Advertisement
ಜಾಗತಿಕ ತಾಪಮಾನ ಏರಿಕೆ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಜೀವ ಸಂಕುಲವೇ ಸಮಸ್ಯೆ ಎದುರಿಸುವಂತಾಗಿದೆ. 2010-19ರ ದಶಕದಲ್ಲಿ ಅತೀ ಹೆಚ್ಚು ಜಾಗತಿಕ ತಾಪಮಾನ ಏರಿಕೆಯಾಗಿರುವುದು ಇತಿಹಾಸದಲ್ಲಿಯೇ ಮೊದಲು. ಇದು ಅಪಾಯಕಾರಿ ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ಬಗ್ಗೆ ಅರಿವು ಕೂಡ ಮೂಡಿಸಲಾಗುತ್ತಿದೆ.
ಮನುಷ್ಯ ತನ್ನ ವಿಲಾಸಿ ಜೀವನಕ್ಕಾಗಿ ಇಡೀ ಪರಿಸರ ವ್ಯವಸ್ಥೆಯನ್ನು ಬಲಿ ಕೊಟ್ಟಿರುವುದು ಜಾಗತಿಕ ತಾಪಮಾನ ಏರಿಕೆಗೆ ಪ್ರಥಮ ಕಾರಣವಾಗಿದೆ. ಇನ್ನು ಕೈಗಾರಿಕೆಗಳಿಂದ ವಿಷಾನಿಲ ಬಿಡುಗಡೆ, ಪರಿಸರ ನಾಶದಿಂದಾಗಿ ಕೂಡ ತಾಪಮಾನ ಏರುತ್ತಿದೆ.
Related Articles
ಜಾಗತಿಕ ತಾಪಮಾನದಿಂದಾಗಿ ಇಂದು ದೇಶದ ಕೃಷಿ ಕ್ಷೇತ್ರವೂ ನೇರ ಪರಿಣಾಮ ಅನುಭವಿಸುತ್ತಿದೆ. ಪ್ರಕೃತಿಯ ಅಸಮತೋಲನದಿಂದ ಅತಿವೃಷ್ಟಿ-ಅನಾವೃಷ್ಟಿಯಾಗಿ ಕೃಷಿ ಕ್ಷೇತ್ರ ಹಿನ್ನಡೆ ಅನುಭವಿಸುತ್ತದೆ.
Advertisement
ಪರಿಹಾರವೇನು?ಜಾಗತಿಕ ತಾಪಮಾನ ಇಳಿಕೆ ಮಾಡಲು ವಿಶ್ವಸಂಸ್ಥೆ ಸಹಿತ ಎಲ್ಲ ದೇಶಗಳೂ ಕೂಡ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿವೆ. ಪರಿಸರ ಇದ್ದರೆ ನಾವು ಎಂಬ ಪ್ರಜ್ಞಾಪೂರ್ವಕ ತಿಳಿವಳಿಕೆಯಿಂದ ಈ ಕ್ರಮಕ್ಕೆ ಹಲವು ದೇಶಗಳು ಕೈಜೋಡಿಸಿವೆ. ಪರಿಸರವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಿವೆ. ಅಲ್ಲದೇ
ಸೌರಶಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ಯಾರಿಸ್ ಒಪ್ಪಂದವೇ ಪರಿಹಾರ
ಕೈಗಾರಿಕೆ ಮತ್ತು ವಾಹನಗಳು ಹೊರಸೂಸುವ ಇಂಗಾಲದ ಡೈ ಆಕ್ಸೆ„ಡ್ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ 2015ರಲ್ಲಿ ಹಲವು ದೇಶಗಳು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದವು. ನವೀಕರಿಸಲಾಗದ ಇಂಧನಗಳನ್ನು ಹೊರತುಪಡಿಸಿ, ನವೀಕರಿಸಬಹುದಾದ ಇಂಧನಗಳ ಬಳಕೆಗೆ ಈ ಒಪ್ಪಂದದಲ್ಲಿ ಸಲಹೆ ನೀಡಲಾಗಿದೆ. ಆದರೆ ಈ ಒಪ್ಪಂದವನ್ನು ಅದೆಷ್ಟು ರಾಷ್ಟ್ರಗಳು ಸರಿಯಾಗಿ ಪಾಲಿಸುತ್ತಿವೆ ಎಂಬುದು ಯಕ್ಷ ಪ್ರಶ್ನೆ. ಈ ಒಪ್ಪಂದದಿಂದ ಅಮೆರಿಕ ಈಗಾಗಲೇ ಹೊರಬಂದಿದೆ.