ ನಿರ್ಮಾಣದ ನಿವೇಶನಗಳಲ್ಲಿ ಝಾರ್ಖಂಡ್, ಒಡಿಶಾ ಮೊದಲಾದ ರಾಜ್ಯಗಳಿಂದ ಕಾರ್ಮಿಕರು ನೆಲೆಸಿರುತ್ತಾರೆ. ಝಾರ್ಖಂಡ್, ಒಡಿಶಾಗಳಲ್ಲಿ ಮಲೇರಿಯಾ ಪ್ರಕರಣ ಹೆಚ್ಚಿಗೆ ಇರುವುದರಿಂದ ಅಲ್ಲಿಂದ ಬರುವಾಗಲೇ ಮಲೇರಿಯಾ ಸೋಂಕು ತಂದಿರುತ್ತಾರೆ.
ಡೆಂಗ್ಯೂ ಜ್ವರದ ಪ್ರಕರಣ ಮಾತ್ರ ಏರಿಳಿತಗಳು ಇವೆ. 2012ರಲ್ಲಿ 126, 2013ರಲ್ಲಿ 140, 2014ರಲ್ಲಿ 130, 2015ರಲ್ಲಿ 331, 2016ರಲ್ಲಿ 600, 2017ರಲ್ಲಿ 383, 2018ರಲ್ಲಿ 228, 2019ರಲ್ಲಿ 280 ಪ್ರಕರಣಗಳು ದಾಖಲಾಗಿದ್ದರೆ 2020ರಲ್ಲಿ 139 ಪ್ರಕರಣಗಳು ದಾಖಲಾದವು. ಬಸ್ ನಿಲ್ದಾಣದಲ್ಲಿ ಮಲಗಿರುವ ಮಲೇರಿಯಾ ಸೋಂಕಿತರನ್ನು ಗುರುತಿಸಿ ಔಷಧೋಪಚಾರ ನೀಡೋಣವೆಂದರೆ ಇವರನ್ನು ಹುಡುಕುವುದೂ ಕಷ್ಟ. ಮೂರು ದಿನ ನಿರಂತರವಾಗಿ ಔಷಧಿ ತೆಗೆದುಕೊಳ್ಳಬೇಕು. ಮನೆ ಇದ್ದು ವಾಸಿಸುವವರಿಗೆ ಚಿಕಿತ್ಸೆ ನೀಡುವುದು ಸುಲಭ. ನಿರ್ಗತಿಕರಿಗೆ, ಮನೆ ಇಲ್ಲದೆ ಒಂದೊಂದು ಕಡೆ ಸಂಚರಿಸುವವರಿಗೆ ಚಿಕಿತ್ಸೆ ನೀಡುವುದು ಕಷ್ಟ. ಡೆಂಗ್ಯೂ ಬಹಳ ಬೇಗ ಹರಡುತ್ತದೆ. ಮಲೇರಿಯಾವನ್ನು ನಿಯಂತ್ರಿಸಿದಂತೆ ಡೆಂಗ್ಯೂವನ್ನು ನಿಯಂತ್ರಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|ಪ್ರಶಾಂತ ಭಟ್.
ಡೆಂಗ್ಯೂ ಹರಡುವಿಕೆ
ಡೆಂಗ್ಯೂ ವೈರಸ್ ಬಹಳ ಕಡಿಮೆ ಸಮಯದಲ್ಲಿ ಹರಡುತ್ತವೆ. ಎಲ್ಲ ಕಡೆ ಡೆಂಗ್ಯೂ ಜ್ವರದ ಬಾಧೆ ಇರುವುದರಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವುದರಿಂದ, ಹಗಲು ವೇಳೆಯೂ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಹರಡು ತ್ತದೆ. ಅತಿ ಕಡಿಮೆ ಪ್ರಮಾಣದ ನೀರು ನಿಂತರೂ ಈ ಸೊಳ್ಳೆ ಉತ್ಪಾದನೆಯಾಗುತ್ತವೆ. ಇದಕ್ಕೆ ಹೂಕುಂಡ, ಪ್ಲಾಸ್ಟಿಕ್ ತೊಟ್ಟಿ, ಗೆರಟೆ ಚಿಪ್ಪಿನಲ್ಲಿ ನಿಂತ ನೀರೂ ಸಾಕಾಗುತ್ತದೆ.
ಕಾರ್ಯಕರ್ತರ ಶ್ರಮ ಕಾರಣ
ಮಲೇರಿಯಾ ಪ್ರಕರಣ ಗಣನೀಯವಾಗಿ ಕಡಿಮೆಯಾಗಲು ಆರೋಗ್ಯ ಇಲಾಖೆಯ ಕಾರ್ಯಕರ್ತರ ಶ್ರಮ ಮುಖ್ಯ ಕಾರಣ. ಆದಷ್ಟು ಶೀಘ್ರ ಇದನ್ನು ಪತ್ತೆ ಹಚ್ಚುವುದು, ಚಿಕಿತ್ಸೆ ನೀಡುವುದರಿಂದ ಕಡಿಮೆಯಾಗಿದೆ. ಮುಖ್ಯವಾಗಿ ಬಸ್ ನಿಲ್ದಾಣದಲ್ಲಿ ಮಲಗಿರುವವರನ್ನು ಗುರುತಿಸಿ ಔಷಧೋಪಚಾರ ನೀಡುವುದು ಕಷ್ಟವಾಗುತ್ತಿದೆ. ಇವರು ಒಂದು ದಿನ ಸಿಕ್ಕಿದರೆ ಇನ್ನೊಂದು ದಿನ ಸಿಗುವುದಿಲ್ಲ. ಡೆಂಗ್ಯೂ ಜ್ವರವನ್ನು ಹತೋಟಿಗೆ ತರುವುದು ಸುಲಭವಲ್ಲ. ಇದರ ವೈರಸ್ ಬಹಳ ವೇಗದಲ್ಲಿ ಹರಡುತ್ತದೆ.
– ಡಾ| ಪ್ರಶಾಂತ ಭಟ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಉಡುಪಿ.